/newsfirstlive-kannada/media/post_attachments/wp-content/uploads/2025/01/INDIAS-OLDEST-TRAIN.jpg)
ಭಾರತದ ರೈಲ್ವೆ ಇಲಾಖೆಗೆ ಒಟ್ಟು 188 ವರ್ಷಗಳ ಇತಿಹಾಸವಿದೆ. ಈ ದೇಶದಲ್ಲಿ ಮೊದಲ ಬಾರಿಗೆ 1837ರಲ್ಲಿ ಮೊದಲ ರೈಲು ಓಡಿತ್ತು. ಮೊಟ್ಟ ಮೊದಲ ಪ್ಯಾಸೆಂಜರ್ ರೈಲು 1853ರಲ್ಲಿ ಓಡಿತ್ತು. ಭಾರತದಲ್ಲಿ ರೈಲುಗಳು ನಮ್ಮ ಲಕ್ಷಾಂತರನ ಜನರ ಪ್ರಯಾಣದ ಜೀವನಾಡಿ. ನಿತ್ಯವೂ ಕೋಟ್ಯಾಂತರ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ ಮತ್ತು ಆ ಸುಖವನ್ನು ಅನುಭವಿಸುತ್ತಾರೆ. ಆದ್ರೆ ನಿಮಗೆ ಗೊತ್ತಾ 21ನೇ ಶತಮಾನದ ಕಾಲಕ್ಕೆ ಬಂದರೂ ಕೂಡ ಇಂದಿಗೂ ನಮ್ಮಲ್ಲಿ ಸುಮಾರು 150 ವರ್ಷದ ಹಳೆಯ ರೈಲುಗಳು ಇಂದಿಗೂ ಹಳಿಯ ಮೇಳೆ ಓಡುತ್ತವೆ. ಒಟ್ಟು 10 ಅತ್ಯಂತ ಹಳೆಯದಾದ ರೈಲುಗಳು ಭಾರತೀಯ ರೈಲ್ವೆ ಇಲಾಖೆಯಲ್ಲಿವೆ.
1. ಕಲ್ಕಾ ಮೇಲ್
ಇದು ಭಾರತೀಯ ರೈಲ್ವೆ ಇತಿಹಾಸದಲ್ಲಿ ಅತ್ಯಂತ ಹಳೆಯ ಟ್ರೇನ್ ಇದೇ ವರ್ಷ ಈ ರೈಲು ತನ್ನ 158ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ಇದು ಮೊದಲ ಬಾರಿ ತನ್ನ ಓಟವನ್ನು ಶುರು ಮಾಡಿದ್ದು ಜನವರಿ 1, 1866ರಲ್ಲಿ. ಈಸ್ಟ ಇಂಡಿಯನ್ ರೈಲ್ವೆ ಮೇಲ್ ಎಂಬ ಹೆಸರಿನಿಂದ ತನ್ನ ಓಟವನ್ನು ಶುರು ಮಾಡಿದ ರೈಲು ಇಂದಿಗೂ ಕೂಡ ಓಡುತ್ತಲೇ ಇದೆ. ಇದು ಭಾರತೀಯ ರೈಲಿನ ಪರಂಪರೆಯ ಗುರುತಾಗಿ ಇಂದಿಗೂ ಕೂಡ ನಿಂತಿದೆ.
2. ಬಾಂಬೆ ಪುಣಾ ಮೇಲ್
ಇದು ಕೂಡ ಭಾರತೀಯ ರೈಲ್ವೆ ಇಲಾಖೆಯಲ್ಲಿ ತನ್ನದೇ ಇತಿಹಾಸವನ್ನು ಹೊಂದಿದೆ. 1863ರಲ್ಲಿ ಇದು ಮುಂಬೈನಿಂದ ಪುಣಾಗೆ ಮೊದಲ ಬಾರಿ ಪ್ರಯಾಣವನ್ನು ಬೆಳೆಸಿತ್ತು. ಪುಣಾ ಮುಂಬೈ ಪ್ರಯಾಣಿಕರ ಜೀವನಾಡಿಯಾಗಿದೆ ಈ ರೈಲು ನೂರಾರು ವರ್ಷಳಿಂದ ಇದು ಅತ್ಯಂತ ಅನುಕೂಲಕರ ದಕ್ಷತೆಯ ಗುರುತಾಗಿ ಇಂದಿಗೂ ಕೂಡ ಉಳಿದುಕೊಂಡಿದೆ.
3. ಫೇರಿ ಕ್ವೀನ್:
ಈ ಉಗಿ ಬಂಡಿ ಮೊದಲ ಬಾರಿ ಲಾಂಚ್ ಆಗಿದ್ದು 1855ರಲ್ಲಿ ಇದು ವಿಶ್ವದ ಅತ್ಯಂತ ಹಳೆಯ ಉಗಿಬಂಡಿ ಎಂದೇ ಕರೆಯಲಾಗುತ್ತದೆ. ಇದು ನವದೆಹಲಲಿ ಹಾಗೂ ಅಲ್ವಾರ ನಡುವೆ ಸಂಚಾರ ಮಾಡುತ್ತದೆ. ಇದು ಕೂಡ ಉಳಿದ ಐಷಾರಾಮಿ ಟ್ರೇನ್ಗಳಲ್ಲಿ ಒಂದು ಎಂದು ಗುರುತಿಸಲಾಗುತ್ತದೆ. ಇದು ಕೇವಲ ಎರಡು ಕೋಚ್ ಹೊಂದಿದ್ದು ಕೇವಲ 50 ಜನ ಪರಯಾಣಿಕರನ್ನು ಕರೆದುಕೊಂಡು ಮಾತ್ರ ಹೋಗಬಲ್ಲಂತ ಟ್ರೇನ್ 1998ರಲ್ಲಿ ಇದು ವಿಶ್ವದ ಅತ್ಯಂತ ಹಳೆಯ ಉಗಿಬಂಡಿ ಎಂದು ಗಿನ್ನಿಸ್ ರೆಕಾರ್ಡ್ನಲ್ಲಿ ಉಲ್ಲೇಖಗೊಂಡಿತ್ತು.
ಇದನ್ನೂ ಓದಿ:ಬೇಗ ಬಾ.. ನಾ ಮೂಡ್ನಲ್ಲಿದ್ದೀನಿ.. ಮಹಿಳಾ ಪ್ರಯಾಣಿಕಳಿಗೆ ಉಬರ್ ಡ್ರೈವರ್ನಿಂದ ಸಂದೇಶ! ಆಮೇಲಾಗಿದ್ದೇನು?
4. ಡಾರ್ಜಲಿಂಗ್ ಹಿಮಾಲಯನ್ ರೈಲ್ವೆ
ಈ ಟ್ರೇನ್ 1881ರಲ್ಲಿ ಲಾಂಚ್ ಆಗಿತ್ತು. ಡಾರ್ಜಲಿಂಗ್ ಹಿಮಾಲಯನ್ ರೈಲ್ವೆ ಯುನೆಸ್ಕೊ ವಿಶ್ವಪಾರಂಪರಿಕ ಸೈಟ್ನಲ್ಲಿ ಗುರುತಿಸಿಕೊಂಡಿದೆ. ಇದು ಡಾರ್ಜಲಿಂಗ್ನಂತಹ ಬೆಟ್ಟಗಾಡು ಪ್ರದೇಶದಲ್ಲಿ ಓಡಾಡುವ ರೈಲಾಗಿದೆ.
5. ಕಲ್ಕಾ ಶಿಮ್ಲಾ ರೈಲ್:
ಈ ರೈಲು ಸುಮಾರು 1903ನೇ ಇಸ್ವಿಯಿಂದ ಹಳಿಗಳ ಮೇಳೆ ಓಡಾಡುತ್ತಿದೆ. ಇದು ಕಲ್ಕಾ ಮತ್ತು ಶಿಮ್ಲಾದ ನಡುವೆ ಓಡಾಟ ನಡೆಸುವುದರಿಂದ ಹಿಮಾಲಯ ಬೆಟ್ಟಗಳ ಸೌಂದರ್ಯದ ದರ್ಶನ ಮಾಡಿಸುತ್ತದೆ. ಈ ಒಂದು ರೈಲು ಹರ್ಬರ್ಟ್ ಸೆಪ್ಟಿಮಸ್ ಹರಿಗೊಂಟನ್ ಅವರ ನಿರ್ದೇಶನದ ಮೇಲೆ ಶಿಮ್ಲಾದೊಂದಿಗೆ ಸಂಪರ್ಕ ಹೊಂದಿತು.
6. ನಿಲಗಿರಿ ಮೌಂಟೇನ್ ರೈಲ್:
ಇದು 19058ರಲ್ಲಿ ಮೊದಲ ಬಾರಿಗೆ ಹಳಿಯ ಮೇಲೆ ಓಡಲು ಆರಂಭಿಸಿತು. ಈ ನೀಲಗಿರಿ ಮೌಂಟೆನ್ ರೈಲ್ ಇಂಜಿನಿಯರ್ಗಳ ಅದ್ಭುತ ಎಂದೇ ಕರೆಸಿಕೊಳ್ಳುತ್ತದೆ. ಇದು ತಮಿಳುನಾಡಿನ ಸಮತಟ್ಟಾದ ನೆಲ ಹಾಗೂ ನೀಲಗಿರಿಯ ಪರ್ವತಗಳ ದರ್ಶನ ಮಾಡಿಸುತ್ತದೆ. ಕೆಲವೊಮ್ಮೆ ಉಸಿರು ಬಿಗಿಹಿಡಿದಕೊಂಡು ಪ್ರಯಾಣ ಮಾಡುವ ಅನುಭವವನ್ನು ಕೊಡುತ್ತದೆ. ಇದು ಕೂಡ ಯುನೆಸ್ಕೊದ ವಿಶ್ವ ಪಾರಂಪರಿಕ ಸೈಟ್ ಆಗಿ ಗುರುತಿಸಿಕೊಂಡಿದೆ.
7. ಪಂಜಾಬ್ ಮೇಲ್:
ಪಂಜಾಬ್ ಮೇಲ್ ರೈಲ್ವು ತನ್ನ ಆಪರೇಷನ್ನ್ನು 1912ರಲ್ಲಿ ಆರಂಭಿಸಿತು. ಆರಂಭದಲ್ಲಿ ಇದನ್ನು ಪಂಜಾಬ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ಇದು ಮುಂಬೈ ಹಾಗೂ ಫಿರೋಜಪುರ್ ನಡುವೆ ಸಂಚಾರ ಮಾಡುತ್ತಿತ್ತು. ಬ್ರಿಟಿಷ್ ಕಾಲದಲ್ಲಿ ಇದು ತುಂಬಾ ಹೆಸರಾಂತ ರೈಲಾಗಿ ಗುರುತಿಸಿಕೊಂಡಿತ್ತು.
ಇದನ್ನೂ ಓದಿ: 8 ವರ್ಷ, 40 ಸಾವಿರ ಗಿಡಗಳು.. ಬೋಳು ಬೆಟ್ಟವನ್ನೇ ನಿತ್ಯ ಹರಿದ್ವರ್ಣದ ಕಾಡು ಮಾಡಿದ ಭೂಪ; ಯಾರಿವನು?
8. ಫ್ರಂಟಿಯರ್ ಮೇಲ್:
ಈ ಒಂದು ರೈಲು ಭಾರತೀಯ ರೈಲ್ವೆ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಇದು ಭಾರತ ಮತ್ತು ಪಾಕಿಸ್ತಾನ ಇಬ್ಭಾಗಕ್ಕೆ ದೊಡ್ಡ ಸಾಕ್ಷಿಯಾಗಿ ನಿಂತ ಟ್ರೇನ್. 1928ರಲ್ಲಿ ಈ ಒಂದು ರೈಲು ಮೊದಲ ಬಾರಿ ಪರಿಚಯವಾಯ್ತು. ಸೆಪ್ಟಂಬರ್ 1 1928 ರಂದು ತನ್ನ ಮೊದಲ ಓಟ ಶುರು ಮಾಡಿತು. 1934ರಲ್ಲಿ ಫ್ರಂಟಿಯರ್ ಮೇಲ್ ದೇಶದ ಮೊಟ್ಟ ಮೊದಲ ಏರ್ಕಂಡಿಷನರ್ ರೈಲು ಎಂದು ಗುರುತಿಸಿಕೊಂಡಿತು. 1996ರಲ್ಲಿ ಈ ರೈಲಿಗೆ ಗೋಲ್ಡನ್ ಟೆಂಪಲ್ ಎಕ್ಸ್ಪ್ರೆಸ್ ಎಂದು ಮರುನಾಮಕರಣ ಮಾಡಲಾಯ್ತು
9. ಗ್ರಾಂಡ್ ಟ್ರಂಪ್ ಎಕ್ಸ್ಪ್ರೆಸ್:
ಈ ಒಂದು ರೈಲನ್ನೂ ಕೂಡ ಭಾರತದ ಅತ್ಯಂತ ಪುರಾತನ ರೈಲು ಎಂಬ ಹೆಮ್ಮೆಯಿದೆ. ಈ ಒಂದು ರೈಲು ಆರಂಭದಲ್ಲಿ ಪೇಶಾವರದಿಂದ ಮಂಗಳೂರಿನವರೆಗೂ ಸಂಚಾರ ನಡೆಸುತ್ತಿತ್ತು ಸತತ 104 ಗಂಟೆಗಳ ಪ್ರಯಾಣವನ್ನು ಇದು ನಡೆಸಿತ್ತು. 1929 ರಲ್ಲಿ ಈ ರೈಲು ದೆಹಲಿ ಮತ್ತು ಮದ್ರಾಸ್ ನಡುವೆ ಸಂಚಾರ ಮಾಡಲು ಆರಂಭಿಸಿತು ಕೊನೆಗೆ ಲಾಹೋರ್ನಿಂದ ಮೆಟ್ಟೆಪಾಲಯಂ ನಡುವೆ ಸಂಚಾರ ಆರಂಭಿಸಿತು.
10. ಡೆಕ್ಕನ್ ಕ್ವೀನ್:
ಈ ಒಂದು ರೈಲು ಮೊದಲು ಪರಿಚಯವಾಗಿದ್ದು 1930ರಲ್ಲಿ. ಪ್ರಯಾಣಿಕರಿಗಾಗಿ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಪರಿಚಯವಾದ ರೈಲು ಇದು. ಪುಣೆ ಮುಂಬೈ ನಡುವೆ ಓಡುತ್ತಿದ್ದ ಈ ರೈಲು ತನ್ನ ವೇಗಕ್ಕೆ ಹೆಸರು ಪಡೆದಿತ್ತು. ಡೆಕ್ಕನ್ ಕ್ವೀನ್ ಭಾರತದ ಮೊದಲ ಸೂಪರ್ಫಾಸ್ಟ್ ಟ್ರೇನ್.