Advertisment

ಹೆಂಡತಿಯನ್ನ ಕಟ್ಟಿ ಹಾಕಿ, ಗಂಡನಿಗೆ ಚೂರಿ ಇರಿತ​.. ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿದ ಗ್ಯಾಂಗ್

author-image
Bheemappa
Updated On
ಹೆಂಡತಿಯನ್ನ ಕಟ್ಟಿ ಹಾಕಿ, ಗಂಡನಿಗೆ ಚೂರಿ ಇರಿತ​.. ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿದ ಗ್ಯಾಂಗ್
Advertisment
  • ಮನೆಗೆ‌ ನುಗ್ಗಿ ಕುಟುಂಬಸ್ಥರಿಗೆ ಚೂರಿ ತೋರಿಸಿ ಬೆದರಿಸಿದ ಗ್ಯಾಂಗ್
  • ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ಗ್ಯಾಂಗ್​​ನಿಂದ ದರೋಡೆ
  • ಉದ್ಯಮಿ ಭುಜಕ್ಕೆ ಚೂರಿ ಹಾಕಿ ದರೋಡೆ ಮಾಡಿದ ಗ್ಯಾಂಗ್

ಮಂಗಳೂರು: ಉದ್ಯಮಿ ಒಬ್ಬರಿಗೆ ಚೂರಿಯಿಂದ ಇರಿದು, ಅವರ ಪತ್ನಿಯನ್ನ ಕಟ್ಟಿ ಹಾಕಿ ಮನೆಯಲ್ಲಿನ ಹಣ, ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಮಂಗಳೂರು ಹೊರವಲಯದ ಪೆರ್ಮಂಕಿಯಲ್ಲಿ ನಡೆದಿದೆ.

Advertisment

ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ಭೀಕರ ಘಟನೆ.. ಎಲ್ರೂ ನೋಡ್​ ನೋಡ್ತಿದ್ದಂತೆ ಟೆರಸ್​ ಮೇಲಿನಿಂದ ಬಿದ್ದ ಮಹಿಳೆ

ಪೆರ್ಮಂಕಿಯ ಉದ್ಯಮಿ, ಸಿವಿಲ್ ಕಾಂಟ್ರಾಕ್ಟ್ ಆಗಿರುವ ಪದ್ಮನಾಭ ಕೊಟ್ಯಾನ್​ ಮನೆಯಲ್ಲಿ ದರೋಡೆ ಮಾಡಲಾಗಿದೆ. ಮಾಸ್ಕ್​ ಧರಿಸಿ ಇನ್ನೊವಾ ಕಾರಿನಲ್ಲಿ ಬಂದಿದ್ದ 8 ದುಷ್ಕರ್ಮಿಗಳು ಉದ್ಯಮಿ ಮನೆಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿದ್ದ ಕುಟುಂಬಸ್ಥರಿಗೆಲ್ಲ ಚೂರಿ ತೋರಿಸಿ ಬೆದರಿಸಿದ್ದಾರೆ. ಮನೆಯಲ್ಲಿದ್ದ ಉದ್ಯಮಿಯ ಭುಜಕ್ಕೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ನಂತರ ಅವರ ಪತ್ನಿಯನ್ನು ಕಟ್ಟಿಹಾಕಿ ದರೋಡೆ ಮಾಡಿದ್ದಾರೆ. ಮನೆಯಲ್ಲಿದ್ದ ಹಣ ಹಾಗೂ ಬೆಲೆ ಬಾಳುವ ಚಿನ್ನಾಭರಣಗಳನ್ನು ದರೋಡೆ ಮಾಡಿ ಗ್ಯಾಂಗ್ ಪರಾರಿಯಾಗಿದೆ.

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಡಿಕೆಶಿ ಸ್ಪರ್ಧೆ ಮಾಡಿದ್ರೆ ಸೋಲ್ತಾರಾ? ಕಾಂಗ್ರೆಸ್‌ ಪಕ್ಷದಲ್ಲೇ ಅಪಸ್ವರ; ಕಾರಣವೇನು?

Advertisment

publive-image

ಘಟನೆಯಲ್ಲಿ ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡ ಉದ್ಯಮಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ದರೋಡೆಕೋರರ ಚಹರೆ ಎಲ್ಲವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment