newsfirstkannada.com

ಪೋರ್ಷೆ ಕಾರು ಆಕ್ಸಿಡೆಂಟ್‌ ಕೇಸ್‌ಗೆ ಹೊಸ ಟ್ವಿಸ್ಟ್.. ಮೊಮ್ಮಗನ ಉಳಿಸಲು ತಾತನ ಮೆಗಾ ಡೀಲ್‌; ಮಾಡಿದ್ದೇನು?

Share :

Published May 25, 2024 at 2:40pm

Update May 25, 2024 at 2:41pm

  ಮನೆಯ ಕಾರು ಡ್ರೈವರ್ ಅನ್ನು ಕೂಡಿ ಹಾಕಿ ಬೆದರಿಕೆ ಹಾಕಿದ ತಾತ ಸುರೇಂದ್ರ

  ಅಪ್ರಾಪ್ತನ ವಿರುದ್ಧ ಕೇಸ್ ದಾಖಲಾಗದಂತೆ ನೋಡಿಕೊಳ್ಳಲು ಪ್ರಯತ್ನ

  ತಾತನಿಗೆ ಅಂಡರ್‌ವರ್ಲ್ಡ್‌ ಡಾನ್ ಛೋಟಾ ರಾಜನ್‌ಗೆ ಜೊತೆ ಲಿಂಕ್ ಇದ್ಯಾ?

ಮುಂಬೈ: ಪುಣೆಯ ಪೋರ್ಷೆ ಕಾರಿನ ಅಪಘಾತ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಕುಡಿದ ಅಮಲಿನಲ್ಲಿ ಅಪ್ರಾಪ್ತ ಚಾಲಕ ಐಷಾರಾಮಿ ಕಾರಿನಲ್ಲಿ ವೇಗವಾಗಿ ಬಂದು ಇಬ್ಬರ ಸಾವಿಗೆ ಕಾರಣವಾಗಿದ್ದ. ಈ ದುರಂತ ದೇಶಾದ್ಯಂತ ಸದ್ದು ಮಾಡಿದ್ದು, ಪುಣೆ ಪೊಲೀಸರು ತನಿಖೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಪೋರ್ಷೆ ಕಾರು ಅಪಘಾತಕ್ಕೆ ಕಾರಣವಾದ ಅಪ್ರಾಪ್ತ ವೇದಾಂತ ಅಗರವಾಲ್ ರಿಮ್ಯಾಂಡ್ ಹೋಮ್‌ನಲ್ಲಿದ್ದಾನೆ. ವೇದಾಂತ ಅಗರವಾಲ್ ತಂದೆ ವಿಶಾಲ್ ಅಗರವಾಲ್ ಅವರನ್ನು ಪೊಲೀಸರು ಬಂಧಿಸಿದ್ದು, ಜೂನ್ 7 ರವರೆಗೂ ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿದೆ. ವೇದಾಂತ ತಂದೆಯನ್ನು ಬಂಧಿಸಿದ ಬಳಿಕ ತಾತ ಸುರೇಂದ್ರ ಕುಮಾರ್ ಅಗರವಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವೇದಾಂತ ಅಗರವಾಲ್ ತಂದೆ ವಿಶಾಲ್ ಅಗರವಾಲ್

ಭೀಕರ ಅಪಘಾತದ ಆರೋಪಿ ವೇದಾಂತ ಅಗರವಾಲ್ ತಾತ ಸುರೇಂದ್ರ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಂದ್ರ ಕುಮಾರ್ ಅವರು ಅಪಘಾತದ ಬಳಿಕ ವೇದಾಂತ ಅಗರವಾಲ್ ಬದಲು ಮನೆಯ ಕಾರ್ ಡ್ರೈವರ್ ಗಂಗಾರಾಮ್‌ಗೆ ಅಪಘಾತ ಮಾಡಿದ್ದು ತಾನೇ ಒಂದು ಒಪ್ಪಿಕೊಳ್ಳಲು ಒತ್ತಡ ಹಾಕಿದ್ದರು. ಒಂದು ದಿನ ಪೂರ್ತಿ ಮನೆಯ ಕಾರ್ ಡ್ರೈವರ್ ಅನ್ನು ಕೂಡಿ ಹಾಕಿ ಫೋನ್ ಕಿತ್ತುಕೊಂಡು ಬೆದರಿಕೆ ಹಾಕಿದ್ದರು ಅನ್ನೋ ಮಾಹಿತಿಯನ್ನು ಪುಣೆಯ ಪೊಲೀಸರು ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಪೋರ್ಶ್​ ಕಾರು ಆಕ್ಸಿಡೆಂಟ್​; ಬಾಲಕನನ್ನ ಸೇಫ್ ಮಾಡಲು ಭಾರೀ ಕುತಂತ್ರ; ಕಮಿಷನರ್ ಬಿಚ್ಚಿಟ್ರು ಸತ್ಯ; ಏನದು? 

ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನ ಬದಲು ಮನೆಯ ಕಾರು ಡ್ರೈವರ್‌ ಅನ್ನು ಆರೋಪಿ ಮಾಡಲು ಯತ್ನಿಸಲಾಗಿದೆ. ಈ ಮೂಲಕ ಅಪ್ರಾಪ್ತ ಬಾಲಕನ ವಿರುದ್ಧ ಕೇಸ್ ದಾಖಲಾಗದಂತೆ ನೋಡಿಕೊಳ್ಳಲು ಬಿಲ್ಡರ್ ಕುಟುಂಬದ ಸದಸ್ಯರು ಯತ್ನಿಸಿದ್ದಾರೆ. ಆರೋಪಿ ತಂದೆ ವಿಶಾಲ್ ಅಗರವಾಲ್ ಹಾಗೂ ತಾತ ಸುರೇಂದ್ರ ಕುಮಾರ್ ಅಗರವಾಲ್‌ ಅವರು ಪುಣೆಯಲ್ಲಿ ರಿಯಲ್ ಎಸ್ಟೇಟ್ ಬಿಲ್ಡರ್ ಆಗಿದ್ದಾರೆ.

ತಾತನಿಗೂ ಡಾನ್‌ ಛೋಟಾ ರಾಜನ್‌ಗೂ ಲಿಂಕ್‌? 
ಪುಣೆಯಲ್ಲಿ ಆರೋಪಿ ತಾತ ಸುರೇಂದ್ರ ಕುಮಾರ್ ಅಗರವಾಲ್ ಅವರು ಬರೀ ಬಿಲ್ಡರ್ ಮಾತ್ರ ಆಗಿಲ್ಲ. ಇವರ ಮೇಲೆ ಶಿವಸೇನೆಯ ಕಾರ್ಪೊರೇಟರ್ ಅಜಯ್ ಬೋಸ್ಲೆ ಹತ್ಯೆಗೆ ಸುಪಾರಿ ನೀಡಿದ್ದ ಆರೋಪ ಕೇಳಿ ಬಂದಿದೆ. ಕಾರ್ಪೊರೇಟರ್‌ ಅಜಯ್ ಬೋಸ್ಲೆ ಹತ್ಯೆ ಮಾಡಲು ಅಂಡರ್‌ವರ್ಲ್ಡ್‌ ಡಾನ್ ಛೋಟಾ ರಾಜನ್‌ಗೆ ಸುರೇಂದ್ರ ಕುಮಾರ್ ಅಗರವಾಲ್ ಸುಪಾರಿ ನೀಡಿದ್ದರು ಎನ್ನಲಾಗಿದೆ. ಈ ಕೇಸ್‌ನಲ್ಲಿ ಹತ್ಯೆಗೆ ಯತ್ನಿಸಿದ ಆರೋಪವನ್ನು ಸುರೇಂದ್ರ ಕುಮಾರ್ ಅಗರವಾಲ್‌ ಎದುರಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋರ್ಷೆ ಕಾರು ಆಕ್ಸಿಡೆಂಟ್‌ ಕೇಸ್‌ಗೆ ಹೊಸ ಟ್ವಿಸ್ಟ್.. ಮೊಮ್ಮಗನ ಉಳಿಸಲು ತಾತನ ಮೆಗಾ ಡೀಲ್‌; ಮಾಡಿದ್ದೇನು?

https://newsfirstlive.com/wp-content/uploads/2024/05/Pune-Porsche-Car-Accident.jpg

Load More