/newsfirstlive-kannada/media/post_attachments/wp-content/uploads/2024/10/Pakistan-Womens.jpg)
ಅಬ್ಬಾ.. ಕಲಿಯುಗದಲ್ಲಿ ಇಂಥಾ ಪರಮ ಪಾಪಿ ಮಕ್ಕಳು ಇರ್ತಾರಾ. ನಿಜಕ್ಕೂ ಬೆಚ್ಚಿ ಬೀಳುವ ಸಂಗತಿ ಇದು. ಮಗಳೇ ತನ್ನ ಮನೆಯಲ್ಲಿದ್ದ 13 ಮಂದಿಗೆ ಊಟದಲ್ಲಿ ವಿಷ ಹಾಕಿ ಸಾಯಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಇದು ನಿಜಕ್ಕೂ ಕ್ರೈಂ ಥ್ರಿಲ್ಲರ್ ಸಿನಿಮಾಗೂ ಮೀರಿದ ಕಥೆಯಾಗಿದೆ.
ಇದನ್ನೂ ಓದಿ: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರನ ಸಾವಿಗೆ ಬಿಗ್ ಟ್ವಿಸ್ಟ್; ಹನಿಟ್ರ್ಯಾಪ್ಗೆ ಬಲಿಯಾದ್ರಾ?
ಅಂದ ಹಾಗೆ ಈ ಕರುಣಾಜನಕ ಘಟನೆ ನಡೆದಿರೋದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ. ಈ ಪಾಪಿ ಯುವತಿ ತನ್ನ ಮನೆಯ 13 ಮಂದಿಗೆ ಊಟದಲ್ಲಿ ವಿಷ ಬೆರೆಸಿದ್ದಾಳೆ. ವಿಷದ ಊಟ ತಿಂದ ಮನೆಯವರೆಲ್ಲಾ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ.
ಕಳೆದ ಆಗಸ್ಟ್ 19ರಂದೇ ಈ ದಾರುಣ ಘಟನೆ ನಡೆದಿದ್ದು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಭಯಾನಕ ಸತ್ಯ ಬಯಲಾಗಿದೆ. ಮನೆಯವರನ್ನೆಲ್ಲಾ ಬಲಿ ಪಡೆದ ಯುವತಿನ್ನು ಬಂಧಿಸಲಾಗಿದೆ.
ಅಸಲಿಗೆ ಆಗಿದ್ದೇನು?
ಸಿಂಧ್ ಪ್ರಾಂತ್ಯದ ಖೈರ್ಪುರ್ ಬಳಿಯ ಹೈಬತ್ ಖಾನ್ ಬ್ರೋಹಿ ಗ್ರಾಮದಲ್ಲಿರುವ ಈ ಯುವತಿಗೆ ಒಬ್ಬ ಯುವಕನ ಮೇಲೆ ಪ್ರೀತಿಯಾಗಿದೆ. ಪ್ರೇಮಿಸಿದ ಹುಡುಗನನ್ನೇ ಮದುವೆಯಾಗುತ್ತೇನೆ ಎಂದು ಮನೆಯವರ ಜೊತೆ ಮಾತನಾಡಿದ್ದಾಳೆ. ಆದರೆ ಮನೆಯವರು ಯಾರು ಈ ಪ್ರೀತಿ ಮದುವೆಗೆ ಒಪ್ಪಿಕೊಂಡಿಲ್ಲ.
ಒಂದು ಸಾರಿ ಅಲ್ಲ ಮೂರ್ನಾಲ್ಕು ಬಾರಿ ಹುಡುಗಿ ತನ್ನ ಪ್ರಿಯತಮನ ಮದುವೆ ವಿಚಾರ ಪ್ರಸ್ತಾಪ ಮಾಡಿ ಮದುವೆಗೆ ಕೇಳಿಕೊಂಡಿದ್ದಾಳೆ. ಕೊನೆಗೆ ಮನೆಯವರು ಯಾರು ಮದುವೆಗೆ ಒಪ್ಪದ ಕಾರಣ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಮನೆಯವರಿಗೆ ವಿಷ ಹಾಕುವ ಪ್ಲಾನ್ ಮಾಡಿದ್ದಾರೆ.
ಇದನ್ನೂ ಓದಿ: ಭೀಕರ ಅಪಘಾತ.. KSRTC, ಬೈಕ್ ಮುಖಾಮುಖಿ ಡಿಕ್ಕಿ; ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು
ಮನೆಯಲ್ಲಿ ರೊಟ್ಟಿ ಅಡುಗೆ ಮಾಡಿದ ಹುಡುಗಿ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಊಟದಲ್ಲಿ ವಿಷ ಬೆರೆಸಿದ್ದಾಳೆ. ವಿಷದ ಊಟ ತಿಂದ ಮನೆಯವರೆಲ್ಲಾ ಅಸ್ವಸ್ಥರಾಗಿದ್ದು ಫುಡ್ ಪಾಯಿಸ್ಸನ್ ಇಂದ ಸಾವನ್ನಪ್ಪಿರಬಹುದು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಪೋಸ್ಟ್ ಮಾರ್ಟಂ ವರದಿ ಬಂದಾಗ ಊಟದಲ್ಲಿ ವಿಷ ಬೆರೆಸಿರುವುದು ಗೊತ್ತಾಗಿದೆ.
13 ಜನರ ಸಾವಿನ ತನಿಖೆ ನಡೆಸಿದಾಗ ಮನೆಯ ಮಗಳೇ ವಿಷ ಹಾಕಿ ಸಾಯಿಸಿದ್ದು ಖಚಿತವಾಗಿದೆ. ಗೋಧಿ ರೊಟ್ಟಿಯಲ್ಲಿ ವಿಷ ಹಾಕಿ ಸಾಯಿಸಿರೋ ಸತ್ಯ ಬಯಲಾಗಿದ್ದು, ತಾನು ಪ್ರೀತಿಸಿದವನ ಜೊತೆ ಮದುವೆಗೆ ಒಪ್ಪಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಈ ಹತ್ಯಾಕಾಂಡ ನಡೆದಿರೋದು ನಿಜಕ್ಕೂ ದುರಂತವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ