Advertisment

ಭಿಕ್ಷೆ ಬೇಡುತ್ತಿದ್ದ ಪಾಕಿಸ್ತಾನಕ್ಕೆ ಜಾಕ್‌ಪಾಟ್‌.. ಕೊನೆಗೂ ಐಶ್ವರ್ಯದ ಬಾಗಿಲು ತೆರೆಯಿತಾ? ಏನಿದರ ರಹಸ್ಯ?

author-image
Gopal Kulkarni
Updated On
ಭಿಕ್ಷೆ ಬೇಡುತ್ತಿದ್ದ ಪಾಕಿಸ್ತಾನಕ್ಕೆ ಜಾಕ್‌ಪಾಟ್‌.. ಕೊನೆಗೂ ಐಶ್ವರ್ಯದ ಬಾಗಿಲು ತೆರೆಯಿತಾ? ಏನಿದರ ರಹಸ್ಯ?
Advertisment
  • ಪಾಕಿಸ್ತಾನದ ನೆಲದಲ್ಲಿ ಪತ್ತೆಯಾಯ್ತು ಅಪಾರ ಪ್ರಮಾಣದ ಪೆಟ್ರೋಲಿಯಂ
  • ವಿಶ್ವದ ನಾಲ್ಕನೇ ಅತಿದೊಡ್ಡ ತೈಲ ಉತ್ಪಾದನಾ ದೇಶವಾಗುತ್ತಾ ಪಾಕಿಸ್ತಾನ?
  • ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಹುಡುಕಾಟ ಸಾರ್ಥಕವಾಯ್ತಾ?

ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕ ಸ್ಥಿತಿ ಈಗ ಜಾಗತಿಕವಾಗಿ ಸುದ್ದಿಯಾಗುತ್ತಿದೆ. ಒಂದೊಂದು ರೂಪಾಯಿಗೂ ಪರದಾಡುವ ಸ್ಥಿತಿಯಲ್ಲಿ ಪಾಕಿಸ್ತಾನವಿದೆ. ವರ್ಲ್ಡ್​ ಬ್ಯಾಂಕ್​ನಿಂದ ಹಿಡಿದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಕೂಡ ಇದರ ನೆರವಿಗೆ ಬರಲು ಹಿಂದೆ ಮುಂದೆ ನೋಡುತ್ತಿವೆ. ಇಸ್ಲಾಂ ರಾಷ್ಟ್ರಗಳು ಕೂಡ ಪಾಕಿಸ್ತಾನದಿಂದ ಅಂತರ ಕಾಯ್ದುಕೊಂಡಿವೆ. ತೀರ ದಯನೇಸಿ ಸ್ಥಿತಿಯಲ್ಲಿರುವ ಪಾಕ್​ಗೆ ಈಗ ಸಮೃದ್ಧಿಯ ಕಾಲ ಹತ್ತಿರ ಬರುತ್ತಿದೆಯಾ? ತನ್ನ ನೆಲದಲ್ಲಿಯೇ ಮಹಾಸಂಪತ್ತನ್ನು ಕಾಣುವ ವರ ಸಿಕ್ಕಿತಾ ಪಾಕಿಸ್ತಾನಕ್ಕೆ. ಇತ್ತೀಚೆಗೆ ಬಂದ ವರದಿಗಳು ಹೌದು ಎನ್ನುತ್ತಿವೆ.

Advertisment

ಇದನ್ನೂ ಓದಿ:ಒಂದು ವೇಳೆ ತುರ್ತುಪರಿಸ್ಥಿತಿ ಬಂದಿದ್ದೇ ಆದಲ್ಲಿ ಸುನೀತಾ ಗತಿಯೇನು? ನಾಸಾ ಮಾಡಿಕೊಂಡಿದೆ ಮತ್ತೊಂದು ಯೋಜನೆ

ಪಾಕಿಸ್ತಾನದ ನೆಲದಲ್ಲಿ ಅಪಾರ ಪ್ರಮಾಣದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇರುವುದು ಪತ್ತೆಯಾಗಿದೆ ಎಂದು ಅಲ್ಲಿನ ಡಾನ್ ಪತ್ರಿಕೆ ವರದಿ ಮಾಡಿದೆ. ಪಾಕಿಸ್ತಾನದ ಹಿರಿಯ ಭದ್ರತಾ ಸಿಬ್ಬಂದಿಯೊಬ್ಬರು ಹೇಳುವ ಪ್ರಕಾರ ಪಾಕಿಸ್ತಾನದ ಪ್ರದೇಶವೊಂದರಲ್ಲಿ ಅಪಾರ ಪ್ರಮಾಣದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇರುವುದು ಕಂಡು ಬಂದಿದೆ. ಈ ಒಂದು ವರದಾನದಿಂದ ಪಾಕಿಸ್ತಾನ ಶೀಘ್ರದಲ್ಲಿಯೇ ತನ್ನ ಆರ್ಥಿಕ ದುಸ್ಥಿತಿಯಿಂದ ಹೊರಬರಲಿದೆ ಎಂದು ಹೇಳಿದ್ದಾರೆ.

publive-image

ಕಳೆದ ಮೂರು ವರ್ಷಗಳಿಂದ ತನ್ನ ಮಿತ್ರ ರಾಷ್ಟ್ರಗಳ ಜೊತೆಗೂಡಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲದ ಸರ್ವೇಗಳನ್ನು ನಡೆಸುತ್ತಲೇ ಇತ್ತು. ಸದ್ಯ ಈಗ ಪಾಕಿಸ್ತಾನ ಹೇಳಿಕೊಂಡಿರುವ ಪ್ರಕಾರ ತನ್ನ ಕರಾಚಿ ಸಮುದ್ರದಲ್ಲಿ ಅಪಾರ ಪ್ರಮಾಣದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇರುವುದು ಪತ್ತೆಯಾಗಿದೆ ಎಂದು ಹೇಳಿಕೊಂಡಿದೆ. ಅದು ಎಷ್ಟು ಅಪಾರ ಪ್ರಮಾಣವೆಂದರೆ ಪಾಕಿಸ್ತಾನ ಇಂಧನವಿರುವ ಪತ್ತೆ ಮಾಡಿದ ಜಾಗದಲ್ಲಿ ತೈಲ ಉತ್ಪಾದನೆಯ ಅತಿದೊಡ್ಡ ನಾಲ್ಕನೇ ರಾಷ್ಟ್ರವಾಗಿ ಪಾಕಿಸ್ತಾನ ಹೊರಹೊಮ್ಮುವಷ್ಟು ಪೆಟ್ರೋಲಿಯಂ ರಿಸರ್ವ್​ ಇದೆ ಎಂದು ಹೇಳಲಾಗುತ್ತಿದೆ.

Advertisment

ಇದನ್ನೂ ಓದಿ:ಭಾರತೀಯರ ತಟ್ಟೆಯ ಮೇಲೆ ಬಾಂಗ್ಲಾದೇಶದ ಕಣ್ಣು, ಹೊಸ ಮಧ್ಯಂತರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಎಂತಹದು?

ಆತುರ ಬೇಡ ತಾಳ್ಮೆ ಇರಲಿ ಎಂದ ತಜ್ಞರು
ಇನ್ನು ಕೆಲವು ತಜ್ಞರು ಹೇಳುವ ಪ್ರಕಾರ ಸ್ವಲ್ಪ ನಿಧಾನಿಸಿ ಆತುರ ಬೇಡ. ಪಾಕಿಸ್ತಾನ ಇಷ್ಟು ಅಪಾರ ಪ್ರಮಾಣದ ತೈಲ ಉತ್ಪನ್ನ ತನ್ನ ನೆಲದಲ್ಲಿ ಹೊಂದಿದೆ ಎಂದು ಈಗಲೇ ಘೋಷಿಸುವುದು ಅವಸರದ ಕೆಲಸ ಇನ್ನೂ ಆಗಬೇಕಾದ ಕಾರ್ಯಗಳು ತುಂಬಾ ಇವೆ ನಿಧಾನಿಸಿ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಅನ್ನುವ ರೀತಿ. ತೀವ್ರ ಆರ್ಥಿಕ ಹೊಡೆತದಿಂದ ಬಳಲಿ ಬೆಂಡಾಗಿರುವ ಪಾಕ್​ಗೆ ಈ ಒಂದು ಸುದ್ದಿ ಹೊಸ ಆಶಾಭಾವವನ್ನು ಹುಟ್ಟಿಸಿದೆ. ಹೊಸ ಕನಸುಗಳನ್ನು ಚಿಗುರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment