/newsfirstlive-kannada/media/post_attachments/wp-content/uploads/2024/07/kalburgi.jpg)
ಕಲಬುರಗಿ: ಕೃಷಿ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣಹಟ್ಟಿ ಗ್ರಾಮದಲ್ಲಿ ನಡೆದಿದೆ. ಅಂಬಾದಾಸ್ ಸಂಜೆವಾಡ್ (37) ಸಾವನ್ನಪ್ಪಿದ್ದಾರೆ.
ಜಾನುವಾರುಗಳಿಗೆ ನೀರು ಕುಡಿಸಲು ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಅಂಬದಾಸ್ ಸಾವನ್ನಪ್ಪಿದ್ದಾರೆ. ಉಡಚಣಹಟ್ಟಿ ಗ್ರಾಮಸ್ಥರು ನೀರಿನ ಹೊಂಡದಲ್ಲಿದ್ದ ಮೃತದೇಹವನ್ನ ಹೊರತೆಗೆದಿದ್ದಾರೆ.
ಇದನ್ನೂ ಓದಿ: ಚೂರಿ ಜೊತೆಗೆ ಲೇಡೀಸ್​ ಪಿಜಿಗೆ ನುಗ್ಗಿದ ಯುವಕ.. ಯುವತಿಯ ಕತ್ತು ಕೊಯ್ದು ಕೊಲೆ ಮಾಡಿ ಎಸ್ಕೇಪ್
ನೀರಿನಿಂದ ಮೃತದೇಹವನ್ನು ಹೊರತೆಗೆದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us