ದೇವರ ಕೊರಳಲ್ಲಿದ್ದ ತಾಳಿ ಸರ ಕದ್ದ ಕಳ್ಳ, ದೇವತೆಗೆ ಕೈ ಮುಗಿದಂತೆ ಕಳ್ಳನಾಟಕವಾಡಿದ ಚೋರ..! ವಿಡಿಯೋ

author-image
Bheemappa
Updated On
ದೇವರ ಕೊರಳಲ್ಲಿದ್ದ ತಾಳಿ ಸರ ಕದ್ದ ಕಳ್ಳ, ದೇವತೆಗೆ ಕೈ ಮುಗಿದಂತೆ ಕಳ್ಳನಾಟಕವಾಡಿದ ಚೋರ..! ವಿಡಿಯೋ
Advertisment
  • ಭಾರೀ ಮೌಲ್ಯದ ಬಂಗಾರದ ಮಂಗಳಸೂತ್ರ ಕಳ್ಳತನ
  • ದೇವಿಯ ಕುತ್ತಿಗೆಯಲ್ಲಿದ್ದ ತಾಳಿ ಕಿತ್ತುಕೊಂಡ ಖದೀಮ
  • ಭಕ್ತನ ಸೋಗಿನಲ್ಲಿ ಬಂದು ಗರ್ಭಗುಡಿಗೆ ನುಗ್ಗಿಯೇ ಬಿಟ್ಟ

ಹೈದರಾಬಾದ್; ದೇವರಿಗೆ ಕೈ ಮುಗಿದಂತೆ ಮಾಡಿ ತಕ್ಷಣ ಗರ್ಭಗುಡಿ ಒಳ ಹೊಕ್ಕು ದೇವತೆಯ ಕುತ್ತಿಗೆಯಲ್ಲಿದ್ದ ಬಂಗಾರದ ತಾಳಿಯನ್ನು ಕದ್ದು ಕಳ್ಳನೊಬ್ಬ ಎಸ್ಕೇಪ್ ಆಗಿದ್ದಾನೆ. ಈ ಘಟನೆಯು ಆಂಧ್ರಪ್ರದೇಶದ ಸತ್ರಂಪಾಡು ಗ್ರಾಮದಲ್ಲಿ ನಡೆದಿದೆ.

ಸತ್ರಂಪಾಡು ಗ್ರಾಮದಲ್ಲಿನ ಸೌಭಾಗ್ಯಲಕ್ಷ್ಮಿ ದೇವಿಯ ದೇವಸ್ಥಾನಕ್ಕೆ ವ್ಯಕ್ತಿಯೊಬ್ಬ ಭಕ್ತರ ಸೋಗಿನಲ್ಲಿ ಬಂದು ಈ ಕೃತ್ಯ ಎಸಗಿದ್ದಾನೆ. ಸೌಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ಭಕ್ತನ ಸೋಗಿನಲ್ಲಿ ಕಳ್ಳನೊಬ್ಬ ಬಂದು ಮೊದಲು ದೇವರಿಗೆ ಕೈಮುಗಿದು ಬೇಡಿಕೊಂಡಿದ್ದಾನೆ. ಬಳಿಕ ಆ ಕಡೆ ಈ ಕಡೆ ನೋಡಿ ಯಾರೂ ಇಲ್ಲದ್ದನ್ನು ಕಂಡು ಗರ್ಭಗುಡಿಯೊಳಗೆ ಹೋಗಿದ್ದಾನೆ. ದೇವಿಯ ಕುತ್ತಿಗೆಯಲ್ಲಿದ್ದ ಭಾರೀ ಮೌಲ್ಯದ  ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಖದೀಮ ಮಂಗಳಸೂತ್ರ ಕಳ್ಳತನ ಮಾಡುತ್ತಿರುವ ದೃಶ್ಯ ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ದೇವಾಲಯಕ್ಕೆ ಸಂಬಂಧಿಸಿದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಆರಂಭವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment