/newsfirstlive-kannada/media/post_attachments/wp-content/uploads/2025/02/DVG-HUSBAND-LOOSED-LIFE.jpg)
ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತು ಸಾವಿಗೆ ಶರಣಾದ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ 35 ವರ್ಷದ ವ್ಯಕ್ತಿ, ನನ್ನ ಎಲ್ಐಸಿ ಪಾಲಿಸಿ ಹಣದಲ್ಲಿ ನನ್ನ ಪತ್ನಿಗೆ ಒಂದು ರೂಪಾಯಿಯನ್ನು ನೀಡಬೇಡಿ ಎಂದು ಬರೆದು ಜೀವ ಕಳೆದುಕೊಂಡಿದ್ದಾನೆ.
ಜಗಳೂರು ಪಟ್ಟಣದ 37 ವರ್ಷದ ಬಸವರಾಜ್ ಸಾವಿಗೆ ಶರಣಾಗಿದ್ದು, ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತು ಜೀವ ಕಳೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಜೀವ ಕಳೆದುಕೊಳ್ಳುವುದಕ್ಕು ಮುನ್ನ ಒಂದು ಡೆತ್ ನೋಟ್ ಬರೆದಿಟ್ಟು ಸಾವಿನ ಮನೆ ಸೇರಿದ್ದಾನೆ. ಬಸವರಾಜ್ ಉಮಾ ಎಂಬವವರ ಜೊತೆ ಆರು ವರ್ಷಗಳ ಹಿಂದೆ ಮದುವೆಯಾಗಿದ್ದ. ಇವರಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದರು. ಆದರೂ ಉಮಾಳಿಗೆ ಪರಪುರುಷರ ಸಂಗ ಇಷ್ಟವಾಗಿ ಹೋಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಹುಡುಗರನ್ನು ಪರಿಚಯ ಮಾಡಿಕೊಂಡು ಅವರ ಜೊತೆ ಅಕ್ರಮ ಸಂಬಂಧ ಹೊಂದುತ್ತಿದ್ದಳು ಎಂದು ಆರೋಪಿಸಲಾಗಿದೆ
ಇತ್ತೀಚೆಗೆ ಉಮಾ ಸುನೀಲ್ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳಂತೆ, ಎರಡು ಮಕ್ಕಳ ತಾಯಿ ನೀನು ಇದೆಲ್ಲಾ ಬೇಡ ಎಂದು ಎಷ್ಟು ತಿಳಿಸಿ ಹೇಳಿದರು ಕೂಡ ಉಮಾ ತನ್ನ ಚಾಳಿ ಮುಂದುವರಿಸಿದ್ದಳು. ಇದರಿಂದ ಮನನೊಂದ ಬಸವರಾಜ್ ಸಾವಿಗೆ ಶರಣಾಗಿದ್ದಾನೆ. ಡೆತ್ನೋಟ್ನಲ್ಲಿ ನನ್ನ ಪತ್ನಿಗೆ ನನ್ನ ಎಲ್ಐಸಿ ಪಾಲಿಸಿ ಹಣ ಹಾಗೂ ದಾವಣಗೆರೆಯಲ್ಲಿರೊ ಸೈಟ್ ನೀಡಬೇಡ. ನನ್ನ ಸಹೋದರರು ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಮೈಸೂರಲ್ಲಿ ತಾಯಿ, ಪತ್ನಿ, ಮಗನಿಗೆ ವಿಷ ಉಣಿಸಿ ತಾನೂ ಜೀವ ಬಿಟ್ಟ ವ್ಯಕ್ತಿ.. ಅಸಲಿಗೆ ಆಗಿದ್ದೇನು?
ನನ್ನ ಈ ನಿರ್ಧಾರಕ್ಕೆ ನನ್ನ ಹೆಂಡತಿಯೇ ಕಾರಣ. ನಾನು ಅವಳನ್ನು ಪ್ರೀತಿಸಿ ಮದುವೆಯಾಗಿದ್ದೆ. 6 ವರ್ಷ ಸಂಸಾರ ಮಾಡಿ ಎರಡು ಮುದ್ದಾದ ಮಕ್ಕಳಿಗೆ ಜನ್ಮ ನೀಡಿ, ನನ್ನನ್ನು ನನ್ನ ಮಕ್ಕಳ ಯೋಗಕ್ಷೇಮವನ್ನು ನೋಡದೆ ಬಂದಳು, ನನಗೆ ಅವಳನ್ನು ಬಿಟ್ಟು ಬದುಕೋಕೆ ಆಗಲ್ಲ, ಈ ಕಾರಣಕ್ಕೆ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಮಕ್ಕಳನ್ನು ನನ್ನ ಇಬ್ಬರು ಅಣ್ಣಂದಿರು, ಇಬ್ಬರು ಅತ್ತಿಗೆಗಳು ನೋಡಿಕೊಳ್ಳಬೇಕು ಎಂದು ಅವರ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ.
ಇದನ್ನೂ ಓದಿ:ರಾಜ್ಯದಲ್ಲಿ 3 ಪ್ರತ್ಯೇಕ ಅಪಘಾತ; ದುರಂತದಲ್ಲಿ 7 ಕಾರುಗಳು ಜಖಂ, ಕಣ್ಮುಚ್ಚಿದ ಬೈಕ್ ಸವಾರರು
ದಾವಣಗೆರೆಯಲ್ಲಿ ಒಂದು ಸೈಟ್, ಎಲ್ಐಸಿಯಲ್ಲಿ 30 ಲಕ್ಷ, ಮತ್ತೆ ಮ್ಯೂಚುವಲ್ ಫಂಡ್ನಲ್ಲಿ 2 ಲಕ್ಷ 50 ಸಾವಿರ ಮತ್ತೆ ಬ್ಯಾಂಕ್ ಅಕೌಂಟ್ನಲ್ಲಿ 52 ಸಾವಿರ ರೂಪಾಯಿ ಇದೆ. ನನ್ನ ಮೊಬೈಲ್ ಪಾಸ್ವರ್ಡ್ 1111. ಗಾಡ್ರೆಜ್ನಲ್ಲಿ ಒಡವೆ, ಪರ್ಸ್ ದುಡ್ಡು ಇದೆ. ಇದ್ಯಾವುದು ನನ್ನ ಹೆಂಡತಿಗೆ ಕೊಡಬೇಡಿ. ಅವಳಿಗೆ ಮತ್ತು ಅವಳೊಂದಿಗೆ ಸಂಬಂಧ ಬೆಳೆಸಿದ ಸುನೀಲನಿಗೆ ಶಿಕ್ಷೆಯಾಗುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಕಾನೂನು ಮತ್ತು ಸಮಾಜ ಅವರಿಗೆ ಶಿಕ್ಷೆ ನೀಡಬೇಕು ಎಂದು ಡೆತ್ನೋಟ್ ಬರೆದು, ಅದರಲ್ಲಿ ಆ ಸುನೀಲನ ಮೊಬೈಲ್ ನಂಬರನ್ನೂ ಕೂಡ ಉಲ್ಲೇಖಿಸಿ ಜೀವ ಕಳೆದುಕೊಂಡಿದ್ದಾರೆ. ಸದ್ಯ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಬಸವರಾಜ್ ಪತ್ನಿ ಉಮಾಳನ್ನು ಪೊಲೀಸರು ಬಂಧಿಸಿದ್ದು ಆಕೆಯ ಪ್ರಿಯಕರ ಸುನೀಲ್ಗಾಗಿ ಹುಡುಕಾಟ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ