/newsfirstlive-kannada/media/post_attachments/wp-content/uploads/2024/08/KALABURGI-DEATH.jpg)
ಕಲಬುರಗಿ: ಸ್ನೇಹಿತನನ್ನು ಉಳಿಸಲು ಹೋಗಿ ಭೀಮಾ ನದಿಯಲ್ಲಿ ಮುಳುಗಿ ವ್ಯಕ್ತಿ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಅಫಜಪುರದ ತಾಲೂಕಿನ ಗಾಣಗಾಪುರದಲ್ಲಿ ನಡೆದಿದೆ. 42 ವರ್ಷದ ಶಶಿಕಾಂತ್ ತನ್ನ ಸ್ನೇಹಿತನನ್ನು ಉಳಿಸಲು ಅಂತ ಭೀಮಾ ನದಿಗೆ ನೆಗೆದಿದ್ದಾನೆ ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ನದಿಗೆ ಹಾರಿದ ಹೆಂಡತಿ ಬಚಾವ್.. ಕಾಪಾಡಲು ಹೋದ ಗಂಡ, ಸಂಬಂಧಿ ದಾರುಣ ಸಾವು; ಘೋರ ದುರಂತ!
ಸ್ನೇಹಿತರ ಜೊತೆ ಭೀಮಾ ನದಿ ತೀರಕ್ಕೆ ಹೋಗಿದ್ದ ವೇಳೆ ಆತನ ಸ್ನೇಹಿತ ಕಾಲು ಜಾರಿ ಭೀಮಾ ನದಿಯಲ್ಲಿ ಬಿದ್ದಿದ್ದಾನೆ. ಸ್ನೇಹಿತನನ್ನು ಕಾಪಾಡಲು ನದಿಗೆ ಇಳಿದ ಶಶಿಕಾಂತ್ ನೀರು ಪಾಲಾಗಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಶಶಿಕಾಂತ್ ಸ್ನೇಹಿತನನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಅವನನ್ನು ಕಾಪಾಡಲು ನದಿಗೆ ಇಳಿದಿದ್ದ ಶಶಿಕಾಂತ್ ದುರಾದೃಷ್ಟವಶಾತ್ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ. ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ