/newsfirstlive-kannada/media/post_attachments/wp-content/uploads/2024/06/rajasimha-1.jpg)
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಮಾತಿದೆ. ಆದರೆ ಈಗಿನ ಕಾಲದಲ್ಲಿ, ಅದರಲ್ಲೂ ಬೆಂಗಳೂರಲ್ಲಿ ಸೈಟು, ಮನೆ ಕಟ್ಟೋದು ಅಷ್ಟು ಸುಲಭದ ಮಾತಲ್ಲ. ಹಾಗಿದ್ದರೂ ಸೂರು ಕಟ್ಟೋದೆಂದರೆ ದೊಡ್ಡದಾದ ಹೊರೆಯೊಂದನ್ನ ಹೊತ್ತಂತೆ. ಅದರೆ ಅಚ್ಚರಿಯ ಸಂಗತಿ ಎಂದರೆ ಬೆಂಗಳೂರಿನಲ್ಲಿ ಮನೆಯಲ್ಲ ಅರಮನೆಯನ್ನೇ ಕಟ್ಟಿ ಅದರಲ್ಲಿ ಎರಡು ಹಾರುವ ಕೋಣೆಯನ್ನು ನಿರ್ಮಿಸಿದ ಈ ವ್ಯಕ್ತಿಯ ಸಾಹಸಗಾಥೆಯನ್ನು ಕೇಳಲೇಬೇಕು.
ಇಸ್ರೋದ ಮಾಜಿ ವಿಜ್ಞಾನಿಯ ಮನೆ ನೋಡಿದ್ರಾ?
ರಾಜಸಿಂಹ (75). ಮೂಲತಃ ಬಳ್ಳಾರಿಯವರಾದ ಇವರು ಇಸ್ರೋದ ಮಾಜಿ ವಿಜ್ಞಾನಿ. 26 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ ವಿಆರ್​ಎಸ್​​ ತೆಗೆದುಕೊಂಡರು. ಅಬ್ದುಲ್​ ಕಲಾಂ, ಟಿ.ಎನ್​ ಶೇಷನ್​, ಯು.ಆರ್​ ರಾವ್, ಕಸ್ತೂರಿ ರಂಗನ್​ ಇವರ ಜೊತೆಗೆ ಕೆಲಸ ಮಾಡಿದ ಅನುಭವಿ. ಸದ್ಯ ಕೆಪಿಟಿಎಲ್​, ಎಮ್​ಎಸ್​ ರಾಮಯ್ಯದಲ್ಲಿ ಅಡ್ವೈಸರ್​ ಆಗಿ ಕೆಲಸ ಮಾಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/06/rajasimha.jpg)
ಭೂಮಿಗೆ ಸಂಪರ್ಕವಿಲ್ಲದ ಕೋಣೆ
ಮನೆಯನ್ನೇ 2ನೇ ಮಗ ಎಂದು ಹೇಳಿಕೊಳ್ಳುವ ರಾಜಸಿಂಹ ಬೆಂಗಳೂರಿನಲ್ಲೊಂದು ವಿಭಿನ್ನವಾದ ಸೂರನ್ನು ಕಟ್ಟಿದ್ದಾರೆ. ಮನೆಯೊಳಕ್ಕೆ ಗಾಳಿಯಲ್ಲಿ ತೇಲುವ ಎರಡು ಕೋಣೆಗಳನ್ನು ನಿರ್ಮಿಸಿದ್ದಾರೆ. ಇದನ್ನು ಹ್ಯಾಂಗಿಂಗ್​ ಕೋಣೆ ಎಂದು ಕರೆಯುತ್ತಾರೆ. ಭೂಮಿಗೆ ಸಂಪರ್ಕವಿಲ್ಲದೆ, ಮನೆಯ ಛಾವಣಿಯಿಂದ ನೇತಾಡಿದಂತೆ ಈ ಕೋಣೆಯನ್ನು ರಾಜಸಿಂಹರವರು ನಿರ್ಮಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/06/rajasimha-2.jpg)
ಗಿನ್ನೆಸ್​ ಬುಕ್​ ಆಫ್​ ರೆಕಾರ್ಡ್
50/80 ಸೈಟಿನಲ್ಲಿ ಮನೆ ನಿರ್ಮಿಸಿದ ರಾಜಸಿಂಹರವರು. 12 ವರ್ಷದಿಂದ ಈ ಮನೆಯಲ್ಲಿ ವಾಸವಿದ್ದಾರೆ. ಈ ಮನೆಯ ವಿಶೇಷತೆ ಕಂಡು ಅನೇಕ ಸಿನಿಮಾಗಳು, ಸೀರಿಯಲ್​ಗಳು ಇಲ್ಲಿ ಚಿತ್ರೀಕರಣವಾಗಿದೆ. ಇವಿಷ್ಟು ಮಾತ್ರವಲ್ಲ, ಈ ವಿಶೇಷ ಮನೆಗೆ ಲಿಮ್ಕಾ ಬುಕ್​ ಆಫ್​ ರೆಕಾರ್ಡ್​, ಗಿನ್ನೆಸ್​ ಬುಕ್​ ಆಫ್​ ರೆಕಾರ್ಡ್​ ಕೂಡ ಬಂದಿದೆ.
ಮನೆ ಕಟ್ಟಲು ಇದೇ ಕಾರಣ..
ಮುಖ್ಯ ಚುನಾವಣಾ ಆಯುಕ್ತರಾದ T N ಶೇಷನ್​ ಅವರ ಮನೆಯ ಪ್ಲಾನಿಂಗ್​, ಡಿಸೈನನ್ನು ರಾಜಸಿಂಹರವರು ಮಾಡಿದ್ದರು. ಗೃಹ ಪ್ರವೇಶದ ಸಮಯದಲ್ಲಿ T N ಶೇಷನ್​ರವನರು ರಾಜಸಿಂಹರವರಿಗೆ ಶಾಲು ಹಾಕಿ ಗೌರವಿಸಿದ್ದರು. ಈ ವಿಚಾರವನ್ನು ರಾಜಸಿಂಹರವರು ಮನೆಗೆ ಬಂದು ತಾಯಿ, ಹೆಂಡತಿ ಬಳಿ ಹೇಳಿಕೊಂಡಿದ್ದರಂತೆ. ಆದರೆ ಅದಕ್ಕೆ ತಾಯಿ ಮತ್ತು ಹೆಂಡತಿ ನಮಗೇನು ಅಚ್ಚರಿಯಾಗಿಲ್ಲ ನೀನು ಸ್ವಂತ ಮನೆಕಟ್ಟು ಆವಾಗ ಖುಷಿಯಾಗುತ್ತೆ ಎಂದು ಹೇಳಿದ್ದರಂತೆ.
ತಾಯಿ ಮತ್ತು ಹೆಂಡತಿ ಮಾತು ಆಲಿಸಿದ ಬಳಿಕ ರಾಜಸಿಂಹರವರು ನಾನು ಮನೆಯನ್ನು ಕಟ್ಟಿಸಿದರೆ ಅದು ಗಿನ್ನಿಸ್​ ಬುಕ್​ ಆಫ್​ ರೆಕಾರ್ಡ್​ನಲ್ಲಿ ಬರಬೇಕು. ಎಷ್ಟೋ ಶೂಟಿಂಗ್​ ನಡೆಯಬೇಕು ಅಂತ ಮನೆ ಕಟ್ಟಿಸುವೆ ಎಂದು ಹೇಳಿದ್ದರಂತೆ. ಆ ಬಳಿಕ ಯೋಜನೆ ಮಾಡಿ ವಿಶೇಷ ಮನೆಯನ್ನ ನಿರ್ಮಿಸಿದ್ದರು.
ಅಡಿಪಾಯ ಇಲ್ಲದ ಮನೆ
ಅಡಿಪಾಯ ಇಲ್ಲದೆ ಮನೆ ಕಟ್ಟಲು ಸಾಧ್ಯವಿಲ್ಲ. ಆದರೆ ರಾಜಸಿಂಹರವರು ಇದರ ಬಗ್ಗೆ ಯೋಚಿಸಿ ವಿಶೇಷವಾದ ಮನೆ ನಿರ್ಮಿಸಲು ಉಪಾಯ ಮಾಡುತ್ತಾರೆ. ಅದರಂತೆಯೇ ಡ್ರಾಯಿಂಗ್​ ಮಾಡಿ ಮಾಡ್ಯುಲ್​ ನಿರ್ಮಿಸಿ ಮನೆ ಕಟ್ಟುತ್ತಾರೆ.
ಮನೆಯಲ್ಲೊಂದು ಹಾರುವ ಕೋಣೆ
ರಾಜಸಿಂಹರವರು ನಿರ್ಮಿಸಿದ ಮನೆಯಲ್ಲಿ ಎರಡು ಹಾರುವ ಕೋಣೆಯನ್ನು ನಿರ್ಮಿಸಿದ್ದಾರೆ. ಒಂದು ಬಟನ್​ ಒತ್ತಿದರೆ ಸಾಕು ಕೋಣೆಯ ರೂಫ್​ ಹಾರಿ ಹೋಗುತ್ತದೆ. ಮತ್ತೊಂದು ಬಟನ್​ ಒತ್ತಿದರೆ ಕೋಣೆಯೇ ಆಕಾಶದೆತ್ತರಕ್ಕೆ ಹೋಗುತ್ತದೆ. ಅಚ್ಚರಿಯ ಸಂಗತಿ ಎಂದರೆ ರಾಜಸಿಂಹರವರ ಮನೆ ಜಗತ್ತಿಗೆ ಮೊದಲನೆಯದಂತೆ!.
ಸಿನಿಮಾ, ಶೂಟಿಂಗ್​​ಗೆ ಭಾರೀ ಫೇಮಸ್ಸು
ಪುನೀತ್​ ರಾಜ್​ಕುಮಾರ್​, ಶಿವರಾಜ್​ಕುಮಾರ್​ ಸಿನಿಮಾಗಳು ಈ ಮನೆಯಲ್ಲಿ ಚಿತ್ರೀಕರಣವಾಗಿದೆ. ಡಯಾನ ಹೌಸ್​ ಎಂಬ ಪೂರ್ತಿ ಸಿನಿಮಾ ಚಿತ್ರೀಕರಣಗೊಂಡಿದೆ. ಅಷ್ಟೇ ಏಕೆ ಅಸಂಭವ, ಅಶ್ವಿನಿ ನಕ್ಷತ್ರ ಸೀರಿಯಲ್​ ಕೂಡ ಇಲ್ಲಿ ಚಿತ್ರೀಕರಣಗೊಂಡಿದೆ.
ಸದಾ ಸಂಶೋಧನೆಯಲ್ಲಿ ತೊಡಗಿಸಿಕೊಂಡ ರಾಜಸಿಂಹ
ಸದಾ ಸಂಶೋಧನೆಯಲ್ಲಿ ತೊಡಗಿಸಿಕೊಂಡ ರಾಜಸಿಂಹರವರು ಮಳೆ ಬಂದಾಗ ಕ್ರಿಕೆಟ್​ ಮೈದಾನದ ಸುತ್ತ ನಿಲ್ಲುವ ನೀರನ್ನು 15 ನಿಮಿಷದಲ್ಲಿ ಪೂರ್ತಿಯಾಗಿ ಒಣಗಿಸಲು ಟೆಕ್ನಾಲಜಿಯನ್ನು ನಿರ್ಮಿಸಿದ್ದಾರೆ. ಮನೆಯಿಂದಲೇ ಮತ ಚಲಾಯಿಸುವಂತಹ ಸಾಧನವನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಆಟೋ ಮೇಲೆ ಹರಿದ ಕ್ರೇನ್.. ಡ್ರೈವರ್​ ಸಾವು
ಇನ್ನು ಕಳೆದ ತಿಂಗಳು ಪಾರ್ಕಿಂಗ್​ ಸಮಸ್ಯೆಗಾಗಿ ನಿರ್ಮಿಸಿದ ಟೆಕ್ನಾಲಜಿಯ ಪೇಟೆಂಟ್​ ಅನುಮೋದನೆ ಪಡೆದಿದೆ. ಕಡಲು ಕೊರೆತದ ಸಮಸ್ಯೆ ನೀಗಿಸಲು ತಯಾರಿಸಿದ ಟೆಕ್ನಾಲಜಿಯ ಪೇಟೆಂಟ್​ ಕೂಡ ಅನುಮೋದನೆ ಪಡೆದಿದೆ. ಮಹಿಳೆಯರಿಗಾಗಿ ಮೂತ್ರದ ಸೋಂಕು ತಡೆಗಟ್ಟಲು ಅಂಡರ್​ವೇರ್​ವೊಂದನ್ನು, ಜೊತೆಗೆ ಅವರ ರಕ್ಷಣೆಗಾಗಿ ‘ರಕ್ಷಕ್​’ ‘ಮಹಾರಕ್ಷಕ್’ ಎಂಬ ತಂತ್ರಜ್ನಾವನ್ನು​ ಕಂಡುಹಿಡಿದಿದ್ದಾರೆ.
ವಿಡಿಯೋ ಕೃಪೆ: ಕಲಾ ಮಾಧ್ಯಮ
ಮನೆ ನಿರ್ಮಿಸಲಾದ ಖರ್ಚು
ರಾಜಸಿಂಹರವರು ಈ ಮನೆ ನಿರ್ಮಿಸಲು 12 ವರ್ಷಗಳ ಹಿಂದೆ 2.25 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಗೃಹ ಪ್ರವೇಶ ಸಮಯದಲ್ಲಿ ಈ ವಿಜ್ಞಾನಿ ಮನೆ ನಿರ್ಮಿಸಲು ಹಣ ಹೇಗೆ ಹೊಂದಿಕೆ ಮಾಡಿದರು ಎಂಬ ಬಗ್ಗೆ ಬೋರ್ಡ್​ ಹಾಕಿದ್ದರಂತೆ. ಸದ್ಯ ಮನೆಗಾಗಿ ಮಾಡಿರುವ 25 ಲಕ್ಷ ರೂಪಾಯಿ ಸಾಲವನ್ನು ಮಗಳು ಮತ್ತು ರಾಜಸಿಂಹ ಕಟ್ಟುತ್ತಿದ್ದಾರೆ.
ವಿಶೇಷ ವರದಿ: ಹರ್ಷಿತ್​ ಅಚ್ರಪ್ಪಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us