newsfirstkannada.com

ರಾತ್ರಿ ಕಾಲಿಗೆ ಮುಳ್ಳು ಚುಚ್ಚಿದೆ ಎಂದು ಮಲಗಿದ್ದ ವ್ಯಕ್ತಿ ಬೆಳಗ್ಗೆ ಎದ್ದೇಳಲೇ ಇಲ್ಲ; ಅಸಲಿಗೆ ಆಗಿದ್ದೇನು?

Share :

Published May 27, 2024 at 12:14pm

    ಮುಳ್ಳು ಚುಚ್ಚಿದೆ ಎಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದ

    ಬೆಳಗ್ಗೆ ಸಂಬಂಧಿಕರು ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿದಾಗ ಬಿಗ್‌ ಶಾಕ್!

    ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಚಿಕ್ಕಮಗಳೂರು: ಮುಳ್ಳು ಚುಚ್ಚಿದೆ ಎಂದು ರಾತ್ರಿ ಊಟ ಮಾಡಿ ಮಲಗಿದ್ದ ವ್ಯಕ್ತಿ ಸಾವನ್ನಪ್ಪಿರೋ ದಾರುಣ ಘಟನೆ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ. ಸಂಬಂಧಿಕರು ಬೆಳಗ್ಗೆ ಎದ್ದೇಳದ ವ್ಯಕ್ತಿಯನ್ನು ಎಬ್ಬಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಕರಕುಚ್ಚಿ ಗ್ರಾಮದ 44 ವರ್ಷದ ಗಂಗಪ್ಪ ಮೃತ ವ್ಯಕ್ತಿ. ಗಂಗಪ್ಪ ನಿನ್ನೆ ಜಮೀನಿನಲ್ಲಿ ಕೆಲಸ ಮಾಡುವಾಗ ಎರಡು ಬಾರಿ ಹಾವು ಕಚ್ಚಿದೆ. ಆದರೆ ಗಂಗಪ್ಪನಿಗೆ ಹಾವು ಕಚ್ಚಿರೋದು ಗಮನಕ್ಕೆ ಬಂದಿಲ್ಲ. ಮುಳ್ಳು ಚುಚ್ಚಿದೆ ಅಂದುಕೊಂಡ ಗಂಗಪ್ಪ ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದಾನೆ.

ಇದನ್ನೂ ಓದಿ: KKRTC ಬಸ್​- ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಉಸಿರು ಚೆಲ್ಲಿದ ಮೂವರು ಯುವಕರು​ 

ಬೆಳಗ್ಗೆ ಸಂಬಂಧಿಕರು ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿದಾಗ ಗಂಗಪ್ಪ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಹಾವು ಕಚ್ಚಿದ್ದರು ಮುಳ್ಳುಚುಚ್ಚಿದೆ ಏನು ಆಗಲ್ಲ ಎಂದು ವ್ಯಕ್ತಿ ನಿರ್ಲಕ್ಷಿಸಿದ್ದೇ ಅನಾಹುತಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾತ್ರಿ ಕಾಲಿಗೆ ಮುಳ್ಳು ಚುಚ್ಚಿದೆ ಎಂದು ಮಲಗಿದ್ದ ವ್ಯಕ್ತಿ ಬೆಳಗ್ಗೆ ಎದ್ದೇಳಲೇ ಇಲ್ಲ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/Chikkamagalore-Snake-Bite-Death-1.jpg

Load More