newsfirstkannada.com

ಹೆಂಡತಿ ಜೊತೆ ಅಕ್ರಮ ಸಂಬಂಧದ ಶಂಕೆ.. ಸ್ನೇಹಿತರ ಜೊತೆ ಕಿಡ್ನಾಪ್ ಮಾಡಿ ಬರ್ಬರ ಹತ್ಯೆ

Share :

Published February 20, 2024 at 4:35pm

  ಕೊಲೆ ಮಾಡಿದ ಬಳಿಕ ಮೃತದೇಹವನ್ನು ಬಿಸಾಡಿ ಹೋಗಿದ್ದರು

  ಗಂಡ ನಾಪತ್ತೆಯಾಗಿದ್ದಾನೆಂದು ಪ್ರಕರಣ ದಾಖಲು ಮಾಡಿದ್ದ ಹೆಂಡತಿ

  ಅನೈತಿಕ ಸಂಬಂಧದಿಂದಲೇ ವ್ಯಕ್ತಿಯ ಕೊಲೆ ನಡೆದು ಹೋಯಿತಾ?

ಬೆಂಗಳೂರು: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೊಹಮ್ಮದ್ ಅಖ್ತರ್ ಅಲಿ (49) ಕೊಲೆಯಾಗಿರುವ ದುರ್ದೈವಿ. ಆರೋಪಿ ಶಹನವಾಜ್ ಎನ್ನುವರು ಹಾಗೂ ಈತನ ನಾಲ್ವರು ಸಹಚರರು ಸೇರಿ ಕೃತ್ಯವೆಸಗಿದ್ದಾರೆ. ಹತ್ಯೆ ಮಾಡುವುದಕ್ಕೂ ಮೊದಲೇ ಆರೋಪಿಗಳು ವ್ಯಕ್ತಿಯನ್ನು ಕಿಡ್ನಾಪ್ ಮಾಡಿದ್ದರು. ಈ ಸಂಬಂಧ ಮೃತನ ಪತ್ನಿ ನನ್ನ ಗಂಡ ನಾಪತ್ತೆಯಾಗಿದ್ದಾನೆ ಎಂದು ಕೇಸ್​ ದಾಖಲು ಮಾಡಿದ್ದರು. ಆದರೆ ಪತಿ ಶವವಾಗಿ ಪತ್ತೆಯಾಗಿದ್ದಾರೆ.

ಆರೋಪಿಯಾದ ಶಹನವಾಜ್, ಪತ್ನಿ ಜೊತೆ ಕೊಲೆಯಾಗಿರುವ ಅಖ್ತರ್ ಅಲಿ ಅನೈತಿಕ ಸಂಬಂಧ ಹೊಂದಿದ್ದನು ಎಂಬ ಆರೋಪವಿದೆ. ಇದರಿಂದ ಕೆರಳಿದ ಆರೋಪಿಯು ತನ್ನ ಸಹಚರರನ್ನ ಕರೆದುಕೊಂಡು ವ್ಯಕ್ತಿಯನ್ನ ಕಿಡ್ನಾಪ್ ಮಾಡಿದ್ದಾನೆ. ಬಳಿಕ ಯಾರು ಸುಳಿಯದ ಸ್ಥಳದಲ್ಲಿ ಕರೆದುಕೊಂಡು ಹೋಗಿ ಕುತ್ತಿಗೆಯನ್ನು ಬಿಗಿದು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ನಂತರ ಮೃತದೇಹವನ್ನು ಹೊಸಕೋಟೆ ಬಳಿ ಬಿಸಾಡಿ ಹೋಗಿದ್ದರು. ಒಟ್ಟು ಐವರಿಂದ ವ್ಯವಸ್ಥಿತವಾಗಿ ಈ ಕೊಲೆ ಮಾಡಲಾಗಿದೆ. ಇನ್ನು ಈ ಸಂಬಂಧ ಹಲಸೂರ್ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿ ಜೊತೆ ಅಕ್ರಮ ಸಂಬಂಧದ ಶಂಕೆ.. ಸ್ನೇಹಿತರ ಜೊತೆ ಕಿಡ್ನಾಪ್ ಮಾಡಿ ಬರ್ಬರ ಹತ್ಯೆ

https://newsfirstlive.com/wp-content/uploads/2024/02/BNG_MURDER.jpg

Load More