Advertisment

ಮೊದಲ ಮದುವೆ ಮುಚ್ಚಿಟ್ಟ, 2ನೇ ಮದುವೆಗೆ ಮುಂದಾದ.. ಹೆಣ್ಣು ಕೊಡೋಕೆ ಒಪ್ಪದ ಕುಟುಂಬದ ಮೇಲೆ ಸರ್ಕಾರಿ ನೌಕರ ದ್ವೇಷ

author-image
AS Harshith
Updated On
ಮೊದಲ ಮದುವೆ ಮುಚ್ಚಿಟ್ಟ, 2ನೇ ಮದುವೆಗೆ ಮುಂದಾದ.. ಹೆಣ್ಣು ಕೊಡೋಕೆ ಒಪ್ಪದ ಕುಟುಂಬದ ಮೇಲೆ ಸರ್ಕಾರಿ ನೌಕರ ದ್ವೇಷ
Advertisment
  • ಯುವತಿ ಮನೆಯ ಆವರಣಕ್ಕೆ ಗಾಂಜಾ ಎಸೆದು ಸಿಲುಕಿಸಲು ಪ್ಲಾನ್
  • ಕೆಪಿಟಿಸಿಎಲ್​ನ ಟಿಪಿಕಲ್​​​ ಅಸಾಮಿಯ ಬಣ್ಣ ಬಯಲು ಮಾಡಿದ ಯುವತಿ ಕುಟುಂಬ
  • ತಾನೇ ತೋಡಿದ ಗುಂಡಿಗೆ ತಾನೇ ಬಿದ್ದ.. ಫೇಲ್​ ಆಯ್ತು ಇಂಜಿನಿಯರ್​ ಹಾಕಿದ್ದ ಮಾಸ್ಟರ್​ ಪ್ಲಾನ್

ಆತ ಹೇಳಿ ಕೇಳಿ ಸರ್ಕಾರಿ ನೌಕರ. ಅಷ್ಟೇ ಅಲ್ಲ ವಿವಾಹಿತ. ಹೀಗಿದ್ರೂ ಮತ್ತೊಂದು ಮದುವೆ ಆಗ್ಬೇಕು ಅನ್ನೋ ಆಸೆ. ಈ ಆಸೆಗಾಗಿ ಈತ ಆಡಿದ ಆಟಗಳು, ನಾಟಕಗಳು ಒಂದಾ ಎರಡಾ? ಕೊನೆಗೆ ಈತನ ಅಸಲಿಯತ್ತು ಬಯಲಾಗಿದೆ.

Advertisment

ಇದೊಂದು ವಿಡಿಯೋ ಕಳೆದ ಎರಡು ದಿನಗಳಿಂದ ಸಂಚಲನ ಸೃಷ್ಟಿಸಿದೆ. ತನ್ನ ಪರಿಸ್ಥಿತಿಯನ್ನ ಕಣ್ಣಿಗೆ ಕಟ್ಟುವಂಗೆ ಎಂಥವರಿಗೂ ಕಣ್ಣಲ್ಲಿ ನೀರು ಉಕ್ಕುವಂತೆ ಮಾಡಿದ್ದಾನೆ. ಜಡ್ಜ್​ಗೂ ಕ್ಷಣಕಾಲ ದಂಗು. ಇಷ್ಟೆಲ್ಲಾ ನಾಟಕ ಕಟ್ಟಿದ ಈ ಕಿಲಾಡಿ ಕೆಪಿಟಿಸಿಎಲ್​ನ ಟಿಪಿಕಲ್​​​ ಅಸಾಮಿ. ಹೆಸರು ಹೆಸರಿಗಷ್ಟೇ ಶಾಂತಕುಮಾರಸ್ವಾಮಿ. ವಿವಾಹಿತ ಕೂಡ. ಆದ್ರೆ, ಇನ್ನೊಂದು ಮದುವೆ ಆಸೆಗೆ ತನ್ನ ಖೆಡ್ಡಾಗೆ ತಾನೇ ಬಿದ್ದು ಒದ್ದಾಡ್ತಿದ್ದಾನೆ.

publive-image

ಹೆಣ್ಣು ಕೊಡೋಕೆ ಒಪ್ಪದ ಕುಟುಂಬದ

ಶಾಂತಕುಮಾರಸ್ವಾಮಿ ಮದುವೆ ಆಗಿದ್ದನ್ನ ಮುಚ್ಚಿಟ್ಟು ಮತ್ತೊಂದು ಮದುವೆಗೆ ಮುಂದಾಗಿದ್ದ. ಆದ್ರೆ ಇಂಜಿನಿಯರ್​ನ ಲೆಕ್ಕಾಚಾರ ಕೈ ಕೊಟ್ಟಿತ್ತು. ಇಂಜಿನಿಯರ್​ಗೆ ಹೆಣ್ಣು ಕೊಡುವ ಮೊದಲು ಆತನ ಪೂರ್ವಾಪರ ತಿಳಿದ ಯುವತಿ ಕುಟುಂಬಸ್ಥರು, ಹಚಾ ಅಂದಿದ್ರು. ಈ ಅವಮಾನ ತಾಳಲಾಗದೇ ಆ ಕುಟುಂಬಸ್ಥರ ವಿರುದ್ಧ ಸೇಡಿಗೆ ನಿಂತಿದ್ದ. ಮನೆ ಆವರಣಕ್ಕೆ ಗಾಂಜಾ ಪ್ಯಾಕೆಟ್ ಎಸೆದು ಸಿಕ್ಕಿ ಹಾಕಿಸುವ ಪ್ರಯತ್ನ ನಡೆಸಿದ್ದ. ಈತನ ಕಿಲಾಡಿತನ ದೃಶ್ಯವನ್ನ ಸಿಸಿಟಿವಿ ಅದ್ಭತವಾಗಿ ಸೆರೆ ಹಿಡಿದಿತ್ತು.

ಹಿಂಗೆಲ್ಲಾ ಮಾಡಿದ್ರೆ, ಯಾರಾದ್ರೂ ಸುಮ್ನೇ ಇರ್ತಾರಾ? ಸಾಗರ ಗ್ರಾಮಾಂತರ ಠಾಣೆಗೆ ಕಂಪ್ಲೆಂಟ್​​ ಕೊಟ್ಟು ಬೆಂಡೆತ್ತಿಸಿದ್ದಾರೆ. ಬಳಿಕ ಈತನ ನಾಟಕದ ರಿಹರ್ಸಲ್​​ ಹೀಗೆ ಬಹಿರಂಗ ಆಗಿದ್ದು. ಕಟ್ಟುಕಥೆ ಅಂತ ಕೋರ್ಟ್​ಗೆ ಗೊತ್ತಾಗ್ತಿದ್ದಂತೆ ಅರ್ಜಿ ಹಿಂಪಡೆದು ಉಸ್ಸಪ್ಪಾ ಅಂದಿದ್ದಾನೆ.

Advertisment

ಎಂಥಾ ಗುಂಡಿಗೆ ಇರಬೇಕು ಈ ಗಂಡಿಗೆ. ಮದುವೆ ಆದ್ರೂ ಮತ್ತೊಂದು ಮದುವೆಗೆ ತಾನೇ ತೋಡಿದ ಗುಂಡಿಗೆ ತಾನೇ ಬೀಳೊದು ಅಂದ್ರೆ ಹಿಂಗೆ ನೋಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment