Advertisment

ಜನಪ್ರಿಯ ಬಿರಿಯಾನಿ ಹೌಸ್ ಹೋಟೆಲ್​​ಗೆ ಬೆಂಕಿ.. ಮಾಲೀಕನಿಗೆ ಲಕ್ಷ, ಲಕ್ಷ ರೂಪಾಯಿ ನಷ್ಟ

author-image
Bheemappa
Updated On
ಜನಪ್ರಿಯ ಬಿರಿಯಾನಿ ಹೌಸ್ ಹೋಟೆಲ್​​ಗೆ ಬೆಂಕಿ.. ಮಾಲೀಕನಿಗೆ ಲಕ್ಷ, ಲಕ್ಷ ರೂಪಾಯಿ ನಷ್ಟ
Advertisment
  • ಹೋಟೆಲ್​​ನಲ್ಲಿದ್ದ ವಸ್ತುಗಳೆಲ್ಲ ಬೆಂಕಿಯಿಂದ ಸುಟ್ಟು ಹೋಗಿವೆ
  • ಅಗ್ನಿ ಅವಘಡದಿಂದಾಗಿ ಹೋಟೆಲ್​​ ಮಾಲೀಕನಿಗೆ ಭಾರೀ ನಷ್ಟ
  • ಬೆಂಕಿಯಿಂದ ಬಿರಿಯಾನಿ ಹೌಸ್ ಸಂಪೂರ್ಣ ಸುಟ್ಟು ಕರಕಲು

ತುಮಕೂರು: ಬಿರಿಯಾನಿ ಹೋಟೆಲ್​​ನಲ್ಲಿ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಘಟನೆಯು ನಗರದ ಗಂಗೋತ್ರಿ ರಸ್ತೆಯಲ್ಲಿ ನಡೆದಿದೆ.

Advertisment

ಗಂಗೋತ್ರಿ ರಸ್ತೆಯಲ್ಲಿರುವ ಬಿರಿಯಾನಿ ಹೌಸ್‌ ಹೋಟೆಲ್​​ನಲ್ಲಿ ಅಡುಗೆ ಅನಿಲ ಸೋರಿಕೆಯಾಗಿದೆ. ಇದರಿಂದ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ನಷ್ಟವಾಗಿದೆ. ಬೆಂಕಿಯ ಕೆನ್ನಾಲಿಗೆ ಬಿರಿಯಾನಿ ಹೌಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮಳಿಗೆಯ ನೆಲ ಮಹಡಿಯಲ್ಲಿದ್ದ ಸಾಮಗ್ರಿಗಳು ಬೆಂಕಿಯಿಂದ ಸುಟ್ಟು ಹೋಗಿವೆ. ಸುಮಾರು 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಲೆ ಬಾಳುವ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

publive-image

ಇದನ್ನೂ ಓದಿ:ರಾಡ್‌ನಿಂದ ‘ಕೈ’ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ.. ವೋಟಿಂಗ್ ಮುಗೀತಿದ್ದಂತೆ ಹಾಸನ ಜಿಲ್ಲೆಯಲ್ಲಿ ಏನಾಯಿತು?

ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment