/newsfirstlive-kannada/media/post_attachments/wp-content/uploads/2025/01/POLICE-LATHI.jpg)
ಬೆಂಗಳೂರಿನಲ್ಲಿ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಗಿದೆ. ಬ್ರಿಗೇಡ್,ಎಂಜಿ ರೋಡ್​ನಲ್ಲಿ ವಷ ವರ್ಷವನ್ನು ಸ್ವಾಗತಿಸಲು ಜನಸಾಗರವೇ ನರೆದಿತ್ತು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಹೊಸ ವರ್ಷದ ಆಚರಣೆ ಅದ್ಧೂರಿಯಾಗಿಯೇ ನಡೆಯಿತು. ಈ ಬಾರಿ ಹೊಸ ವರ್ಷಾಚರಣೆಗೆ ಪೊಲೀಸರು ಅಹಿತಕರ ಘಟನೆ ನಡೆಯದಂತೆ ಹಿಂದಿಗಿಂತ ಹೆಚ್ಚು ಭದ್ರತಾ ಸೌಕರ್ಯವನ್ನು ಒದಗಿಸಿದ್ದರು. ಆದರೂ ಕೂಡ ಎಂಜಿ ರೋಡ್​ನಲ್ಲಿ ಒಂದು ಅಹಿತಕರ ಘಟನೆ ನಡೆದಿದೆ.
ಹೊಸ ವರ್ಷಾಚರಣೆಯಲ್ಲಿ ಭದ್ರತೆಯ ಮೊದಲ ಆದ್ಯತೆಯೇ ಹೆಣ್ಣು ಮಕ್ಕಳು, ಕುಡಿದ ಅಮಲಿನಲ್ಲಿ ಯಾರು ಹೆಣ್ಣು ಮಕ್ಕಳ ಜೊತೆ ಅನುಚಿತವಾಗಿ ವರ್ತನೆ ತೋರದಂತೆಯೇ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿರುತ್ತಾರೆ. ಆದ್ರೆ ಹೊಸ ವರ್ಷಾಚರಣೆಗೆ ಅಂತ ಬಂದಿದ್ದ ವ್ಯಕ್ತಿ ಎಂಜಿ ರಸ್ತೆಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನು ಕಂಡ ಪೊಲೀಸರು ದುರಳನಿಗೆ ತಮ್ಮ ಲಾಠಿ ರುಚಿ ತೋರಿಸಿದ್ದಾರೆ.
ಎಂಜಿ ರಸ್ತೆಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಕಂಡ ಪೊಲೀಸರು ಆತನನ್ನು ವಿಚಾರಸಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವ್ಯಕ್ತಿಗೆ ಲಾಠಿ ಏಟು ಕೊಟ್ಟಿದ್ದಾರೆ. ಅದು ಮಾತ್ರವಲ್ಲ, ಸುತ್ತಮುತ್ತಲಿದ್ದ ಜನರು ಕೂಡ ನಂದೊಂದು ಇರಲಿ ಅಂತ ದರ್ಮದೇಟು ಹಾಕಿದ್ದರೆ. ಆಮೇಲೆ ಪೊಲೀಸರು ಆರೋಪಿಯನ್ನು ಅಶೋಕನಗರ ಠಾಣೆಗೆ ಕರೆದೊಯ್ದಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us