/newsfirstlive-kannada/media/post_attachments/wp-content/uploads/2024/12/NO-BROKER.jpg)
ಇದು ಒಂದು ಮನೆಯ ಸುತ್ತ 22 ಜನರು ಕಣ್ಣೀರಿಟ್ಟ ಭಯಂಕರ ಮೋಸದ ಕತೆ. ಒಂದೇ ಮನೆಯನ್ನು 22 ಜನರಿಗೆ ಲೀಸ್ ಕೊಡುವುದಾಗಿ ತೋರಿಸಿ ಬರೋಬ್ಬರಿ 22 ಜನರಿಗೆ ಪಂಗನಾಮ ಹಾಕಿ ಎಸ್ಕೇಪ್ ಆದ ಕತೆ. ನೋ ಬ್ರೋಕರ್ ಆ್ಯಪ್ ನಂಬಿ ಹಣ ಕೊಟ್ಟವರು ಈಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. 2 ಕೋಟಿಗೂ ಅಧಿಕ ಹಣ ದೋಚಿದ ಆಸಾಮಿ ಸದ್ಯ ಪರಾರಿಯಾಗಿದ್ದಾನೆ.
ಹೆಬ್ಬಾಳ ಸಮೀಪದ ಚೋಳ ನಗರದಲ್ಲಿರುವ ಮನೆಯೊಂದು ಲೀಸ್ ಕೊಡುವುದಿದೆ ಎಂದು ಗಿರೀಶ್ ಎಂಬಾತ ಆ್ಯಪ್ನಲ್ಲಿ ಹೇಳಿಕೊಂಡಿದ್ದ. ಅವನನ್ನು ಸಂಪರ್ಕ ಮಾಡಿದವರಿಗೆಲ್ಲಾ ಮನೆ ಲೀಸ್ ಕೊಡುತ್ತೇನೆ ಎಂದು ಒಟ್ಟು 22 ಜನರಿಂದ 8 ರಿಂದ 13 ಲಕ್ಷ ರೂಪಾಯಿಯವರೆಗೆ ಪೀಕಿ ಸುಮಾರು 2 ಕೋಟಿ ರೂಪಾಯಿ ವಸೂಲಿ ಮಾಡಿದ್ದ. ಮನೆ ಕೊಡಿ ಎಂದು ಗಂಟು ಬಿದ್ದವರಿಗೆಲ್ಲಾ ಒಂದೊಂದು ಕಥೆ ಹೇಳಿ ಸಾಗಿ ಹಾಕುತ್ತಿದ್ದ. ಮನೆ ರಿನೋವೇಶನ್ ಆಗ್ತಿದೆ. ಈಗಿರುವ ಬಾಡಿಗೆದಾರರ ಜೊತೆ ಸಮಸ್ಯೆ ಇದೆ ಎಂದು ಕಥೆ ಹೊಡೆಯುತ್ತಿದ್ದ.
ಇದನ್ನೂ ಓದಿ:ಹಣ ದೋಚಲು ಹೊಸ ದಾರಿ ಕಂಡು ಹಿಡಿದ ಖದೀಮರು; ಮದುವೆ ಇನ್ವಿಟೇಷನ್ ಎಂದು ಓಪನ್ ಮಾಡಿದ್ರೆ ಫಿನೀಶ್!
ನೋಡೋವರೆಗೆ ನೋಡಿ ಹಣ ವಾಪಸ್ಸು ಕೇಳಿದ್ದ ಲೀಸ್ಗೆ ಹಣ ನೀಡಿದ್ದ ಜನರಿಗೆ, ಚೆಕ್ ನೀಡಿ ಮೋಸ ಮಾಡಿದ್ದ. ಪತ್ನಿ ದೀಪಾ, ನಾದಿನಿ ರೂಪಾ, ಸರಿತಾ ಹೆಸರಿನ ಚೆಕ್ ನೀಡಿ ಸಹಿ ಮಿಸ್ ಮ್ಯಾಚ್, ಹೆಸರಿಗೆ ತಪ್ಪಾದ ಸ್ಪೆಲ್ಲಿಂಗ್ ಬರೆದು ವಂಚನೆ ಮಾಡುತ್ತಿದ್ದ. ಹಣ ಕೇಳಿದರೆ ಬದುಕಿರುವ ತಂದೆ ಸತ್ತೋಗಿದ್ದಾನೆ ಎಂದು ಗೋಳೋ ಎಂದು ಅಳುತ್ತಾ ವಂಚಿಸುತ್ತಿದ್ದ. ಇವನ ಕೃತ್ಯಕ್ಕೆ ಪತ್ನಿ, ತಂದೆ ಸೇರಿ ಕುಟುಂಬಸ್ಥರು ಸಾಥ್ ನೀಡಿರುವ ಆರೋಪವೂ ಇದೆ.
ಸದ್ಯ ಅವನ ಎಲ್ಲಾ ಡ್ರಾಮಗಳನ್ನು ಕಂಡು ರೋಸಿ ಹೋದ ಜನರು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಷ್ಟಾದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿರುವ ಜನರು. ಸಿಸಿಬಿಗೆ ದೂರು ನೀಡಿದ್ದಾರೆ ಸಂತ್ರಸ್ಥರು .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ