ಶಾಸಕರನ್ನ ನಿಯಂತ್ರಣಕ್ಕೆ ತರಲು, ನೀತಿ-ನಿರೂಪಣೆ ಸಮಿತಿ ರಚಿಸಿ
ಸದನದ ಒಳಗೆ, ಹೊರಗೆ ಸದಸ್ಯರ ಅಸಭ್ಯ ವರ್ತನೆ ನಿಯಂತ್ರಿಸಬೇಕು
RR ನಗರದ ಎಂಎಲ್ಎ ಅನರ್ಹ ಮಾಡುವಂತೆ ಸಚಿವರ ಒತ್ತಾಯ
ಬೆಂಗಳೂರು: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡುರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಸ್ಪೀಕರ್ ಯು.ಟಿ ಖಾದರ್ ಅವರಿಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಪತ್ರ ಬರೆದಿದ್ದಾರೆ.
ಸಮುದಾಯಗಳ ವಿರುದ್ಧ ಹೇಯ, ಅಸಭ್ಯವಾದ ಭಾಷೆ ಬಳಸಿರುವುದು ಕ್ಷಮೆಗೆ ಅರ್ಹರಲ್ಲ. ಶಾಸಕರನ್ನ ನಿಯಂತ್ರಣಕ್ಕೆ ತರಲು, ನೀತಿ-ನಿರೂಪಣಾ ಸಮಿತಿ ರಚನೆ ಮಾಡಬೇಕು. ಸದನದ ಒಳಗೆ ಹಾಗೂ ಹೊರಗೆ ಅಸಭ್ಯವಾಗಿ ವರ್ತಿಸುವ ಸದಸ್ಯರ ವರ್ತನೆ ನಿಯಂತ್ರಿಸಬೇಕು. ಮುನಿರತ್ನ ಘಟನೆಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೌಲ್ಯಗಳಿಗೆ, ಸಂಪ್ರದಾಯಗಳಿಗೆ ಅವಮಾನವಾಗಿದೆ. ಹೀಗಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಕೂಡಲೇ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡಬೇಕು ಎಂದು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರಿಗೆ ಸಚಿವ ಹೆಚ್.ಕೆ ಪಾಟೀಲ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮುಡಾ ಕೇಸ್ ತೀರ್ಪು ಪ್ರಕಟಿಸಲಿರೋ ಹೈಕೋರ್ಟ್.. ಇಂದು ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನಿರ್ಧಾರ
ಚಲುವರಾಜು ಎನ್ನುವವರಿಗೆ ಬೆದರಿಕೆ, ಜಾತಿ ನಿಂದನೆ ಮಾಡಿರುವ ಆರೋಪ ಹಾಗೂ ಅ*ಚಾರ ಕೇಸ್ನಲ್ಲಿ ಬಿಜೆಪಿ ಶಾಸಕ ಮುನಿರತ್ನ ಸದ್ಯ ಜೈಲಿನಲ್ಲಿದ್ದಾರೆ. ಜಾತಿ ನಿಂದನೆ ಕೇಸ್ನಲ್ಲಿ ಜಾಮೀನು ಸಿಕ್ಕಿದ್ದರೂ ಮಹಿಳೆಯೊಬ್ಬರ ಮೇಲೆ ಅಸಭ್ಯ ವರ್ತನೆ ಎನ್ನುವ ಪ್ರಕರಣದಲ್ಲಿ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಶಾಕಸರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಹೀಗಾಗಿ ಮುನಿರತ್ನ ಮತ್ತೆ ಜೈಲು ಸೇರುವಂತೆ ಆಗಿದೆ. ಈ ಪ್ರಕರಣಗಳ ತನಿಖೆಗೆ ಸರ್ಕಾರ ಎಸ್‌ಐಟಿ ತಂಡ ರಚನೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ