ನಟ ದರ್ಶನ್ 2ನೇ ಮದುವೆ ಆಗಿಲ್ಲ.. ಪವಿತ್ರಾ ಗೌಡ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ವಕೀಲರು; ಏನದು?

author-image
admin
Updated On
ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಬಹಳ ದೊಡ್ಡ ಸಂಚು ನಡೆಯಿತಾ.. ಕೋರ್ಟ್​ಗೆ ಹೇಳಿದ್ದೇನು?
Advertisment
  • A1 ಪವಿತ್ರಾ ಗೌಡ ನಟ ದರ್ಶನ್ ಅವರ ಪತ್ನಿ ಎಂದಿದ್ದ ಕಮಿಷನರ್
  • ವಿಜಯಲಕ್ಷ್ಮಿ ಅವರು ಮಾತ್ರವೇ ದರ್ಶನ್ ಪತ್ನಿ, ವಿನೀಶ್ ಒಬ್ಬನೇ ಮಗ
  • ಪವಿತ್ರಾ ಗೌಡ, ದರ್ಶನ್ ಸಂಬಂಧದ ಬಗ್ಗೆ ವಕೀಲ ಅನಿಲ್ ಬಾಬು ಹೇಳಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪವಿತ್ರಾ ಗೌಡ A1, ದರ್ಶನ್ A2 ಆಗಿದ್ದಾರೆ. ಇನ್ನುಳಿದ 20ಕ್ಕೂ ಹೆಚ್ಚು ಆರೋಪಿಗಳನ್ನ ಪೊಲೀಸರ ವಿಚಾರಣೆ ನಡೆಸಿದ್ದಾರೆ. ಕ್ಷಣಕ್ಷಣಕ್ಕೂ ನಟ ದರ್ಶನ್ ಅವರ ಅರೆಸ್ಟ್ ಕೇಸ್ ಕುತೂಹಲ ಕೆರಳಿಸುತ್ತಿದೆ.

ಇದನ್ನೂ ಓದಿ: VIDEO: ದರ್ಶನ್​ ಬದುಕಿಗೆ ಶನಿಯಾಗಿ ಬಂದಳು ಪವಿತ್ರಾ.. ಶಿಷ್ಯನ ಬಗ್ಗೆ ಬೇಸರ ಹೊರಹಾಕಿದ ಅಡ್ಡಂಡ ಕಾರ್ಯಪ್ಪ 

ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರಿಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಪೊಲೀಸ್ ಮೂಲಗಳು ತಿಳಿಸಿವೆ. ಈ ಮಧ್ಯೆ ನಟ ದರ್ಶನ್ ಪರ ವಕೀಲರಾದ ಅನಿಲ್ ಬಾಬು ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇಂದು ಬೆಳಗ್ಗೆ ವಕೀಲ ಅನಿಲ್ ಬಾಬು ಅವರು ಆರೋಪಿಗಳನ್ನು ಭೇಟಿಯಾಗಲು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಆದರೆ ದರ್ಶನ್ ಅವರ ಭೇಟಿಗೆ ಈಗ ಸಾಧ್ಯವಾಗಿಲ್ಲ. ಈ ಬಗ್ಗೆ ಮಾತನಾಡಿರುವ ವಕೀಲರು, ಆರೋಪಿಗಳ ಭೇಟಿಗೆ ಬೆಳಗ್ಗೆ 8 ಗಂಟೆಯಿಂದ 8.30ರವರೆಗೂ ಸಮಯ ನೀಡಲಾಗಿತ್ತು. ಆದರೆ ಮೀಟಿಂಗ್ ನಡೆಯುತ್ತಾ ಇರೋದ್ರಿಂದ ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

publive-image

‘ಪವಿತ್ರಾ ಗೌಡಗೂ ದರ್ಶನ್‌ಗೂ ಮದುವೆ ಆಗಿಲ್ಲ’
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಸುದ್ದಿಗೋಷ್ಟಿ ನಡೆಸಿದ್ದರು. ಈ ವೇಳೆ ಆರೋಪಿ A1 ಪವಿತ್ರಾ ಗೌಡ ಅವರು ನಟ ದರ್ಶನ್ ಅವರ ಪತ್ನಿ ಅಂತ ಹೇಳಿದ್ದರು. ಈ ಬಗ್ಗೆ ವಕೀಲ ಅನಿಲ್ ಬಾಬು ಅವರು ಸ್ಪಷ್ಟನೆ ನೀಡಿದ್ದಾರೆ. ಬೈ ಮಿಸ್ಟೇಕ್ ಅಲ್ಲಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಹೇಳಿರಬಹುದು ಎಂದಿದ್ದಾರೆ.

ದರ್ಶನ್ ಹಾಗೂ ಪವಿತ್ರಾ ಗೌಡ ಮದುವೆ ಆಗಿಲ್ಲ. ಇದರ ಬಗ್ಗೆ ಯಾವುದೇ ಡಾಕ್ಯುಮೆಂಟ್‌ಗಳು ಇಲ್ಲ. ವಿಜಯಲಕ್ಷ್ಮಿ ಅವರು ಮಾತ್ರನೇ ನಟ ದರ್ಶನ್ ಅವರ ಪತ್ನಿ. ನಾನು ಈ ಗೊಂದಲಕ್ಕೆ ಪದೇ ಪದೇ ಸ್ಪಷ್ಟನೆ ನೀಡಲು ಬಯಸುತ್ತೇನೆ. ವಿಜಯಲಕ್ಷ್ಮಿ ಅವರು ಮಾತ್ರವೇ ದರ್ಶನ್ ಪತ್ನಿ. ಇವರಿಬ್ಬರಿಗೆ ವಿನೀಶ್ ಅವರು ಮಾತ್ರವೇ ಮಗ. ಅದನ್ನು ಬಿಟ್ಟರೆ ಬೇರೆ ಯಾರು ಇಲ್ಲ. ಪವಿತ್ರಾ ಗೌಡ ಅವರನ್ನು ನಟ ದರ್ಶನ್ ಅವರು ಮದುವೆ ಆಗಿಲ್ಲ. ಪವಿತ್ರಾ ಅವರು ನಟ ದರ್ಶನ್ ಅವರ ಗೆಳತಿ ಅಷ್ಟೇ ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:‘ವಿಜಯಲಕ್ಷ್ಮಿಗೆ ಕೊಟ್ಟಿದ್ದ ಸೇಮ್ ಕಾರು ನಂಗೂ ಬೇಕು’- ಹಠ ಹಿಡಿದಿದ್ದ ಪವಿತ್ರಾಗೆ ದರ್ಶನ್ ಕೊಟ್ಟ ಗಿಫ್ಟ್ ಏನು?  

ಇನ್ನು, ಪೊಲೀಸರು ಕೋರ್ಟ್‌ಗೆ ಯಾವ ಸಾಕ್ಷಿಗಳನ್ನು ದಾಖಲು ಮಾಡುತ್ತಾರೆ ಅನ್ನೋದರ ಮೇಲೆ ಈ ಕೊಲೆ ಪ್ರಕರಣ ನಿಂತಿದೆ. ನಾವು ದರ್ಶನ್ ಅವರಿಗೆ ಜಾಮೀನು ಕೊಡಿಸಲು ಏನು ಮಾಡಬೇಕೋ ಅದನ್ನು ನಾವು ಮಾಡುತ್ತಿದ್ದೇವೆ ಎಂದು ದರ್ಶನ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment