newsfirstkannada.com

ನೇಹಾ ಹತ್ಯೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಪ್ರಕರಣ.. ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ

Share :

Published May 4, 2024 at 6:41am

  16 ವರ್ಷದ ಅಪ್ರಾಪ್ತೆ ಮೇಲೆ ಅನ್ಯಕೋಮಿನ ಯುವಕನಿಂದ ಅತ್ಯಾಚಾರ

  ನೇಹಾ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿ ಮತ್ತೊಂದು ಪ್ರಕರಣ

  ಆಪ್ರಾಪ್ತೆ ಗರ್ಭಿಣಿ ಮಾಡಿ ಸ್ಥಳದಿಂದ ಎಸ್ಕೇಪ್​ ಆಗಿದ್ದ ಆರೋಪಿ

ನೇಹಾ ಹತ್ಯೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ದಿನಕ್ಕೊಂದು ಅಘಾತಕಾರಿ ಪ್ರಕರಣಗಳು ಹೊರಬರುತ್ತಿವೆ. ಅನ್ಯಕೋಮಿನ ಯುವಕನೊಬ್ಬ ದಲಿತ ಅಪ್ರಾಪ್ತೆಯನ್ನ ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಘಟನೆ ತೀವ್ರ ಸ್ವರೂಪ ಪಡೆದುಕೊಳ್ತಿದ್ದಂತೆ ಅಲರ್ಟ್ ಆದ ಪೊಲೀಸರು ಯುವಕನನ್ನ ಬಂಧಿಸಿದ್ದಾರೆ.

ನೇಹಾ ಎಂಬ ಯುವತಿಯ ಹತ್ಯೆಗೆ ಅದ್ಯಾವ ಊರು ದಂಗಾಗಿ ಹೋಗಿತ್ತೋ ಅದೇ ಊರಾದ ಹುಬ್ಬಳ್ಳಿಯ ದೃಶ್ಯಗಳಿವು. ನೇಹಾ ಕೇಸ್​ ಮಾಸುವ ಮುನ್ನವೇ ಮತ್ತೊಂದು ಘಟನೆ ಹಿಂದೂ ಕಾರ್ಯಕರ್ತರನ್ನ ಹೀಗೆ ಕೆರಳಿಸಿದೆ.

ಆರೋಪಿ ಸದ್ದಾಂ ಹುಸೇನ್‌

ಅಪ್ರಾಪ್ತೆ ಮೇಲೆ ಅತ್ಯಾಚಾರ.. ಗರ್ಭಿಣಿಯಾದ ಬಾಲಕಿ

ಹುಬ್ಬಳ್ಳಿ ನವನಗರದ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ 16 ವರ್ಷದ ಅಪ್ರಾಪ್ತೆ ಮೇಲೆ ಅನ್ಯಕೋಮಿನ ಯುವಕನೊಬ್ಬ ಅತ್ಯಾಚಾರ ನಡೆಸಿರೋ ಆರೋಪ ಕೇಳಿ ಬಂದಿದೆ. ಹೊಟ್ಟೆ ನೋವಿನಿಂದ ಬಳಲುತಿದ್ದ ಬಾಲಕಿಯನ್ನ ಪೋಷಕರು ಆಸ್ಪತ್ರೆಗೆ ಕರೆದೊಯ್ದಾಗ ಸತ್ಯ ಹೊರಬಿದ್ದಿದೆ. ಆಪ್ರಾಪ್ತೆ ಗರ್ಭಿಣಿಯಾಗಿದ್ದ ವಿಷಯ ತಿಳಿಯುತ್ತಿದ್ದಂತೆ ಆರೋಪಿ‌ ಸದ್ದಾಂ ಹುಸೇನ್‌ ಎಸ್ಕೇಪ್ ಆಗಿದ್ದ.

ನವನಗರ ಠಾಣೆಗೆ ಹಿಂದೂಪರ ಸಂಘಟನೆಗಳ ಮುತ್ತಿಗೆ

ಈ ಪ್ರಕರಣ ಬೆಳಕಿಗೆ ಬಂದು 24 ಗಂಟೆ ಕಳೆದರೂ ಪೊಲೀಸರು ಪ್ರಕರಣ ದಾಖಲಿಸಲು ಮೀನಾಮೇಷ ಏಣಿಸಿದ್ದಾರೆ ಅಂತ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಹೋರಾಟ ತೀವ್ರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕೊನೆಗೂ ಎಫ್ಐಆರ್ ದಾಖಲಿಸಿದ್ರು.

‘ಆರೋಪಿಯನ್ನ ಅರೆಸ್ಟ್​ ಮಾಡಿದ್ದೀವಿ’ 

ಸದ್ದಾಂ ಹಾಗೂ ಅಪ್ರಾಪ್ತೆ ಒಂದೇ ಕಾಲೇಜಿನಲ್ಲಿ ಓದ್ತಿದ್ದರು. ಸ್ನೇಹ, ಸಲುಗೆ ಅಪ್ರಾಪ್ತೆ ಮೇಲೆ ಆರೋಪಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಈ ವಿಚಾರ ಮನೆಯಲ್ಲಿ ಹೇಳಿದ್ರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದನಂತೆ. ಒಟ್ನಲ್ಲಿ ಹುಬ್ಬಳ್ಳಿಯಲ್ಲಿ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸ್ತಿದ್ದು ಜನರ ನಿದ್ದೆಗೆಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇಹಾ ಹತ್ಯೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಪ್ರಕರಣ.. ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ

https://newsfirstlive.com/wp-content/uploads/2024/05/Saddam.jpg

Load More