/newsfirstlive-kannada/media/post_attachments/wp-content/uploads/2024/12/Chikkamagalore-Arrest-Case.jpg)
ಚಿಕ್ಕಮಗಳೂರು: ಮನೆಗೆ ನುಗ್ಗಿದ ಪ್ರಿಯಕರ ಇಬ್ಬರು ಮಕ್ಕಳ ಎದುರೇ ಗೃಹಿಣಿಯ ಜೀವ ತೆಗೆದ ಭಯಾನಕ ಘಟನೆ ಬಾಳೆಹೊನ್ನೂರು ಸಮೀಪದ ಕಿಚ್ಚಂಬಿಯಲ್ಲಿ ನಡೆದಿದೆ. ಮೃತ ಮಹಿಳೆಯ ಹೆಸರು ತೃಪ್ತಿ. ಆರೋಪಿ ಚಿರಂಜೀವಿ, ತೃಪ್ತಿಗೆ ಚಾಕುವಿನಿಂದ ಚುಚ್ಚಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ಕಿರಾತಕ ಮಹಿಳೆಯನ್ನ ಕೆರೆಗೆ ಎಳೆದುಕೊಂಡು ಹೋಗಿ ಕಾಡಿನೊಳಗೆ ಓಡಿ ಹೋಗಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ತೃಪ್ತಿ ಹಾಗೂ ಚಿರಂಜೀವಿ ಇಬ್ಬರಿಗೂ ಪರಿಚಯವಾಗಿತ್ತು. ಹಲವು ದಿನಗಳಿಂದ ಇಬ್ಬರು ಸ್ನೇಹಿತರಾಗಿದ್ದರು. ತಿಂಗಳ ಹಿಂದೆ ಚಿರಂಜೀವಿ ಜೊತೆ ತೃಪ್ತಿ ಹೋಗಿದ್ದಳು. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಕೂಡ ದಾಖಲಾಗಿತ್ತು.
/newsfirstlive-kannada/media/post_attachments/wp-content/uploads/2024/12/Chikkamagalore-Arrest-Case-1.jpg)
ಪೊಲೀಸರು ಹುಡುಕಾಟ ನಡೆಸಿದ ಮೇಲೆ ತೃಪ್ತಿ ಸಿಕ್ಕಿದ್ದು, ಮನೆಯವರ ಬಳಿ ರಾಜಿ ಸಂಧಾನ ನಡೆದಿತ್ತು. ಇದಾದ ಮೇಲೆ ಚಿರಂಜೀವಿ ಜೊತೆ ತೃಪ್ತಿ ಮಾತು ಬಿಟ್ಟಿದ್ದಳು ಎನ್ನಲಾಗಿದೆ. ಸಂಪೂರ್ಣ ಮಾತು ಬಿಟ್ಟ ಪರಿಣಾಮ ಕೋಪಗೊಂಡ ಚಿರಂಜೀವಿ ಇಂದು ಏಕಾಏಕಿ ಮನೆಗೆ ನುಗ್ಗಿ ತೃಪ್ತಿಯ ಮೇಲೆ ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಇಷ್ಟಾದರೂ ಮಹಿಳೆ ಸಾಯದಿದ್ದಾಗ ಮನೆಯಿಂದ ಎಳೆದೊಯ್ದು ಗ್ರಾಮದ ಸಮೀಪದ ಕೆರೆಗೆ ಬಿಸಾಡಿದ್ದಾನೆ.
ಇದನ್ನೂ ಓದಿ: 108 ಆ್ಯಂಬುಲೆನ್ಸ್ ಕದ್ದು ಓಡುತ್ತಿದ್ದ ಕಳ್ಳ.. ಸಿನಿಮಾ ಸ್ಟೈಲ್‌ನಲ್ಲಿ ಚೇಸ್ ಮಾಡಿದ ಪೊಲೀಸ್! VIDEO
ತೃಪ್ತಿ ಪತಿ ಕೆಲಸಕ್ಕೆ ಹೋಗಿದ್ದಾಗ ಇಬ್ಬರು ಮಕ್ಕಳ ಮುಂದೆಯೇ ಈ ಭಯಾನಕ ಕೃತ್ಯ ನಡೆದಿದೆ. ಈ ಘಟನೆಯಿಂದಾಗಿ ಕಿಚ್ಚಂಬಿ ಗ್ರಾಮದ ಜನರು ಕೆಲ ಕಾಲ ಆತಂಕಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಾಳೆಹೊನ್ನೂರು ಪೊಲೀಸರು ಪರಾರಿಯಾಗಿದ್ದ ಆರೋಪಿ ಹುಡುಕಲು ನಾಲ್ಕು ತಂಡಗಳನ್ನು ರಚನೆ ಮಾಡಿದ್ದರು.
/newsfirstlive-kannada/media/post_attachments/wp-content/uploads/2024/12/Chikkamagalore-Arrest.jpg)
ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಅವರ ನೇತೃತ್ವದಲ್ಲಿ ಆರೋಪಿಗೆ ಬಲೆ ಬೀಸಿದ್ದು, ಘಟನೆ ನಡೆದ 5 ಗಂಟೆಗಳ ಒಳಗೆ ಕಾಡಿನೊಳಗೆ ಅವಿತು ಕುಳಿತಿದ್ದ ಆರೋಪಿಯನ್ನ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಶೋಧ ನಡೆಸಿದಾಗ ಆರೋಪಿ ಚಿರಂಜೀವಿ ಸಿಕ್ಕಿದ್ದಾನೆ. ಘಟನೆ ನಡೆದ 6 ಕಿಲೋಮೀಟರ್ ದೂರದಲ್ಲಿ psi ರವೀಶ್ ಅವರ ತಂಡ ಆರೋಪಿಯನ್ನ ಬಂಧಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us