newsfirstkannada.com

ವಾಸ್ತವ್ಯಕ್ಕೆ ಲಕ್ಷುರಿ ಹೋಟೆಲ್, ಹಣ ಕೇಳಿದ್ರೆ ಫೇಕ್ ಪೇಮೆಂಟ್.. ಬೆಂಗಳೂರಲ್ಲಿ ಸಿಕ್ಕಿಬಿದ್ದ ಕಿಲಾಡಿ..!

Share :

Published April 4, 2024 at 1:22pm

Update April 4, 2024 at 1:24pm

    ಆರ್ಮಿ ಆಫೀಸ್ ಎಂದು ನಂಬಿಸಿ ಮೋಸ ಮಾಡ್ತಿದ್ದ

    ಸುತ್ತಾಡಲು ಹೋಟೆಲ್​​ನ ಕಾರನ್ನೇ ಬಳಸಲು ಡಿಮ್ಯಾಂಡ್

    ಕೊನೆಗೂ ಆರೋಪಿ ಬಂಧಿಸಿದ ಹೈಗ್ರೌಂಡ್ಸ್ ಠಾಣೆ ಪೊಲೀಸರು

ಬೆಂಗಳೂರು: ಪ್ರತಿಷ್ಠಿತ ಹೋಟೆಲ್​​ನಲ್ಲಿ ರೂಮ್​​ ಬುಕ್ ಮಾಡಿ ಹಣ ಪಾವತಿಸದೇ ವಂಚಿಸುತ್ತಿದ್ದ ಆರೋಪಿಯನ್ನು ಹೈಗ್ರೌಂಡ್ಸ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೊರಾಡ ಸುಧೀರ್ ಬಂಧಿತ ಆರೋಪಿ.

ಫೈವ್ ಸ್ಟಾರ್​ ಹೋಟೆಲ್​​ಗಳಲ್ಲಿ ರೂಮ್ ಬುಕ್ ಮಾಡುತ್ತಿದ್ದ ಆಸಾಮಿ, ಪೇಮೆಂಟ್ ವಿಚಾರ ಕೇಳಿದ್ರೆ ಪಾವತಿ ಮಾಡ್ತೀನಿ ಎಂದು ಆಟವಾಡಿಸ್ತಿದ್ದ. ಕೊನೆಗೆ ಫೇಕ್ ಪೇಮೆಂಟ್ ಮಾಡಿ, ನಕಲಿ ಸ್ಕ್ರೀನ್​ಶಾಟ್​​ಗಳನ್ನು ತೋರಿಸಿ ಯಾಮಾರಿಸುತ್ತಿದ್ದ ಆರೋಪ ಕೇಳಿಬಂದಿತ್ತು.
ವಿಚಾರ ಗೊತ್ತಾಗಿ ಹೋಟೆಲ್​ನವರು ವಿಚಾರಿಸಿದಾಗ ನನ್ನ ಅಕೌಂಟ್​ನಿಂದ ಹಣ ಹೋಗಿದೆ. ನಿಮ್ಮ ಸರ್ವರ್​ನಲ್ಲಿ ಸಮಸ್ಯೆ ಇದೆ ಎಂದು ನಂಬಿಸುತ್ತಿದ್ದ. ಹೀಗೆ ಒಂದು ಪ್ರತಿಷ್ಠಿತ ಹೋಟೆಲ್​ನಲ್ಲಿ ಮೋಸ ಮಾಡಿದ್ದ ಆಸಾಮಿ, 80 ಸಾವಿರ ಬಿಲ್​ನಲ್ಲಿ 10 ಸಾವಿರ ಪಾವತಿ ಮಾಡಿದ್ದ. ನಂತರ ಉಳಿದ ಬಿಲ್ ಅನ್ನು ರಾತ್ರಿ ನೀಡ್ತೀನಿ ಎಂದಿದ್ದ.

ಇದನ್ನೂ ಓದಿ: ನಿಜವಾಗ್ತಿದೆ ಬಾಬಾ ವಂಗಾ ಭವಿಷ್ಯ..! ಇದಕ್ಕೆ ಬಿಸಿಲಿನ ತೀವ್ರತೆಯೇ ಸಾಕ್ಷಿ, 2024ರ ಬಗ್ಗೆ ಕೊಟ್ಟಿದ್ದ ಎಚ್ಚರಿಕೆ ಏನು?

ರಾತ್ರಿ ವೇಳೆ ಆ ಬಗ್ಗೆ ಕೇಳಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ನಂತರ ಅದೇ ಹೋಟೆಲ್​ನ ಬಿಎಂಡ್ಲೂ ಕಾರಿನಲ್ಲಿ ಏರ್​ಪೋರ್ಟ್​ಗೆ ಡ್ರಾಪ್ ಮಾಡೋದಕ್ಕೆ ಹೇಳಿದ್ದ. ಆಗ ಡ್ರೈವರ್ ನಾವು ನಮ್ಮ ಹೋಟೆಲ್‌ನಲ್ಲಿ ಅನುಮತಿ ಪಡಿಯಬೇಕು ಎಂದಿದ್ದ. ಈ ವೇಳೆ ಈತನ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಕೊಲ್ಕತ್ತಾದಲ್ಲಿ ತಾನು ಆರ್ಮಿ ಆಫೀಸರ್ ಎಂದು ನಂಬಿಸಿ ಯಾಮಾರಿಸಿದ್ದ. ಇದೀಗ ಹೈಗ್ರೌಂಡ್ಸ್ ಪೊಲೀಸರಿಂದ ಆರೋಪಿಯ ಬಂಧನವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಸ್ತವ್ಯಕ್ಕೆ ಲಕ್ಷುರಿ ಹೋಟೆಲ್, ಹಣ ಕೇಳಿದ್ರೆ ಫೇಕ್ ಪೇಮೆಂಟ್.. ಬೆಂಗಳೂರಲ್ಲಿ ಸಿಕ್ಕಿಬಿದ್ದ ಕಿಲಾಡಿ..!

https://newsfirstlive.com/wp-content/uploads/2024/04/BNG-FAKE-MAN.jpg

Load More