ಮೂತ್ರ ವಿಸರ್ಜನೆ ಮಾಡಲು ವಂದೇ ಭಾರತ್ ರೈಲು ಹತ್ತಿದ
ಬಾತ್‌ರೂಮ್‌ನಲ್ಲಿದ್ದಾಗ ರೈಲಿನ ಬಾಗಿಲುಗಳು ಫುಲ್ ಲಾಕ್
ಓಡುವ ರೈಲನ್ನು ಅರ್ಧ ದಾರಿಯಲ್ಲೇ ನಿಲ್ಲಿಸಲು ಪರದಾಡಿದ
ಭೋಪಲ್: ಮೂತ್ರ ವಿಸರ್ಜನೆ ಮಾಡಲು ವಂದೇ ಭಾರತ್ ರೈಲು ಹತ್ತಿದ ವ್ಯಕ್ತಿಯೊಬ್ಬ 6,000 ರೂಪಾಯಿ ಕಳೆದುಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಭೋಪಾಲ್ ರೈಲು ನಿಲ್ದಾಣದಲ್ಲಿ ಇಂದೋರ್‌ಗೆ ಹೊರಟಿದ್ದ ವಂದೇ ಭಾರತ್ ರೈಲು ನಿಂತಿತ್ತು. ಅಲ್ಲಿಗೆ ಹೆಂಡತಿ, ಮಕ್ಕಳ ಜೊತೆ ಹೈದರಾಬಾದ್ ಮೂಲದ ಅಬ್ದುಲ್ ಎಂಬುವವರು ಬಂದಿದ್ದಾರೆ. ಇವರು ಮೂತ್ರ ವಿಸರ್ಜನೆ ಮಾಡಲು ನಿಂತಿದ್ದ ವಂದೇ ಭಾರತ್ ರೈಲು ಹತ್ತಿದ್ದಾರೆ.
ಅಬ್ದುಲ್ ಬಾತ್‌ರೂಮ್‌ನಲ್ಲಿದ್ದಾಗಲೇ ವಂದೇ ಭಾರತ್ ರೈಲು ಸಂಚರಿಸಲು ಶುರುವಾಗುತ್ತೆ. ಅಲ್ಲಿಂದ ಹೊರಗೆ ಬಂದ ಅಬ್ದುಲ್ ಫುಲ್ ಗಾಬರಿಯಾಗಿ ಹೊರಗೆ ಹೋಗಲು ಪ್ರಯತ್ನಿಸುತ್ತಾರೆ. ಆದರೆ ಅಷ್ಟರಲ್ಲಾಗಲೇ ವಂದೇ ಭಾರತ್ ರೈಲಿನ ಬಾಗಿಲುಗಳು ಲಾಕ್ ಆಗಿರುತ್ತವೆ. ಹೀಗೆ ಒದ್ದಾಡುತ್ತಿದ್ದ ಅಬ್ದುಲ್ ಅವರು ವಂದೇ ಭಾರತ್ ರೈಲಿನಲ್ಲಿದ್ದ ಟಿಕೆಟ್ ಕಲೆಕ್ಟರ್ ಅನ್ನು ಹುಡುಕಿಕೊಂಡು ಹೋಗ್ತಾರೆ. ಬೇರೆ ಕೋಚ್‌ನಲ್ಲಿ ಪೊಲೀಸರ ಬಳಿ ಮನವಿ ಮಾಡಿಕೊಳ್ತಾರೆ. ಆದರೆ ವಂದೇ ಭಾರತ್ ರೈಲಿನಲ್ಲಿ ಡೋರ್ ಒಂದು ಸಾರಿ ಕ್ಲೋಸ್ ಆದ್ರೆ ಅದನ್ನ ಓಪನ್ ಮಾಡೋದು ಡ್ರೈವರ್ ಕೈಯಿಂದ ಮಾತ್ರ ಸಾಧ್ಯ. ಈ ಮಾಹಿತಿಯನ್ನು ಪೊಲೀಸರು, ಟಿಕೆಟ್ ಕಲೆಕ್ಟರ್‌ಗಳು ಅಬ್ದುಲ್‌ಗೆ ಹೇಳುತ್ತಾರೆ.
ಅರ್ಧ ದಾರಿಯಲ್ಲಿ ರೈಲು ನಿಲ್ಲಿಸಿದ್ದಕ್ಕೆ ಬಿತ್ತು ದಂಡ!
ಕೊನೆಗೆ ವಂದೇ ಭಾರತ್ ರೈಲಿನ ಡ್ರೈವರ್ ಹುಡುಕಿಕೊಂಡು ಹೋದ ಅಬ್ದುಲ್, ರೈಲನ್ನು ನಿಲ್ಲಿಸುವಂತೆ ಮನವಿ ಮಾಡಿಕೊಳ್ತಾರೆ. ಭೋಪಾಲ್ ರೈಲ್ವೆ ನಿಲ್ದಾಣ ಬಿಟ್ಟು ಮುಂದೆ ಹೋಗಿದ್ದ ಡ್ರೈವರ್ ಕೊನೆಗೂ ಈತನ ಪರದಾಟ ನೋಡಲಾಗದೆ ಉಜ್ಜೈನಿ ಬಳಿ ಟ್ರೈನ್ ಅನ್ನು ನಿಲ್ಲಿಸುತ್ತಾರೆ. ಹೀಗೆ ಅರ್ಧ ದಾರಿಯಲ್ಲಿ ವಂದೇ ಭಾರತ್ ರೈಲನ್ನು ನಿಲ್ಲಿಸಿದ್ದಕ್ಕೆ ಅಬ್ದುಲ್ ಅವರು 1,020 ರೂಪಾಯಿಯನ್ನು ದಂಡ ಕಟ್ಟಿದ್ದಾರೆ. ಉಜ್ಜೈನಿಯಿಂದ ಭೋಪಾಲ್ ರೈಲ್ವೆ ನಿಲ್ದಾಣಕ್ಕೆ ಬಸ್‌ನಲ್ಲಿ ಪ್ರಯಾಣ ಮಾಡಲು 750 ರೂಪಾಯಿಯನ್ನು ಖರ್ಚು ಮಾಡಿದ್ದಾರೆ.
ಇದನ್ನೂ ಓದಿ: ಅತ್ತೂ, ಅತ್ತೂ, ಅತ್ತೂ ಗಿನ್ನೆಸ್ ದಾಖಲೆ ಮಾಡುವ ಹುಚ್ಚು; 7 ದಿನ ಸತತ ಕಣ್ಣೀರು ಸುರಿಸಿದವನಿಗೆ ಏನಾಯ್ತು ಗೊತ್ತಾ?
ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಅಬ್ದುಲ್ ತನ್ನ ಹೆಂಡತಿ, ಮಕ್ಕಳನ್ನು ಬಿಟ್ಟು ಬಂದಿರುತ್ತಾರೆ. ಈ ಕುಟುಂಬ ಭೋಪಾಲ್ ರೈಲು ನಿಲ್ದಾಣದಿಂದ ದಕ್ಷಿಣ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಿಂಗರೌಲಿಗೆ ಹೋಗಬೇಕಾಗಿತ್ತು. ಈ ಪ್ರಯಾಣಕ್ಕಾಗಿ ಇವರು 4000 ರೂಪಾಯಿ ಮೌಲ್ಯದ ಟಿಕೆಟ್ ಅನ್ನು ಖರೀದಿಸಿರುತ್ತಾರೆ. ಅಬ್ದುಲ್ ವಂದೇ ಭಾರತ್ ರೈಲಿನಲ್ಲಿ ಉಜ್ಜೈನಿಗೆ ಹೋಗಿ ಅಲ್ಲಿಂದ ವಾಪಸ್ ಭೋಪಾಲ್‌ಗೆ ಬರುವಷ್ಟರಲ್ಲಿ ದಕ್ಷಿಣ ಎಕ್ಸ್‌ಪ್ರೆಸ್ ರೈಲು ಕೂಡ ಮಿಸ್ ಆಗಿದೆ. ಹೀಗೆ ವಂದೇ ಭಾರತ್ ಬಾತ್ ರೂಮ್‌ಗೆ ಹೋಗಿ ಸಿಕ್ಕಿಬಿದ್ದ ಇವರು ಒಟ್ಟಾರೆ 6 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ