/newsfirstlive-kannada/media/post_attachments/wp-content/uploads/2025/02/whatsapp-marriage.jpg)
ಫೋನ್ನಲ್ಲಿ, ಇಲ್ಲವೇ ಮೆಸೇಜ್ನಲ್ಲಿ ಅಥವಾ ವಾಟ್ಸಾಪ್ನಲ್ಲಿ ಮೂರು ಬಾರಿ ತಲಾಖ್ ಹೇಳಿ ಮದುವೆಯ ಮುರಿದುಕೊಂಡಿರುವ ಘಟನೆಯನ್ನು ನಾವು ನೋಡಿರುತ್ತವೆ ಮತ್ತು ಕೇಳಿಯೂ ಇರುತ್ತೇವೆ. ಆದ್ರೆ ಮೊಬೈಲ್ನಲ್ಲಿಯೇ ಮದುವೆಯಾದ, ಅದರಲ್ಲೂ ಅಪ್ರಾಪ್ತ ಜೋಡಿ ಮದುವೆಗೆ ಒಪ್ಪಿಕೊಂಡ ವಿಚಿತ್ರ ಹಾಗೂ ಅಪರೂಪದ ಘಟನೆ ಬಿಹಾರನಲ್ಲಿ ನಡೆದಿದೆ.
ಮುಸ್ಲಿಂ ಧರ್ಮದಲ್ಲಿ ತಲಾಖ್ ನೀಡಲು ಮೂರು ಬಾರಿ ತಲಾಖ್, ತಲಾಖ್, ತಲಾಕ್ ಎಂದರೆ ಮುಗಿಯಿತು, ಮದುವೆ ಅಲ್ಲಿಗೆ ಮುರಿದು ಬಿದ್ದಂತೆ. ಇದರ ವಿರುದ್ಧವಾಗಿ ಈಗ ಕಾನೂನು ಕೂಡ ಬಂದಿದೆ ಆ ಮಾತು ಬೇರೆ. ತಲಾಖ್ ರೀತಿಯೇ ಮದುವೆಯಲ್ಲಿ ವಧು ಹಾಗೂ ವರ ಮೂರು ಬಾರಿ ಕಬೂಲ್ ಹೈ ಅಂದರೇ ಅಲ್ಲಿಗೆ ಅವರ ಮದುವೆಯಾದಂತೆ. ಹೀಗೆ ಮೊಬೈಲ್ನಲ್ಲಿಯೇ ಮೂರು ಬಾರಿ ಪರಸ್ಪರ ಕಬೂಲ್ ಹೈ ಅಂತ ವಾಟ್ಸಾಪ್ ಮೆಸೇಜ್ ಮಾಡಿಕೊಂಡು ಮದುವೆಯಾಗಿದ್ದಾರೆ ಅಪ್ರಾಪ್ತರು.
ಇದನ್ನೂ ಓದಿ:ದೆಹಲಿಯನ್ನು ಆಳಲಿದ್ದಾರಾ ಮತ್ತೊಬ್ಬ ಮಹಿಳಾ ಸಿಎಂ; ಬಿಜೆಪಿ ಮಾಡಿಕೊಂಡಿರುವ ಪ್ಲ್ಯಾನ್ ‘M’ ಏನು?
ಬಿಹಾರದ ಮುಜಾಫರಪುರ್ ಜಿಲ್ಲೆಯಲ್ಲಿ ಈ ರೀತಿಯ ಒಂದು ಘಟನೆ ನಡೆದಿದೆ. ಪಿಯುಸಿ ಓದುತ್ತಿರುವ ಹುಡುಗ-ಹುಡುಗಿ ಇನ್ನೂ ಅಪ್ರಾಪ್ತರು. ಹುಡುಗಿ 18ನ್ನು ದಾಟಿಲ್ಲ, ಹುಡುಗ 21 ವರ್ಷವ ತಲುಪಿಲ್ಲ. ಆದರರೂ ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಟ್ಟ ಕಾರಣ ಮದುವೆ ಆಗಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:300 ಕಿ.ಮೀ ಟ್ರಾಫಿಕ್ ಜಾಮ್; ವಿಶ್ವದಾಖಲೆ; ಮಹಾಕುಂಭಮೇಳಕ್ಕೆ ಕಾರಲ್ಲಿ ಹೋದ್ರೆ ನಿಮ್ಮ ಕಥೆ ಮುಗೀತು!
ಆದರೆ ಇವರಿಬ್ಬರ ಮದುವೆಗೆ ಎರಡು ಕುಟುಂಬಗಳ ವಿರೋಧವಿದೆ. ಹೀಗಾಗಿ ನಡೆದ ವಿಷಯವನ್ನು ಕುಟುಂಬ ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಇಬ್ಬರೂ ಅಪ್ರಾಪ್ತ ಹುಡುಗ ಹುಡುಗಿಯನ್ನು ಕರೆದು ಬುದ್ಧಿವಾದ ಹೇಳಿದ್ದಾರೆ. ಆದರೆ ಹುಡುಗ ಹುಡುಗಿ ಮಾತ್ರ ನಾವಿಬ್ಬರೂ ಗಂಡ ಹೆಂಡತಿ ನಮ್ಮ ಮದುವೆಯಾಗಿದೆ. ನಮ್ಮನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬಂತಹ ಮಾತುಗಳನ್ನಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇಬ್ಬರು ಮನೆಯ ಪೋಷಕರು ಇನ್ನೂ ಕೂಡ ಯಾವುದೇ ಅಧಿಕೃತ ದೂರು ನೀಡಿಲ್ಲ. ಪೋಷಕರು ಅಧಿಕೃತ ದೂರು ನೀಡಲಿ ಎಂದು ಪೊಲೀಸರು ಕಾಯುತ್ತಿದ್ದಾರೆ. ಇದಾದ ಬಳಿಕ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ