newsfirstkannada.com

ಬೆಂಗಳೂರಿನ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಮೂವರ ಸಜೀವ ದಹನ, ಐವರ ಸ್ಥಿತಿ ಗಂಭೀರ; ಅಸಲಿಗೆ ನಡೆದಿದ್ದೇನು?

Share :

Published February 18, 2024 at 8:14pm

Update February 18, 2024 at 8:15pm

  ರಾಮಸಂದ್ರದ ಮನೆಯೊಂದರ ಸಮೀಪ ಭಯಾನಕ ಸ್ಫೋಟ

  ಪರ್ಫ್ಯೂಮ್‌ ಫಿಲ್ಲಿಂಗ್ ವೇಳೆ ಬೆಂಕಿ ಸ್ಫೋಟಗೊಂಡಿರೋ ಶಂಕೆ

  ಐದು ಮಂದಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ

ಬೆಂಗಳೂರು: ರಾಮಸಂದ್ರದ ಮನೆಯೊಂದರ ಸಮೀಪ ಸಂಭವಿಸಿರೋ ಭಯಾನಕ ಸ್ಫೋಟ ಮೂವರನ್ನ ಬಲಿ ಪಡೆದಿದೆ. ಹೊತ್ತಿ ಉರಿದ ಬೆಂಕಿಗೆ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಾ ಇದ್ದ ಮೂವರು ಸಜೀವವಾಗಿ ದಹನವಾಗಿದ್ದಾರೆ. ಬೆಂಕಿ ಬಿದ್ದ ತಕ್ಷಣ ಅಗ್ನಿಯ ಜ್ವಾಲೆ ಇಡೀ ಅಂಗಡಿಯನ್ನು ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ಒಳಗಿದ್ದ ಸಿಬ್ಬಂದಿಗಳು ಹೊರಗೆ ಬರಲು ಆಗದೇ ಮೃತಪಟ್ಟಿದ್ದಾರೆ.

ಬೆಂಕಿಗೆ ಆಹುತಿಯಾಗಿರುವ ಪರ್ಫ್ಯೂಮ್ ಫ್ಯಾಕ್ಟರಿಗೆ ಕುಂಬಳಗೋಡು ಪೊಲೀಸರು ಭೇಟಿ ನೀಡಿದ್ದು, ಮೃತರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮನೆಯೊಂದರಲ್ಲಿ ಪರ್ಫ್ಯೂಮ್‌ ಕೆಮಿಕಲ್ ಫಿಲ್ಲಿಂಗ್ ಮಾಡ್ತಾ ಇದ್ದರು. ಒಟ್ಟು 8 ಜನ ಸಿಬ್ಬಂದಿ ಕೆಲಸ ಮಾಡ್ತಾ ಇದ್ದರು. ಪರ್ಫ್ಯೂಮ್‌ ಫಿಲ್ಲಿಂಗ್ ವೇಳೆ ಬೆಂಕಿ ಸ್ಫೋಟಗೊಂಡಿದ್ದು ಇಡೀ ಮನೆಯನ್ನು ಆವರಿಸಿದೆ. ಈ ದುರ್ಘಟನೆಯಲ್ಲಿ ಮೂವರು ಸಜೀವ ದಹನವಾಗಿದ್ದರೆ, ಉಳಿದ ಐವರು ಹೊರಗಡೆ ಓಡಿ ‌ಬಂದಿದ್ದಾರೆ.

ಬೆಂಕಿಯಲ್ಲಿ ಸಾವನ್ನಪ್ಪಿದ ಮೂವರ ಮೃತದೇಹಗಳನ್ನು ಆರ್.ಆರ್.ನಗರ ಆಸ್ಪತ್ರೆಗೆ ಹಾಗೂ ಗಾಯಗೊಂಡ ಐವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಾಯಾಳುಗಳನ್ನ ಅಲ್ಲಾಬಕ್ಷು, ಅಫ್ರೋಜ್, ರಿಯಾಜ್, ಸಾಧಿಕ್, ಇಮ್ರಾನ್ ಎಂದು ಗುರುತಿಸಲಾಗಿದೆ. ಗಾಯಗೊಂಡವರ ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗಿದೆ.

ಗಾಯಗೊಂಡವರಲ್ಲಿ 7 ನೇ ತರಗತಿ ಓದುತ್ತಿದ್ದ ಬಾಲಕನೂ ಇದ್ದು ಗಾಯಾಳು ಅರ್ಬಾಜ್ ತಂದೆ ಅಬ್ದಲ್ ಕಣ್ಣೀರಿಟ್ಟಿದ್ದಾರೆ. ನನಗೆ ಈಗ ಮಾಹಿತಿ ಗೊತ್ತಾಯ್ತು. ನನ್ನ ಮಗ ಸ್ಕೂಲ್‌ಗೆ ಹೋಗ್ತಿದ್ದ. ನಾವು ಕೆಲಸಕ್ಕೆ ಕಳುಹಿಸೋದಿಲ್ಲ. ಯಾರು ಕರೆದುಕೊಂಡು ಬಂದಿದ್ದಾರೆ ಅಂತ ಗೊತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಭೀಕರ ದುರಂತ.. ಮನೆಯಲ್ಲಿ ಬೆಂಕಿ ಬಿದ್ದು ಮೂವರು ಸಜೀವ ದಹನ; ಆಗಿದ್ದೇನು?

ಪರ್ಫ್ಯೂಮ್‌ ಫ್ಯಾಕ್ಟರಿಯಲ್ಲಿ ಆಗಿದ್ದೇನು?
ರಾಮಸಂದ್ರದಲ್ಲಿದ್ದ ಈ ಕಟ್ಟಡ ಗುಜರಿ ಅಂಗಡಿಯ ಮಾದರಿಯಲ್ಲಿದೆ. ಇಲ್ಲಿ ಅವಧಿ ಮೀರಿದ ಪರ್ಫ್ಯೂಮ್‌ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ. ಇಂದು ಸಂಜೆ ವೇಳೆ ಪರ್ಫ್ಯೂಮ್ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣವಾಗಿ ಬೆಂಕಿ ನಂದಿಸಿ ತೆರಳಿದ್ದಾರೆ.

ಮನೆ ಪರಿಶೀಲಿಸಿದ ಬಳಿಕ ಮಾಹಿತಿ ನೀಡಿದ ಎಸ್‌ಪಿ ಕಾರ್ತಿಕ್ ರೆಡ್ಡಿ, ಇವತ್ತು ಸಂಜೆ ಐದು ಗಂಟೆಗೆ ರಾಮಸಂದ್ರದಲ್ಲಿ ಬೆಂಕಿ ಅವಘಡವಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೂವರಲ್ಲಿ ಸಲೀಂ ಅನ್ನೋರ ಗುರುತು ಪತ್ತೆಯಾಗಿದೆ. ಉಳಿದ ಇಬ್ಬರ ಗುರುತು ಪತ್ತೆಯಾಗಿಲ್ಲ. ಐದು ಮಂದಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿದ್ದಾರೆ. ಗಾಯಾಳುಗಳಲ್ಲಿ ಒಬ್ಬ 15 ವರ್ಷದ ಅಪ್ರಾಪ್ತ ಹುಡುಗನಿದ್ದಾನೆ. ಮೇಲ್ನೋಟಕ್ಕೆ ಇಲ್ಲಿ ಪರ್ಫ್ಯೂಮ್ ಫಿಲ್ಲಿಂಗ್ ಮಾಡ್ತಿರೋದು ಕಂಡುಬಂದಿದೆ. FSLನವರು ವರದಿ ಕೊಟ್ಟ ಬಳಿಕ ಘಟನೆಗೆ ಕಾರಣ ಏನು ಅಂತ ಗೊತ್ತಾಗಬೇಕಿದೆ. ವಿಠಲ್ ಅನ್ನೋರ ಜಾಗ ಇದಾಗಿದ್ದು, ಸಲೀಂ ಅನ್ನೋ ವ್ಯಕ್ತಿ ಕಳೆದ ಒಂದು ತಿಂಗಳ ಹಿಂದಷ್ಟೆ ಇಲ್ಲಿ ಗೋಡೌನ್ ಆರಂಭಿಸಿದ್ದ. ಗೋಡೌನ್‌ನ ಚಿಕ್ಕ ಕೋಣೆಯಲ್ಲಿ ಮೂವರ ಶವ ಪತ್ತೆಯಾಗಿದ್ದು, ತನಿಖೆ ನಡೆಸಲಾಗ್ತಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಮೂವರ ಸಜೀವ ದಹನ, ಐವರ ಸ್ಥಿತಿ ಗಂಭೀರ; ಅಸಲಿಗೆ ನಡೆದಿದ್ದೇನು?

https://newsfirstlive.com/wp-content/uploads/2024/02/bng-fire.jpg

Load More