ಕನ್ನಡ ಫಿಲ್ಮ್​ ಡೈರೆಕ್ಟರ್ ಎಂದು ಲಕ್ಷಾಂತರ ರೂಪಾಯಿ ವಂಚನೆ ಆರೋಪ.. ಯಾರು ಈ ಲೇಡಿ..?

author-image
Gopal Kulkarni
Updated On
ಕನ್ನಡ ಫಿಲ್ಮ್​ ಡೈರೆಕ್ಟರ್ ಎಂದು ಲಕ್ಷಾಂತರ ರೂಪಾಯಿ ವಂಚನೆ ಆರೋಪ.. ಯಾರು ಈ ಲೇಡಿ..?
Advertisment
  • ಡೈರೆಕ್ಟರ್ ಎಂದು ಹೇಳಿ ಡಾಕ್ಟರ್​​ಗೆ ವಂಚಿಸಿದಳಾ ಮಹಿಳೆ
  • ವೈದ್ಯೆಯಿಂದ ಸುಮಾರು 6.5 ಲಕ್ಷ ರೂಪಾಯಿ ವಂಚಿಸಿದ್ಲಾ?
  • ರಿಜೆಕ್ಟ್ ಆದ ಚೆಕ್​ ಬಗ್ಗೆ ಮಾತನಾಡಿದ್ರೆ ಏನೆಲ್ಲಾ ಮಾತಾಡಿದಳು?

ಕನ್ನಡ ಫಿಲ್ಮ ಮಹಿಳಾ ಡೈರೆಕ್ಟರ್ ಎಂದು ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಡಿದ ಆರೋಪವೊಂದು ವಿಸ್ಮಯಗೌಡ ಎಂಬ ಮಹಿಳೆಯ ವಿರುದ್ಧ ಕೇಳಿ ಬಂದೆ. ಇನ್​ಸ್ಟಾಗ್ರಾಮ್​ ಮೂಲಕ ಪರಿಚಯವಾಗಿದ್ದ ವಿಸ್ಮಯಗೌಡ, ನಾನೊಬ್ಬಳು ಫಿಲ್ಮ ಡೈರೆಕ್ಟರ್ ಮತ್ತು ಲೈಫ್​ ಕೋಚರ್​ ಎಂದು ಹೇಳಿಕೊಂಡು ವಂಚನೆ ಮಾಡಿದ್ದಾರೆ ಎಂದು ವೈದ್ಯೆಯೊಬ್ಬರು ಆರೋಪಿಸಿದ್ದಾರೆ

ಇದನ್ನೂ ಓದಿ:ಏನೇ ಕೇಳಿದ್ರೂ ಉತ್ತರ ಕೊಡ್ತಿಲ್ವಂತೆ ರನ್ಯಾ; 15 ಕೆಜಿ ಚಿನ್ನ ತಂದ ಕೇಸ್​ಗೆ ಟ್ವಿಸ್ಟ್ ಕೊಡಲು ಮುಂದಾದ ಪೊಲೀಸರು..!

2019ರಲ್ಲಿ ವಿಸ್ಮಯಗೌಡ ಪರಿಚಯವಾಗಿತ್ತು. ಲೈಫ್​ ಕೋಚ್ ಆಗಿರೋದ್ರಿಂದ ವಿಸ್ಮಯ ಪರಿಚಯ ಮಾಡಿಕೊಂಡಿದ್ದಾರೆ ವೈದ್ಯರು. ವಿಸ್ಮಯಗೌಡಳೊಂದಿಗೆ ಮ್ಯಾನಿಫಸ್ಟೇಷನ್ ಕ್ಲಾಸ್ ತೆಗೆದುಕೊಂಡಿದ್ದೆ ಎಂದು ದೂರುದಾರ ವೈದ್ಯೆ ಹೇಳಿಕೆಕೊಂಡಿದ್ದಾರೆ.

ದೂರಿನನ್ವಯ ವೈದ್ಯೆಯಿಂದ ವಿಸ್ಮಯಾಗೌಡ ಸುಮಾರು 6.5 ಲಕ್ಷ ರೂಪಾಯಿ ಹಣವನ್ನ ಸಾಲ ಪಡೆದಿದ್ದಳಂತೆ. ಅನಂತರ ಶ್ಯೂರಿಟಿಗೆ ತನ್ನ ಚೆಕ್​ ನೀಡಿದ್ದಳು. ಆದ್ರೆ ಚೆಕ್​ ಬ್ಯಾಂಕಿಗೆ ಕೊಟ್ಟಾಗ ಸಹಿ ಸರಿಯಿಲ್ಲ ಎಂದು ರಿಜೆಕ್ಟ್ ಆಗಿತ್ತು. ಅನಂತರ ಹಣ ಕೇಳಿದ್ರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆಯೊಡ್ಡಿದ್ದಾರೆ ಎಂದು ವೈದ್ಯೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಸ್ವೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment