/newsfirstlive-kannada/media/post_attachments/wp-content/uploads/2025/05/justiceserved.jpg)
ಪಹಲ್ಗಾಮ್‌ನಲ್ಲಿ ಪ್ಯಾಂಟ್ ಬಿಚ್ಚಿಸಿ, ಕಲ್ಮಾ ಓದಲು ಹೇಳಿದ್ರು. ಹನಿಮೂನ್‌ಗೆ ಬಂದಿದ್ದ ಪತ್ನಿಯರ ಮುಂದೆ ಗಂಡನ ನಿರ್ದಯವಾಗಿ ಹತ್ಯೆ ಮಾಡಿದ್ರು. ನನ್ನನ್ನು ಕೊಲ್ಲು ಎಂದು ಬೇಡಿಕೊಂಡ ಮಹಿಳೆಯರಿಗೆ ಹೋಗಿ ಮೋದಿಗೆ ಹೇಳು ಎಂದಿದ್ದರು.
ಉಗ್ರರ ನರಮೇಧ ಕೋಟ್ಯಾನುಕೋಟಿ ಭಾರತೀಯರ ರಕ್ತ ಕುದಿಯುವಂತೆ ಮಾಡಿತ್ತು. 26 ಭಾರತೀಯರ ಉಗ್ರರ ನರಮೇಧಕ್ಕೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪಹಲ್ಗಾಮ್‌ನಲ್ಲಿ ಮಡಿದವರಿಗೆ ನ್ಯಾಯ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.
ಮೋದಿಗೆ ಹೋಗಿ ಹೇಳು ಅಂತ ಹೇಳಿದವರಿಗೆ ಭಾರತೀಯ ಸೇನೆ ತಕ್ಕ ಉತ್ತರ ಕೊಟ್ಟಿದೆ. ನಿನ್ನೆ ರಾತ್ರಿಯಿಂದ ಶುರುವಾದ ಆಪರೇಷನ್ ಸಿಂಧೂರ್‌ಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.
ಆಪರೇಷನ್ ಸಿಂಧೂರದ ಬಳಿಕ #justiceserved #Itoldmodi ಪೋಸ್ಟ್ ಹಾಗೂ ಟ್ಯಾಗ್‌ಗಳು ಎಲ್ಲೆಡೆ ವೈರಲ್ ಆಗುತ್ತಿದೆ.
ಆ ದಿನ ಪತಿಯೊಂದಿಗೆ ನನ್ನನ್ನು ಕೊಲ್ಲಿ ಎಂದಿದ್ದ ಅನೇಕ ಮಹಿಳೆಯರು ಭಾರತೀಯ ಸೇನೆಯ ಪ್ರತೀಕಾರಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ಪುಕ್ಕಲು ಪಾಕಿಸ್ತಾನಕ್ಕೆ ನಡುಕ.. ಅಣ್ವಸ್ತ್ರ ಹಾಕ್ತೀನಿ ಅಂತಾ ಹೆದರಿಸಿ ಈಗ ಬಣ್ಣ ಬದಲಿಸಿದ ರಕ್ಷಣಾ ಸಚಿವ
ನಿನ್ನನ್ನ ಕೊಲ್ಲಲ್ಲ ಮೋದಿಗೆ ಹೋಗಿ ಹೇಳು ಎಂದಿದ್ದ ಪಾಪಿಸ್ತಾನದ ಕ್ರಿಮಿಗಳ ನೆಲೆ ಧ್ವಂಸವಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ #Itoldmodi ಪೋಸ್ಟರ್ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ