/newsfirstlive-kannada/media/post_attachments/wp-content/uploads/2024/11/TITANIC-TRAGEDy.jpg)
ಟೈಟಾನಿಕ್ ಹಡಗು ದುರಂತ, ಜಗತ್ತು ಎಂದೂ ಕೂಡ ಮರೆಯದ ಒಂದು ಮಹಾ ದುರ್ಘಟನೆ. ಸಮುದ್ರದ ನಡುವೆ ಎರಡು ಹೋಳಾಗಿ ಹೋದ ಹಡಗು ನೂರಾರು ಜನರನ್ನು ಬಲಿ ತೆಗೆದುಕೊಂಡಿತ್ತು. ಹಾಗೆ ನೂರಾರು ಜನರು ಬದುಕುಳಿದುಕೊಂಡಿದ್ದರು ಕೂಡ. ಅದಕ್ಕೆ ಕಾರಣವಾಗಿದ್ದವರು ಕ್ಯಾಪ್ಟನ್ ಆರ್ಥರ್ ರೊಸ್ಟ್ರಾನ್ ಕೂಡ ಒಬ್ಬರು. ಅವರು ಸುಮಾರು 700 ಜನರನ್ನು ಮಹಾ ದುರಂತದಿಂದ ಪಾರು ಮಾಡಿದ್ದರು. ತಮ್ಮ ಸಾಹಸ ಪ್ರವೃತ್ತಿಯಿಂದಲೇ ಬರೋಬ್ಬರಿ 700 ಜನರನ್ನು ರಕ್ಷಿಸಿದ್ದರು.
ಇದನ್ನೂ ಓದಿ:ಹೋಮ್ವರ್ಕ್ ಮಾಡಲು AI ಮೊರೆ ಹೋದ ಯುವಕ; ಗೂಗಲ್ ಚಾಟ್ಬೋಟ್ ಪ್ರತಿಕ್ರಿಯೆ ನೋಡಿ ಕಂಗಾಲು!
ಜೀವ ಬದುಕಿಸಿಕೊಂಡು ಬಂದ ಮೂವರು ಮಹಿಳೆಯರು ಆರ್ಥರ್ಗೆ 18 ಕ್ಯಾರೆಟ್ನ ಬಂಗಾರದ ಟಿಫಿನಿ ಅಂಡ್ ಕಂಪನಿಯ ವಾಚ್ ಉಡುಗೊರೆಯಾಗಿ ನೀಡಿದ್ದರು. ಈ ವಾಚು ಈಗ ಹರಾಜು ಆಗಿದೆ. ಹರಾಜು ಆದ ಮೊತ್ತ ಕೇಳಿದ್ರೆನೇ ಎಂತವರು ಕೂಡ ಶಾಕ್ಗೆ ಒಳಗಾಗುತ್ತಾರೆ. ಲಂಡನ್ನಲ್ಲಿ ಈ ಒಂದು ವಾಚು 1.5ಮಿಲಿಯನ್ ಬ್ರಿಟನ್ ಪೌಂಡ್ಗಳಿಗೆ ಅಂದ್ರೆ ಭಾರತದ 16 ಕೋಟಿ 61 ಲಕ್ಷ ರೂಪಾಯಿಗೆ ಹರಾಜು ಆಗಿದೆ. ಹರಾಜುದಾರರಾದ ಹೆನ್ರಿ ಅಲ್ಡ್ರಿಡ್ಜ್ ಅಂಡ್ ಸನ್ಸ್ ಗೋಲ್ಡ್ ವಾಚ್ ಅನ್ನು ಹರಾಜು ಮಾಡಿದೆ.
ಇದನ್ನೂ ಓದಿ:ಎಂಥಾ ಕಾಲ ಬಂತು.. ಗಿಡದ ಜೊತೆ ಡೇಟಿಂಗ್, ರೊಮ್ಯಾನ್ಸ್; ಈ ಹುಡುಗಿ ಕಥೆ ಕೇಳಿದ್ರೆ ಕಳೆದೇ ಹೋಗ್ತೀರಾ!
ಈ ಒಂದು ವಾಚ್ ದುರಂತದಲ್ಲಿ ಮಡಿದು ಹೋಗಿದ್ದ ಶ್ರೀಮಂತ ವ್ಯಕ್ತಿ ಜೊಕೊಬ್ ಅಸ್ಟೊರ್ ಎಂಬುವರ ಪತ್ನಿ ರೊಸ್ಟ್ರಾನ್ಗೆ ನೀಡಿದ್ದರು. ಅವರ ಜೊತೆ ಇನ್ನುಳಿದ ಇಬ್ಬರು ಅದೇ ದುರಂತದಲ್ಲಿ ಮೃತಪಟ್ಟಿದ್ದ ಬ್ಯುಸಿನೆಸ್ ಮೆನ್ಗಳ ಪತ್ನಿಯರು ಇದ್ದರು. ದುರಂತ ನಡೆದ 7 ದಿನಗಳ ಬಳಿಕ ಆಸ್ಟರ್ ಮೃತದೇಹ ಸಿಕ್ಕಾಗ ಅವರ ದೇಹದ ಮೇಲೆ ಈ ವಾಚ್ ಇತ್ತು ಈ ವಾಚ್ನ್ನು ಕ್ಯಾಪ್ಟನ್ ಆರ್ಥರ್ ರೊಸ್ಟ್ರಾನ್ಗೆ ನೀಡಿದ್ದರು. ಅದು ಈಗ 16 ಕೋಟಿ ರೂಪಾಯಿಗೆ ಹರಾಜು ಆಗಿದೆ.
ಈ ದುರಂತ ನಡೆದು 100 ವರ್ಷಗಳ ಮೇಲೇ ಆಗಿದೆ ಇಂದಿಗೂ ಕೂಡ ಟೈಟಾನಿಕ್ ಹಡಗು ದುರಂತದ ಬಗ್ಗೆ ಹಲವು ಕಥೆಗಳು ಪ್ರಚಲಿತದಲ್ಲಿವೆ. ಬ್ರಿಟನ್ನ ಪ್ರತಿ ಬೀದಿಯಲ್ಲೂ, ಒಂದು ಮಗು, ಒಂದು ಮಹಿಳೆ, ಒಬ್ಬ ಪುರುಷ ಹೀಗೆ ಎಲ್ಲರಲ್ಲೂ ಅದರ ಬಗ್ಗೆ ಹೇಳಲು ಹಲವು ಕಥೆಗಳಿವೆ. ಅದು ಬ್ರಿಟನ್ ದೇಶಕ್ಕೆ ಎಂದಿಗೂ ಆರದ ಗಾಯವಾಗಿ ಇಂದಿಗೂ ಕೂಡ ಉಳಿದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ