Advertisment

ಅಹಿತಕರ ಸಂಗತಿಗಳ ಮಧ್ಯೆಯೂ ಒಂದೊಳ್ಳೆ ಸುದ್ದಿ.. 40 ದಿನ ಹಿಂದೂ ಬಾಣಂತಿಯ ಆರೈಕೆ ಮಾಡಿ ಕಳುಹಿಸಿದ ಮುಸ್ಲಿಂ ಕುಟುಂಬ

author-image
Ganesh
Updated On
ಅಹಿತಕರ ಸಂಗತಿಗಳ ಮಧ್ಯೆಯೂ ಒಂದೊಳ್ಳೆ ಸುದ್ದಿ.. 40 ದಿನ ಹಿಂದೂ ಬಾಣಂತಿಯ ಆರೈಕೆ ಮಾಡಿ ಕಳುಹಿಸಿದ ಮುಸ್ಲಿಂ ಕುಟುಂಬ
Advertisment
  • ಬೆಳಗಾವಿಯಲ್ಲಿ ಮುಸ್ಲಿಂ ಕುಟುಂಬದಿಂದ ಮಾನವೀಯ ಕಾರ್ಯ
  • ಹೆರಿಗೆ ನಂತರ ಆಸ್ಪತ್ರೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಬಾಣಂತಿ
  • ಮನೆಗೆ ಕರೆದುಕೊಂಡು ಬಂದು ಆರೈಕೆ ಮಾಡಿದ ಕುಟುಂಬ

ಬೆಳಗಾವಿ: ಜಾತಿ-ಧರ್ಮಗಳ ವಿಚಾರಗಳಿಂದಾಗಿ ಇತ್ತೀಚೆಗೆ ಅಲ್ಲಲ್ಲಿ ಗಲಾಟೆ ಸೇರಿದಂತೆ ಒಂದು ರೀತಿಯ ಅಹಿತಕರ ಘಟನೆಗಳು ನಡೆಯುತ್ತಿವೆ. ಸಮಾಜದಲ್ಲಿನ ಇಂತಹ ವಿಷಮ ಪರಿಸ್ಥಿತಿಯಲ್ಲೂ ಬೆಳಗಾವಿಯಿಂದ ಒಂದೊಳ್ಳೆ ಸುದ್ದಿ ಬಂದಿದೆ.

Advertisment

ಹೆರಿಗೆ ನಂತರ ಪ್ರಜ್ಞೆತಪ್ಪಿದ್ದ ಹಿಂದೂ ಬಾಣಂತಿ ಹಾಗೂ ನವಜಾತ ಶಿಶುವನ್ನು ಮುಸ್ಲಿಂ ಕುಟುಂಬವೊಂದು ಪ್ರೀತಿಯಿಂದ ಆರೈಕೆ ಮಾಡಿದೆ. ಕಳೆದ ಏಪ್ರಿಲ್ 20ರಂದು ಶಾಂತವ್ವ ನಿಡಸೋಸಿ ಎಂಬುವವರಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು.

ಇದನ್ನೂ ಓದಿ:ಎಲ್ಲರ ಕಣ್ಣು ಹಾರ್ದಿಕ್ ಮೇಲೆ.. ಒಂದೇ ಕಲ್ಲಿನಲ್ಲಿ 5 ಹಕ್ಕಿ ಹೊಡೆಯಲು ಪಾಂಡ್ಯ ಪ್ಲಾನ್​​​..!

publive-image

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದಂಡಾಪೂರ ಗ್ರಾಮದ ಬಾಣಂತಿಗೆ ಆಪರೇಷನ್ ಮೂಲಕ ಹೆರಿಗೆ ಮಾಡಲಾಗಿತ್ತು. ಹೆರಿಗೆ ನಂತರ ತೀವ್ರ ರಕ್ತಸ್ರಾವ ಉಂಟಾಗಿ ಬಾಣಂತಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆಗ ಪಕ್ಕದ ಬೆಡ್​ನಲ್ಲಿದ್ದ ರೋಗಿಯ ಸಂಬಂಧಿ ಶಮಾ ದೇಸಾಯಿ ಆರೈಕೆ ಮಾಡಿದ್ದಾರೆ. ಹೆರಿಗೆಯಾದ ಬಾಣಂತಿ ಮಹಿಳೆಯ ಸಂಬಂಧಿಗಳು ಯಾರೂ ಇರದ ಹಿನ್ನೆಲೆಯಲ್ಲಿ ತಾಯಿ ಹಾಗೂ ಶಿಶುವನ್ನು ಮುಸ್ಲಿಂ ಕುಟುಂಬ ನೋಡಿಕೊಂಡಿದೆ.

Advertisment

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್​.. ಇವತ್ತಿನಿಂದ ಹಾಲಿನ ದರ ಮತ್ತಷ್ಟು ಏರಿಕೆ

publive-image

ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಆರು ದಿನಗಳ ಕಾಲ ಬಾಣಂತಿ‌ ಮಹಿಳೆ ಹಾಗೂ ಮಗುವಿನ ಆರೈಕೆ ಮಾಡಿದೆ. ಅಷ್ಟೇ ಅಲ್ಲ ಮಗವನ್ನ ತಮ್ಮ ಮನೆಗೆ ಕರೆದೊಯ್ದು 40 ದಿನಗಳ ಕಾಲ ಆರೈಕೆ ಮಾಡಿದೆ. ತಾಯಿ ಸಂಪೂರ್ಣ ಚೇತರಿಸಿಕೊಂಡ ನಂತರ ಪೊಲೀಸರ ಸಮ್ಮುಖದಲ್ಲಿ ತಾಯಿ ಹಾಗೂ ಮಗುವನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೊಳ್ಳೆ ಮನವೀಯ ಕೆಲಸ ನಡೆದಿದೆ.

ಇದನ್ನೂ ಓದಿ:ಈ ಮಹಿಳೆ ಸತ್ತ ನಂತರವೂ 14 ವರ್ಷಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡಿದಳು.. ಇದೆಲ್ಲ ಹೇಗೆ ಸಾಧ್ಯ..?

Advertisment

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment