‘ರಾತ್ರಿ 1 ಗಂಟೆಗೆ ಜೋರಾದ ಶಬ್ದ ಕೇಳಿಸಿತು, ಆಮೇಲೆ ನೋಡಿದರೆ..’ ಭೂಕುಸಿತದ ಭಯಾನಕ ಕ್ಷಣ ಬಿಚ್ಚಿಟ್ಟ ಸ್ಥಳೀಯರು

author-image
Veena Gangani
Updated On
40, 50 ಅಲ್ಲ.. ವಯನಾಡ್‌ನಲ್ಲಿ ಸಾವಿನ ಸಂಖ್ಯೆ ಭಾರೀ ಏರಿಕೆ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಾಹುಲ್ ಗಾಂಧಿ
Advertisment
  • ಮುಂಡಕೈ ಈ ಪ್ರದೇಶದಲ್ಲಿ ಬಳಿ 150 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ
  • ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡ ನಿವಾಸಿಗಳಿಗಾಗಿ ತೀವ್ರ ಕಾರ್ಯಾಚರಣೆ
  • ಮೃತರ ಸಂಖ್ಯೆ 44ಕ್ಕೆ ಏರಿಕೆ, ಮತ್ತಷ್ಟು ಏರಿಕೆ ಆಗುವ ಸಾಧ್ಯತೆ

ಇಂದು ಕೇರಳದ ವಯನಾಡಿನಲ್ಲಿ ಮಳೆಯಿಂದಾಗಿ ಭಾರೀ ಭೂ-ಕುಸಿತ ಸಂಭವಿಸಿದ್ದು ಸಾವಿನ ಸಂಖ್ಯೆ 42ಕ್ಕೆ ಏರಿಕೆ ಆಗಿದೆ. ಜೊತೆಗೆ ಮಣ್ಣಿನ ಅಡಿಯಲ್ಲಿ ನೂರಾರು ಮಂದಿ ಜೀವಂತ ಸಮಾಧಿ ಆಗಿರುವ ಆತಂಕ ವ್ಯಕ್ತವಾಗುತ್ತಿದೆ. ರಕ್ಕಸ ಮಳೆಯಾರ್ಭಟಕ್ಕೆ ವಯನಾಡು ಸ್ಮಶಾನವಾಗಿದೆ.

publive-image

ಇದನ್ನೂ ಓದಿ:ನದಿಯಲ್ಲಿ ತೇಲಿ ಬರ್ತಿವೆ ಶವಗಳು.. 200 ಮನೆಗಳು ಅಪ್ಪಚ್ಚಿ.. ಕೇರಳದ ಮಹಾ ದುರಂತದ ಫೋಟೋಗಳು..!

ಮುಂಡಕ್ಕೈ (Mundakkai), ಚೂರಲ್ಮಲಾ (Chooralmala), ಅಟ್ಟಮಾಲಾ ( Attamala) ಮತ್ತು ನೂಲ್ಪುಝಾ (Noolpuzha) ಒಟ್ಟು ನಾಲ್ಕು ಗ್ರಾಮದಲ್ಲಿ ಭೂಕುಸಿತ ಆಗಿದೆ. ಮುಂಡಕೈ ಮದರಸಾ ಬಳಿ 150 ಮಂದಿ ಸಿಲುಕಿಕೊಂಡಿದ್ದಾರೆ. ಮುಂಡಕೈ ಮದರಸಾ ಬಳಿ ಸುಮಾರು 50 ಮನೆಗಳು ಮಣ್ಣಿನಡಿ ಸಿಕ್ಕಿಹಾಕಿಕೊಂಡಿದೆ. ಇದೂವರೆಗೂ ಅಲ್ಲಿಂದ ಕೇವಲ 3 ಜನರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ. ಸ್ಥಳೀಯರ ಕೊಟ್ಟ ಮಾಹಿತಿ ಪ್ರಕಾರ, ಭಾರೀ ಶಬ್ದದೊಂದಿಗೆ ಭೂಕುಸಿತ ಸಂಭವಿಸಿದೆ.

publive-image

ಸ್ಥಳೀಯರು ಹೇಳಿದ್ದೇನು..?

ಬೆಳಗಿನ ಜಾವ 1 ಗಂಟೆ ಸುಮಾರಿಗೆ ದೊಡ್ಡ ಶಬ್ದ ಕೇಳಿ ಬಂತು. ಆ ಕೂಡಲೇ ಸ್ಥಳೀಯ ನಿವಾಸಿಗಳು ಮನೆಯಿಂದ ಆಚೆ ಓಡಿ ಬಂದಿದ್ದೇವೆ. ಆಗ ಮುಂಡಕೈ ಪಟ್ಟಣ ಸಂಪೂರ್ಣ ಭೂಕುಸಿತಕ್ಕೆ ಒಳಗಾಗಿ ಕೊಚ್ಚಿ ಹೋಗುತ್ತಿತ್ತು. ಆ ಸಮಯದಲ್ಲಿ ರಕ್ಷಣಾ ಸಿಬ್ಬಂದಿ ಕೂಡ ಪ್ರದೇಶಕ್ಕೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅನೇಕ ಜನರು ಗಾಯಗೊಂಡಿದ್ದಾರೆ. ಜೊತೆಗೆ  ಭೂಕುಸಿತದಿಂದ ಸಾಕಷ್ಟು ಜನ ಮೃತಪಟ್ಟಿದ್ದಾರೆ. ಇನ್ನೂ ಸಾವಿನ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ ಅಂತ ಹೇಳಿದ್ದಾರೆ.

publive-image

ಮುಂಡಕೈಯಲ್ಲಿ ಭೂಕುಸಿತದಿಂದ ಹೆಚ್ಚಿನ ಹಾನಿಯಾಗಿದೆ. ಈ ಭಾಗದ ಮುಖ್ಯರಸ್ತೆ ಹಾಗೂ ಚೂರಲ್ಮಲಾ (Chooralmala) ಪಟ್ಟಣದ ಸೇತುವೆ ಹಾಳಾಗಿರುವ ಕಾರಣ ಈ ಭಾಗದಲ್ಲಿ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಿಲ್ಲ. ಮುಂಡಕೈ ಅಟ್ಟಮಲ ಪ್ರದೇಶಕ್ಕೆ ಇದು ಏಕೈಕ ಸೇತುವೆಯಾಗಿದೆ.

publive-image

ಮುಂಡಕೈ ಪ್ರದೇಶದಲ್ಲಿ ಸುಮಾರು 400 ಕುಟುಂಬಗಳು ಪ್ರತ್ಯೇಕವಾಗಿವೆ. ಜೊತೆಗೆ ಹಲವು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸದ್ಯ ಭೂಕುಸಿತ ಉಂಟಾದ ಪ್ರದೇಶದಲ್ಲಿ ಅಗ್ನಿಶಾಮಕ ಇಲಾಖೆ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಮಣ್ಣಿನ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರೋ ನಿವಾಸಿಗಳಿಗಾಗಿ ತೀವ್ರ ಕಾರ್ಯಚರಣೆ ನಡೆಸಲಾಗುತ್ತದೆ.

publive-image

ಇದನ್ನೂ ಓದಿ:ದೇವರನಾಡಿನಲ್ಲಿ ‘ಗುಡ್ಡದ ಭೂತದ’ ತಾಂಡವ.. 3 ಬಾರಿ ಭೂಕುಸಿತ.. ಸಾವಿನ ಸಂಖ್ಯೆ 31ಕ್ಕೆ ಏರಿಕೆ!

ಕೋಝಿಕ್ಕೋಡ್ (Kozhikode) ಜಿಲ್ಲೆಯಲ್ಲಿ ನಾಲ್ಕು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ಮಂಜಚಿಲಿ, ಮದಂಚೇರಿ, ಪನೋಮ್ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ. ಮಂಜಚಿಲಿಯಲ್ಲಿ ಹಲವು ಮನೆಗಳು, ಅಂಗಡಿಗಳು ಧ್ವಂಸಗೊಂಡಿವೆ. ವಿಲಂಗಾಡ್ ಪಟ್ಟಣ ಜಲಾವೃತಗೊಂಡಿದೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಇನ್ನು ಭೂಕುಸಿತ ಸಂಭವಿಸಿದ ವಯನಾಡಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment