/newsfirstlive-kannada/media/post_attachments/wp-content/uploads/2025/05/Raj-Kumar-Thappa.jpg)
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿದಾಳಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ನಡೆಸ್ತಿದೆ. ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಗೆ ಕೋಪಿಸಿಕೊಂಡಿರುವ ಪಾಕಿಸ್ತಾನವು ಭಾರತದ ನಾಗರಿಕರ ಗುರಿಯಾಗಿಸಿಕೊಂಡು ದಾಳಿ ಮಾಡ್ತಿದೆ. ಇದಕ್ಕೆ ಕೌಂಟರ್ ಕೊಡ್ತಿರುವ ಭಾರತೀಯ ಸೇನೆ, ಪಾಕಿಸ್ತಾನದ ವಾಯುನೆಲೆಗಳ ಮೇಲೆ ಅಟ್ಯಾಕ್ ಮಾಡ್ತಿದೆ..
ಇದೀಗ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದಲ್ಲಿ ಜಮ್ಮುವಿನ ಅಧಿಕಾರಿ ಒಬ್ಬರು ಜೀವ ಕಳೆದುಕೊಂಡಿದ್ದಾರೆ. ಪಾಕಿಸ್ತಾನವು ಜಮ್ಮು ಕಾಶ್ಮೀರದ ರಾಜೌರಿ ಪಟ್ಟಣವನ್ನ ಗುರಿಯಾಗಿಸಿ ದಾಳಿ ನಡೆಸಿದೆ. ಈ ವೇಳೆ ರಜೌರಿ ಜಿಲ್ಲಾ ಅಭಿವೃದ್ಧಿ ಹೆಚ್ಚುವರಿ ಆಯುಕ್ತ ರಾಜ್ ಕುಮಾರ್ ಥಾಪಾ (Raj Kumar Thappa)ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ: ಭಿಕ್ಷೆ ಬೇಡಿದ್ದ ಪಾಕಿಸ್ತಾನಕ್ಕೆ IMF ಆಸರೆ; 19 ಸಾವಿರ ಕೋಟಿ ಸಾಲ ಮಂಜೂರು..!
ಹುತಾತ್ಮ ರಾಜ್ಕುಮಾರ್ ಥಾಪಾ ನಿನ್ನೆಯಷ್ಟೇ ನಡೆದ ಜಮ್ಮು ಸಿಎಂ ಸಭೆಯಲ್ಲೂ ಕೂಡ ಭಾಗಿಯಾಗಿದ್ದರು. ಇದೀಗ ರಾಜ್ಕುಮಾರ್ ಥಾಪಾ ಸಾವನ್ನಪ್ಪಿರೋ ವಿಚಾರವನ್ನು ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ತಿಳಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಾಕ್ ದಾಳಿಗೆ ಗೋರಂಟ್ಲು ಯೋಧ ಹುತಾತ್ಮ; ಮಧ್ಯಾಹ್ನ ಬೆಂಗಳೂರು ತಲುಪಲಿದೆ ಪಾರ್ಥಿವ ಶರೀರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ