/newsfirstlive-kannada/media/post_attachments/wp-content/uploads/2025/02/Protracted-warsL.jpg)
ಈ ಭೂಮಿ ಸೃಷ್ಟಿಯಾದಾಗಿನಿಂದ ಅರಸೊತ್ತಿಗೆಗಳು ಬಂದಾಗಿನಿಂದ, ಇಂಚಿಂಚೂ ಮಣ್ಣಿಗೆ ರಣಭೀಕರ ಯುದ್ಧಗಳು ನಡೆದಿವೆ. ಈ ಭೂಮಿ ಕುಡಿದು ಉಗುಳುವಷ್ಟು ರಕ್ತವನ್ನು ಕಂಡಿದೆ. ಇಡೀ ರಣರಂಗಕ್ಕೆ ರಕ್ತದ ಅಭಿಷೇಕಗಳು ನಡೆದಿವೆ. ತುಂಡಾದ ತಲೆ, ದೇಹದ ಭಾಗಗಳ ಬೆಟ್ಟಗಳೇ ಸೃಷ್ಟಿಯಾಗಿವೆ. ಯುದ್ದವೆನ್ನುವೇ ಹಾಗೆ ವಿನಾಶದ ಒಂದೊಂದು ಗುರುತನ್ನು ಬಿಟ್ಟು ಹೋಗವ ರಣಭೀಕರತೆಯ ಗುರುತು. ಕತ್ತಿಯಿಂದ ಹಿಡಿದು ಆಧುನಿ ಮಿಷನ್ ಗನ್ಗಳವರೆಗೆ, ಈಟಿಯಿಂದ ಹಿಡಿದು ಅನುಬಾಂಬ್ ಚೆಲ್ಲುವವರೆಗೂ ಈ ಜಗತ್ತು ಯುದ್ಧದ ಹಲವು ಮಜಲುಗಳನ್ನು ಕಂಡಿದೆ. ಇತಿಹಾಸದಲ್ಲಿ ಅನೇಕ ಯುದ್ಧಗಳು ಎಂದು ಮರೆಯಲಾಗದ ಇತಿಹಾಸದ ಪುಟಗಳನ್ನು ಸೇರಿಕೊಂಡಿವೆ. ಕೆಲವೊಂದು ಯುದ್ಧಗಳು ನೂರಾರು ವರ್ಷಗಳವರೆಗೆ ನಡೆದಿವೆ ಅಂತಹ ಸುದೀರ್ಘ ಯುದ್ಧಗಳ ಅಪರೂಪದ ಮಾಹಿತಿ ನಾವು ನಿಮಗೆ ಕೊಡುತ್ತೇವೆ.
ಕ್ರುಸೇಡ್ ಯುದ್ಧ: ಇದು 1095 ರಿಂದ 1699ರವರೆಗೆ ನಡೆದ ಸುದೀರ್ಘ ಯುದ್ಧ. ಇಷ್ಟು ವರ್ಷದ ಯುದ್ಧಗಳನ್ನು ಈ ಜಗತ್ತು ಹಿಂದೆಯೂ ಕಂಡಿದ್ದಿಲ್ಲಿ ಬಹುಶಃ ಮುಂದೆಯೂ ಕಾಣಲಿಕ್ಕಿಲ್ಲ. ಇದು ಈಸಾಯಿಗಳ ಹಾಗೂ ಮುಸ್ಲಿಂಮರ ನಡುವೆ ನಡೆದ ರಣಭೀಕರ ಯುದ್ಧ. ಸುಮಾರು 604 ವರ್ಷಗಳ ಕಾಲ ನಿರಂತರವಾಗಿ ನಡೆದ ಯುದ್ಧವಿದು. ಯುರೂಪಿಯನ್ ಈಸಾಯಿಗಳು ಜೇರುಸೇಲಂ ಹಾಗೂ ಅನ್ಯ ಪ್ರದೇಶಗಳನ್ನು ವಶಕ್ಕೆ ಪಡೆಯಲು ಮುಸ್ಲಿಂರ ವಿರುದ್ಧ ಹೂಡಿದ ಯುದ್ಧ.
ಅರಬ್- ಬೈಜಾಂಟೈನ್: ಅರಬ್ ಹಾಗು ಬೈಜಾಂಟೈನ್ ನಡುವೆ ನಡೆದ ಯುದ್ಧವೂ ಕೂಡ ಇತಿಹಾಸ ಕಂಡ ಅತಿ ಸುದೀರ್ಘವಾದ ಸಮರಗಳಲ್ಲೊಂದು. ಈ ಒಂದು ಯುದ್ಧ ಸುಮಾರು 629ನೆ ಇಸ್ವಿಯಲ್ಲಿ ಆರಂಭವಾಗಿವೆ 1050ನೇ ಇಸ್ವಿಯಲ್ಲಿ ಕೊನೆಗೊಂಡಿತು ಈ ಯುದ್ಧವನ್ನು ಯುರೋಪ್ ಹಾಗೂ ಮಧ್ಯಪೂರ್ವ ಭಾಗದ ಗಡಿಯಲ್ಲಿ ನಡೆಸಲಾಗಿತ್ತು. ಇದು ಅರಬ್ ಹಗೂ ಬೈಜಾಂಟೈನ್ ನಡೆವೆ ನಡೆದ ಸುಮಾರು 421 ವರ್ಷಗಳ ಕಾಲದ ಸುದೀರ್ಘ ಯುದ್ಧ.
ಇದನ್ನೂ ಓದಿ:ಡಿವೋರ್ಸ್ ನೀಡಲು ಮುಂದಾದ ಪತ್ನಿ ವಿರುದ್ಧ ಪತಿ ಸೇಡು ಹೇಗಿತ್ತು? ದಂಡ ಕಟ್ಟಿ ಕಟ್ಟಿಯೇ ಸುಸ್ತಾದ ಹೆಂಡತಿ!
ಯಮೆನ್ ಹಾಗೂ ಒಟ್ಟೊಮನ್ರ ಯುದ್ಧ: ಯಮೆನ್ ಹಾಗೂ ಒಟ್ಟೊಮನ್ನರ ನಡುವೆ ನಡೆದ ಈ ಯುದ್ಧ ಸಮಾರು 373 ವರ್ಷಗಳ ಕಾಲ ನಡೆದಿತ್ತು ಪೆನಿನ್ಸುಲಾದಲ್ಲಿ ಒಟ್ಟೊಮನ್ ಸಾಮ್ರಾಜ್ಯದ ಪ್ರಭುತ್ವ ಸ್ಥಾಪಿಸಲು ಈ ಒಂದು ರಣಭೀಕರ ಯುದ್ಧವು ಶುರುವಾಯ್ತು. 1538ರಲ್ಲಿ ಶುರುವಾದ ಈ ಯುದ್ಧ ಕೊನೆಗೊಂಡಿದ್ದು 1911ನೇ ಇಸ್ವಿಯಲ್ಲಿ.
ಇದನ್ನೂ ಓದಿ:ಪ್ರಪೋಸಲ್ನ್ನ ತಿರಸ್ಕರಿಸಿದ ಯುವತಿಗೆ ಪ್ರೇಮಿ ಮಾಡಿದ್ದೇನು? ವಿಡಿಯೋ ನೋಡಿದ್ರೆ ದಂಗಾಗಿ ಹೋಗ್ತೀರಾ?
ಮೊರೊಕನ್ ಮತ್ತು ಪೋರ್ಚುಗಲ್ ಯುದ್ಧ: ಮೊರೊಕ್ಕೊ ಮತ್ತು ಪೋರ್ಚುಗಲ್ರ ನಡುವೆಯ ನಡೆದ ಈ ಯುದ್ಧ ಸುಮಾರು 354 ವರ್ಷಗಳ ಕಾಲ ನಡೆದಿತ್ತು, 1415ರಲ್ಲಿ ಶುರುವಾದ ಈ ಯುದ್ಧ ಕೊನೆಗೊಂಡಿದ್ದು 1769ರಲ್ಲಿ. ಮೆಡಿಟೇರಿಯನ್ ಸಮುದ್ರದ ಪಶ್ಚಿಮ ಭಾಗದ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಈ ಎರಡು ಸಾಮ್ರಾಜ್ಯಗಳ ನಡುವೆ ಮಹಾಯುದ್ಧವೊಂದು ನಡೆದಿತ್ತು.
ರೂಸ್ ಮತ್ತು ಟರ್ಕಿಶ್ ಯುದ್ಧ: ಈ ಯುದ್ಧವೂ ಸುಮಾರು 350 ವರ್ಷಗಳ ಕಾಲ ನಡೆದಿದೆ.1568ರಲ್ಲಿ ಶುರುವಾದ ಈ ಯುದ್ಧ ಕೊನೆಗೊಂಡಿದ್ದು 1918 ರಂದು ಅಂದ್ರೆ ನಿರಮತರ 350 ವರ್ಷಗಳ ಕಾಲ ಈ ಯುದ್ದ ನಡೆದಿದೆ.ಒಟ್ಟೊಮನ್ ಸಾಮ್ರಾಜ್ಯದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಈ ಒಂದು ಮಹಾಸಂಗ್ರಾಮ ಶುರುವಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ