/newsfirstlive-kannada/media/post_attachments/wp-content/uploads/2025/07/Indian-Family.jpg)
ಅಮೆರಿಕ ಪ್ರವಾಸಕ್ಕೆ ಹೋಗಿದ್ದ ಹೈದರಾಬಾದ್ ಕುಟುಂಬವೊಂದು ರಸ್ತೆ ಅಪಘಾತದಲ್ಲಿ (Road accident) ದುರ್ಮರಣಕ್ಕಿಡಾಗಿದೆ. ಕಾರಿಗೆ ಟ್ರಕ್ ಡಿಕ್ಕಿಯಾದ ಪರಿಣಾಮ ಗಂಡ- ಹೆಂಡತಿ, ಇಬ್ಬರು ಮಕ್ಕಳು ಜೀವ ಕಳೆದುಕೊಂಡಿದ್ದಾರೆ.
ತೇಜಸ್ವಿನಿ, ಶ್ರೀ ವೆಂಕಟ್ ಮತ್ತು ಅವರ ಇಬ್ಬರು ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಇವರು ಹೈದರಾಬಾದ್ ಮೂಲದವರು. ಕಳೆದ ವಾರ ಅಟ್ಲಾಂಟಾಗೆ ಈ ಕುಟುಂಬ ಪ್ರಯಾಣ ಬೆಳೆಸಿತ್ತು. ಅಟ್ಲಾಂಟಾಗೆ ಹೋಗಿ ವಾಪಸ್ ಡಲ್ಲಾಸ್‌ಗೆ ಬರುವಾಗ ಗ್ರೀನ್ ಕಂಟ್ರಿಯಲ್ಲಿ ದುರ್ಘಟನೆ ಸಂಭವಿಸಿದೆ.
ರಾಂಗ್ ಸೈಡ್ನಲ್ಲಿ ಬಂದ ಟ್ರಕ್ನಿಂದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿಗೆ ಬೆಂಕಿ ತಗುಲಿದೆ. ಪರಿಣಾಮ ಕಾರಿನಲ್ಲಿದ್ದವರೆಲ್ಲ ಸಜೀವ ದಹನಗೊಂಡಿದ್ದಾರೆ. ಕಾರಿನಲ್ಲಿದ್ದವರ ಮೂಳೆಗಳನ್ನ ವೈಜ್ಞಾನಿಕ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಡಿಎನ್‌ಎ ಸ್ಯಾಂಪಲ್ ಬಳಸಿ ಮೃತರ ಗುರುತನ್ನು ಪತ್ತೆ ಹಚ್ಚಿ, ಸಂಬಂಧಿಕರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತಿದೆ.
ಇದನ್ನೂ ಓದಿ:ಪ್ರಿಯಕರನಿಗಾಗಿ ಪತಿಯನ್ನೇ ಬಿಟ್ಟು ಬಂದಳು.. ಗರ್ಭಿಣಿ ಆದ್ಮೇಲೆ ಪ್ರೇಮಿ ಪರಾರಿ, ಸಂತ್ರಸ್ತೆ ಏಕಾಂಗಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ