newsfirstkannada.com

19ನೇ ಮಹಡಿ ಮೇಲಿಂದ ಜಿಗಿದ ವ್ಯಕ್ತಿ.. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ದುರಂತ

Share :

Published April 8, 2024 at 3:38pm

Update April 8, 2024 at 4:04pm

    ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಮೇಲಿಂದ ಬಿದ್ದ ವ್ಯಕ್ತಿ ಸಾವು

    19ನೇ ಫ್ಲೋರ್‌ನ ಬಾಲ್ಕನಿಯಲ್ಲಿ ಅರ್ಧಗಂಟೆ ಕಾಲ ಓಡಾಡುತ್ತಿದ್ದ

    ಭದ್ರತಾ ಸಿಬ್ಬಂದಿ ಬಾಲ್ಕನಿಗೆ ಹೋಗುವಷ್ಟರಲ್ಲಿ ಕೆಳಗೆ ಹಾರಿದ ವ್ಯಕ್ತಿ

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಮೇಲಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿರೋ ಘಟನೆ ನಡೆದಿದೆ. ನಗರದ ರೇಸ್‌ ಕೋರ್ಸ್ ರಸ್ತೆಯ ರಿನೈಸಾನ್ಸ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ.

ರಿನೈಸಾನ್ಸ್ ಹೋಟೆಲ್‌ನ 19ನೇ ಫ್ಲೋರ್‌ನ ಬಾಲ್ಕನಿಯಲ್ಲಿ ವ್ಯಕ್ತಿಯೊಬ್ಬ ಅರ್ಧಗಂಟೆಗೂ ಹೆಚ್ಚು ಕಾಲ ಓಡಾಡುತ್ತಿದ್ದ. ಅನುಮಾನಗೊಂಡ ಭದ್ರತಾ ಸಿಬ್ಬಂದಿ ಬಾಲ್ಕನಿಗೆ ತೆರಳುವಷ್ಟರಲ್ಲಿ ಆ ವ್ಯಕ್ತಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಸಾವಿನಲ್ಲೂ ಒಂದಾದ ದಂಪತಿ, ಹೃದಯ ವಿದ್ರಾವಕ ಘಟನೆಯಲ್ಲಿ 5 ಮಂದಿ ದಾರುಣ ಸಾವು

ಹೋಟೆಲ್‌ನ 19ನೇ ಫ್ಲೋರ್‌ನಿಂದ ಬಿದ್ದಿರುವ ವ್ಯಕ್ತಿ ಯಾರು ಅನ್ನೋದು ಪತ್ತೆಯಾಗಿಲ್ಲ. ಮೃತಪಟ್ಟ ವ್ಯಕ್ತಿ ಹೋಟೆಲ್‌ನಲ್ಲಿ ತಂಗಿದ್ದನಾ ಅಥವಾ ಹೋಟೆಲ್‌ನಲ್ಲಿ ಕೆಲಸ‌ ಮಾಡುತ್ತಿದ್ದ ವ್ಯಕ್ತಿನಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

19ನೇ ಮಹಡಿ ಮೇಲಿಂದ ಜಿಗಿದ ವ್ಯಕ್ತಿ.. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ದುರಂತ

https://newsfirstlive.com/wp-content/uploads/2024/04/bng-death.jpg

Load More