/newsfirstlive-kannada/media/post_attachments/wp-content/uploads/2025/01/Maha-Kumbh-Mela-2025-fire5.jpg)
ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಐತಿಹಾಸಿಕ ಮಹಾ ಕುಂಭಮೇಳದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಶಾಸ್ತ್ರೀ ಬ್ರಿಡ್ಜ್ ಸೆಕ್ಟರ್ 19ರಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಇದನ್ನೂ ಓದಿ: ಜುನಾ ಅಖಾಡದಿಂದ ಐಐಟಿ ಬಾಬಾಗೆ ಗೇಟ್ಪಾಸ್: ಕಾರಣವೇನು ಅಂತ ಗೊತ್ತಾ?
ಶಾಸ್ತ್ರಿ ಬ್ರಿಡ್ಜ್ ಸೆಕ್ಟರ್ 19ರಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿರೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸಾಧು, ಸಂತರೂ ಅಡುಗೆ ಮಾಡುವಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಆಗ ಆ ಬೆಂಕಿ ಸುತ್ತಮುತ್ತಲಿನ ಪ್ರದೇಶಕ್ಕೆ ವ್ಯಾಪಿಸಿದೆ ಎಂದು ಶಂಕಿಸಲಾಗಿದೆ. ಮೊದಲು ಒಂದು ಟೆಂಟ್ನಲ್ಲಿ ಹೊತ್ತಿದ ಬೆಂಕಿ ಬಳಿಕ ಪಕ್ಕದ 25ಕ್ಕೂ ಹೆಚ್ಚು ಟೆಂಟ್ಗಳಿಗೆ ಆವರಿಸಿದೆ. ಅಲ್ಲದೇ ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೊಂದಾಗಿ ಸಿಲಿಂಡರ್ಗಳು ಸ್ಪೋಟಗೊಂಡಿವೆ. ಭಾರೀ ಅಗ್ನಿ ಅವಘಡದಲ್ಲಿ ಹಲವು ವಾಹನಗಳು ಸುಟ್ಟು ಭಸ್ಮಗೊಂಡಿವೆ.
ಈ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ 6ಕ್ಕೂ ಹೆಚ್ಚು ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೂ, ಈ ಮಹಾ ಕುಂಭಮೇಳಕ್ಕೆ ಸಾಧು ಸಂತರು ಸೇರಿದಂತೆ ಕೋಟ್ಯಾಂತರ ಭಕ್ತರು ಆಗಮಿಸಿದ್ದರು.
कुंभ मेला क्षेत्र में आग लगने से मचा हड़कंप।#BreakingNews#BREAKING#viralpost#CrimeNews#viralvideo#एकता_का_महाकुम्भ#PrayagrajMahakumbh2025#KumbhMelaPoliceInNews#mahakumbh2025prayagraj#SEVENTEEN#BINI#LingOrm#tiktokban#DGFW25#KumbhMela2025pic.twitter.com/itdTQeqjj2
— SANJAY TRIPATHI (@sanjayjourno)
कुंभ मेला क्षेत्र में आग लगने से मचा हड़कंप।#BreakingNews#BREAKING#viralpost#CrimeNews#viralvideo#एकता_का_महाकुम्भ#PrayagrajMahakumbh2025#KumbhMelaPoliceInNews#mahakumbh2025prayagraj#SEVENTEEN#BINI#LingOrm#tiktokban#DGFW25#KumbhMela2025pic.twitter.com/itdTQeqjj2
— SANJAY TRIPATHI (@sanjayjourno) January 19, 2025
">January 19, 2025
ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಪುನೀತರಾಗುತ್ತಿದ್ದರು. ಆದ್ರೆ ಇದೇ ಹೊತ್ತಲ್ಲಿ ಪ್ರಯಾಗ್ರಾಜ್ನ ಶಾಸ್ತ್ರಿ ಬ್ರಿಡ್ಜ್ ಸೆಕ್ಟರ್ 19ರಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಕರ ಸಂಕ್ರಾಂತಿಯದ್ದೇ ಕೋಟ್ಯಂತರ ಭಕ್ತರು ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ