/newsfirstlive-kannada/media/post_attachments/wp-content/uploads/2024/03/CKB_MURDER.jpg)
ಚಿಕ್ಕಬಳ್ಳಾಪುರ: ಹೋಟೆಲ್ನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಆತನ ಕುತ್ತಿಗೆಯನ್ನ ಚಾಕುವಿನಿಂದ ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಾಗೇಪಲ್ಲಿ ಪಟ್ಟಣ ಹೊರವಲಯದ ಟಿಬಿ ಕ್ರಾಸ್ನಲ್ಲಿ ನಡೆದಿದೆ.
ಟಿಬಿ ಕ್ರಾಸ್ನ ಚೌಡೇಶ್ವರಿ ಹೋಟೆಲ್ನ ಮುಂದೆ ಅಡುಗೆ ಮಾಡುವ ಜಾಗದಲ್ಲಿ ಆಂಧ್ರಪ್ರದೇಶದ ದೇಮಕೇತೇಪಲ್ಲಿಯ 58 ವರ್ಷದ ವೆಂಕಟೇಶಪ್ಪ ಎಂಬಾತ ರಾತ್ರಿ ಮಲಗಿದ್ದಾನೆ. ಆದ್ರೆ ಬೆಳಿಗ್ಗೆಯಾಗುವಷ್ಟರಲ್ಲಿ ಆತ ಬರ್ಬರವಾಗಿ ಹತ್ಯೆಯಾಗಿದ್ದು ಅಪರಿಚಿತರು ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಇನ್ನು ಈ ಘಟನೆ ಸಂಬಂಧ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್ ನಾಗೇಶ್, ಎಎಸ್ಪಿ ಖಾಸಿಂ, ಡಿವೈಎಸ್ಪಿ, ಶಿವಕುಮಾರ್ ಸೇರಿದಂತೆ ಬಾಗೇಪಲ್ಲಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರನ್ನ ಕರೆಸಿ ಇಂಚಿಂಚು ಶೋಧ ನಡೆಸಿದ್ದು ಮೃತದೇಹವನ್ನ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಘಟನೆ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ