newsfirstkannada.com

ಕೋಳಿ ಫಾರ್ಮ್​​ನಲ್ಲಿಟ್ಟಿದ್ದ ಬೋನಿಗೆ ಬಿದ್ದ ಹೆಣ್ಣು ಚಿರತೆ.. ಗ್ರಾಮಸ್ಥರೆಲ್ಲ ಫುಲ್ ಖುಷ್..!

Share :

Published February 3, 2024 at 11:58am

    ಹಲವಾರು ದಿನಗಳಿಂದ ಗ್ರಾಮದ ಸುತ್ತಮುತ್ತ ಓಡಾಡ್ತಿದ್ದ ಚಿರತೆ

    ಭಯದಲ್ಲೇ ಹೊಲ, ಗದ್ದೆಗಳಿಗೆ ಹೋಗಿ ಬರುತ್ತಿದ್ದ ಗ್ರಾಮದ ರೈತರು

    ಸಾಕು ಪ್ರಾಣಿಗಳ ಮೇಲೆ ಅಟ್ಯಾಕ್ ಮಾಡಿ ಗಾಸಿಗೊಳಿಸಿದ್ದ ಚಿರತೆ

ಮೈಸೂರು: ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಕೋಳಿ ಫಾರ್ಮ್​​ನಲ್ಲಿಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲೂಕಿನ ಜಯಪುರ ಹೋಬಳಿಯ ದಾರಿಪುರ ಗ್ರಾಮದಲ್ಲಿ ನಡೆದಿದೆ.

ದಾರಿಪುರ ಗ್ರಾ‌ಮ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರಲ್ಲಿ ಈ ಚಿರತೆ ಭಯ ಹುಟ್ಟಿಸಿತ್ತು. ಹಲವಾರು ದಿನಗಳಿಂದ ಈ ಭಾಗದಲ್ಲಿ ಅಡ್ಡಾಡುತ್ತ ರೈತರ ಸಾಕು ಪ್ರಾಣಿಗಳ ಮೇಲೆ‌ ದಾಳಿ ನಡೆಸುತ್ತಿತ್ತು. ಇದರಿಂದ ಭಯಭೀತರಾಗಿದ್ದ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

ಇದರಿಂದ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಬಳಿಕ ದಾರಿಪುರ ಗ್ರಾ‌ಮದ ಕೋಳಿ ಫಾರ್ಮ್​​ನಲ್ಲಿ ಬೋನ್​ ಇಟ್ಟಿದ್ದರು. ಸಿಬ್ಬಂದಿ ಯೋಜನೆಯಂತೆ 2 ವರ್ಷದ ಹೆಣ್ಣು ಚಿರತೆ ಸದ್ಯ ಬೋನಿಗೆ ಬಿದ್ದಿದ್ದು ಗ್ರಾಮಸ್ಥರೆಲ್ಲ ನಿಟ್ಟುಸಿರು ಬಿಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದು ದೂರದ ಅರಣ್ಯಕ್ಕೆ ಸೆರೆ ಸಿಕ್ಕಿರುವ ಚಿರತೆ ಬಿಡಲು ರವಾನೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಳಿ ಫಾರ್ಮ್​​ನಲ್ಲಿಟ್ಟಿದ್ದ ಬೋನಿಗೆ ಬಿದ್ದ ಹೆಣ್ಣು ಚಿರತೆ.. ಗ್ರಾಮಸ್ಥರೆಲ್ಲ ಫುಲ್ ಖುಷ್..!

https://newsfirstlive.com/wp-content/uploads/2024/02/MYS_CHEETHA.jpg

Load More