newsfirstkannada.com

ಜಗಳ ಬಿಡಿಸಲು ಹೋದ ಕಾನ್ಸ್​ಸ್ಟೇಬಲ್​ ಮೇಲೆ ಲಾಂಗ್​​ನಿಂದ ಹಲ್ಲೆ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share :

17-06-2023

    ಕಲ್ಲು ಹಾಗೂ ಲಾಂಗ್‌ನಿಂದ ಪೊಲೀಸ್​ ಕಾನ್ಸ್​​ಸ್ಟೇಬಲ್​ ಮೇಲೆ ಹಲ್ಲೆ

    ಅಟ್ಟಾಡಿಸಿಕೊಂಡು ಕಾನ್ಸ್​ಸ್ಟೇಬಲ್​ಗೆ ಹೊಡೆದ ಯುವಕರ ಗುಂಪು

    ಜಗಳ ತಡೆಯಲು ಹೋದ ಶರತ್​ಗೆ ಮನಬಂದಂತೆ ಹೊಡೆದ ನಾಲ್ವರು

ಹಾಸನ: ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್​ಸ್ಟೇಬಲ್​ ಮೇಲೆ ಕಲ್ಲು ಹಾಗೂ ಲಾಂಗ್‌ನಿಂದ ಹಲ್ಲೆ ನಡೆಸಿದ ಘಟನೆ ಹೊಳೇನರಸೀಪುರ ತಾಲ್ಲೂಕಿನ ಮಳಲಿ ದೇವಸ್ಥಾನದಲ್ಲಿ ನಡೆದಿದೆ. ಯಸಳೂರು ಪೊಲೀಸ್ ಠಾಣೆಯ ಕಾನ್ಸ್​ಸ್ಟೇಬಲ್ ಶರತ್ ಈ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಗಳ ಬಿಡಿಸಲು ಹೋದ ಕಾನ್ಸ್​ಸ್ಟೇಬಲ್

ಕಾನ್ಸ್​ಸ್ಟೇಬಲ್ ಶರತ್ ಜೂ.15 ರಂದು ಸಾಂದರ್ಭಿಕ ರಜೆ ಪಡೆದಿದ್ದರು. ರಜೆ ಪಡೆದು ತಮ್ಮ ಗ್ರಾಮದ ದೀಪಕ್ ಎಂಬುವವರ ಮಗಳ ಹುಟ್ಟಹಬ್ಬದ ಕಾರ್ಯಕ್ರಮಕ್ಕೆ ಮಳಲಿ ದೇವಸ್ಥಾನಕ್ಕೆ ಹೋಗಿದ್ದರು. ಆದರೆ ಈ ವೇಳೆ ದೇವಸ್ಥಾನದ ಬಳಿಯಿರುವ ಸೋನಾ ಶ್ರೇಯ ಕನ್ವೆನ್ಷನ್ ಹಾಲ್ ಮುಂಭಾಗ ತನ್ನ ಗ್ರಾಮದ ಯುವಕರು ಚೇತನ್ ಎಂಬ ಯುವಕನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡುತ್ತಿದ್ದನ್ನು ಗಮನಿಸಿದ್ದಾರೆ. ಈ ವೇಳೆ ಶರತ್​ ಜಗಳ ಬಿಡಿಸಲು ಹೋಗುತ್ತಾರೆ.

ಲಾಂಗ್​ನಿಂದ ಹಲ್ಲೆ

ಜಗಳ ಬಿಡಿಸಲು ಹೋದ ಶರತ್‌ಗೆ ಮಿಥುನ್, ಲೋಹಿತ್, ನಟರಾಜು ಹಾಗೂ ಇತರರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಟರಾಜ ಎಂಬಾತ ಕಲ್ಲಿನಿಂದ ಶರತ್ ತಲೆಗೆ ಹೊಡೆದು ಕಾರಿನಿಂದ ಲಾಂಗ್ ತಂದಿದ್ದಾನೆ. ತಕ್ಷಣವೇ ಶರತ್​ ಕನ್ವೆನ್ಷನ್ ಹಾಲ್ ಒಳಗೆ ಶರತ್​ ಓಡಿ ಹೋಗಿದ್ದಾರೆ.

ಬಳಿಕ ಕನ್ವೆನ್ಷನ್ ಹಾಲ್‌ಗೆ ನುಗ್ಗಿದ ತಂಡ ಲಾಂಗ್‌ನಿಂದ ಮನಬಂದಂತೆ ಶರತ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆಗೆ ಕಾನ್ಸ್​ಸ್ಟೇಬಲ್ ಹಾಲ್‌ನಲ್ಲೇ  ಕಾನ್ಸ್​ಸ್ಟೇಬಲ್ ಶರತ್ ಕುಸಿದು ಬಿದ್ದಿದ್ದಾನೆ.

ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸದ್ಯ ಗಾಯಾಳುವಿಗೆ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಪೇದೆ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಗಳ ಬಿಡಿಸಲು ಹೋದ ಕಾನ್ಸ್​ಸ್ಟೇಬಲ್​ ಮೇಲೆ ಲಾಂಗ್​​ನಿಂದ ಹಲ್ಲೆ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

https://newsfirstlive.com/wp-content/uploads/2023/06/Sharath.jpg

Load More