newsfirstkannada.com

BEL ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಅದ್ಧೂರಿ ಬೀಳ್ಕೊಡುಗೆ ಸಮಾರಂಭ

Share :

Published March 20, 2024 at 10:15pm

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲ ಶ್ರೀನಿವಾಸ್

    ಎಸ್​ಎಸ್​ಎಲ್​ಸಿ ಮಕ್ಕಳಿಗೆ ಪ್ರೀತಿಯಿಂದ ಬೀಳ್ಕೊಡಲಾಯಿತು

    ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ.ಆಶಾ ಸಿದ್ದ್ ಭಾಗವಹಿಸಿದ್ರು

ಬೆಂಗಳೂರು: ನಗರದ ಜಾಲಹಳ್ಳಿಯ ಪ್ರತಿಷ್ಠಿತ ಬಿಇಎಲ್​ನ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ರಾಷ್ಟ್ರಕವಿ ಕುವೆಂಪು ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು. 2023-24 ನೇ ಸಾಲಿನ ಎಸ್​ಎಸ್​ಎಲ್​ಸಿ ಮಕ್ಕಳಿಗೆ ಪ್ರೀತಿಯಿಂದ ಬೀಳ್ಕೊಡಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾನಸಿಕ ಚಿಕಿತ್ಸೆ ನೀಡುವ ಮನಶಾಸ್ತ್ರಜ್ಞೆ ಡಾ. ಆಶಾ ಸಿದ್ದ್ ಭಾಗವಹಿಸಿ ಮಾತನಾಡಿ, ನಿಮ್ಮ ಭವಿಷ್ಯ ನಿರ್ಮಾಪಕರು ನೀವೇ. ಪೋಷಕರು ಮತ್ತು ಶಿಕ್ಷಕರು ಸಹಾಯಕರೇ ಹೊರತು ನಿರ್ಮಾಪಕರಲ್ಲ ಎಂಬುದನ್ನು ಒಂದು ಸಣ್ಣ ಕತೆಯ ಮೂಲಕ ತಿಳಿಸಿದರು. ಜೊತೆಗೆ ವಿದ್ಯಾರ್ಥಿಗಳಿಗೆ 4 ಮುಖ್ಯ ಮೌಲ್ಯಗಳನ್ನು ತಿಳಿಸಿಕೊಟ್ಟರು.

  • ಸ್ವಯಂ ಶಿಸ್ತು
  • ಆತ್ಮ ಗೌರವ
  • ದಯೆ ಮತ್ತು ಸಹಾನುಭೂತಿ
  • ದೊಡ್ಡ ಕನಸು

ಇವುಗಳನ್ನು ಮಕ್ಕಳು ಸದಾ ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಆಶಾ ಸಿದ್ದ್ ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಇಇಐನ ಕಾರ್ಯದರ್ಶಿ ಧೀರಜ್ ತಾಕರೆ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಸಲಹೆ ಸೂಚನೆಗಳನ್ನು ಅರ್ಥವಾಗುವಂತೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಇಎಲ್ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಶ್ರೀನಿವಾಸ್ ವಹಿಸಿದ್ದರು. ಎಲ್ಲ ವಿದ್ಯಾರ್ಥಿಗಳ ಪರೀಕ್ಷೆಗೆ ಶುಭ ಹಾರೈಸಿದರು. ಬಿಇಇಐನ ಸದಸ್ಯರು ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಯವರು ವಿದ್ಯಾರ್ಥಿಗಳಿಗೆ ಶುಭಾಶಯಗಳು ಕೋರುವುದರೊಂದಿಗೆ ಬೀಳ್ಕೊಡುಗೆ ಸಮಾರಂಭ ಯಶಸ್ವಿಯಾಗಿ ಮುಕ್ತಾಯ ಮಾಡಲಾಯಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BEL ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಅದ್ಧೂರಿ ಬೀಳ್ಕೊಡುಗೆ ಸಮಾರಂಭ

https://newsfirstlive.com/wp-content/uploads/2024/03/SCHOOL-1.jpg

Load More