/newsfirstlive-kannada/media/post_attachments/wp-content/uploads/2025/01/a-mysterious-illness.jpg)
ಜಮ್ಮು ಕಾಶ್ಮೀರವನ್ನು ನಿಗೂಢ ಕಾಯಿಲೆಯೊಂದು ವಿಪರೀತವಾಗಿ ಕಾಡುತ್ತಿದೆ ಅದರಲ್ಲೂ ರಜೌರಿ ಪ್ರದೇಶದಲ್ಲಿ ಈ ನಿಗೂಢ ಕಾಯಿಲೆಗೆ ಒಟ್ಟು 17 ಮಂದಿ ಬಲಿಯಾಗಿದ್ದಾರೆ. ಒಂದೇ ಕುಟುಂಬದ ಮೂರು ಜನರು ಸೇರಿ ಒಟ್ಟು 17 ಜನರು ಅಸಹಜ ಸಾವಿಗೆ ಗುರಿಯಾಗಿದ್ದಾರೆ. ಬಾದಲ್ ಗ್ರಾಮದಲ್ಲಿನ ಈ ಸರಣಿ ಸಾವಿನಿಂದ ಆತಂಕ ಸೃಷ್ಟಿಯಾಗಿದೆ. 17 ಜನರ ಈಗಾಗಲೇ ಪ್ರಾಣಬಿಟ್ಟಿದ್ದು ಇನ್ನೂ ಮೂವರು ಜನರು ಅಸ್ವಸ್ಥಗೊಂಡಿದ್ದು ಅಲ್ಲಿಯ ಜನರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ.
ನಿಗೂಢ ಕಾಯಿಲೆ ಹರಡುತ್ತಿರುವುದರಿಂದ ಜಿಲ್ಲಾಡಳಿತ ಅಲರ್ಟ್ ಆಗಿದೆ. ಇಡೀ ಗ್ರಾಮವನ್ನ ಕಂಟೈನ್ಮೆಂಟ್ ವಲಯಾಗಿ ಘೋಷಣೆ ಮಾಡಿದೆ. ಗ್ರಾಮವನ್ನು ಮೂರು ಭಾಗಗಳಾಗಿ ವಿಂಗಡಿಸಿ ಕಂಟೈನ್ಮೆಂಟ್ ಎಂದು ಘೋಷಿಸಿದೆ. ಇನ್ನು ಕಾಯಿಲೆಯ ಬಗ್ಗೆ ಹಾಗೂ ಜನರ ಆರೋಗ್ಯದ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದೆ.
ಇದನ್ನೂ ಓದಿ:ವೈರಲ್ ಹುಡುಗಿಯ ಬಡತನದ ಬದುಕು.. ಒಂದೇ ಕೋಣೆಯ ಮನೆ.. ಹೇಗಿದೆ ಜೀವನ..?
ಇನ್ನು ನಿಗೂಢವಾಗಿ ಸಾವನ್ನಪ್ಪಿದವರ ಮನೆಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ಎಲ್ಲಾ ರೀತಿಯ ಸಾರ್ವಜನಿಕ ಹಾಗೂ ಖಾಸಗಿ ಸಭೆಗಳಿಗೆ ಅಲ್ಲಿ ನಿಷೇಧ ಹೇರಲಾಗಿದೆ. ಇಡೀ ಗ್ರಾಮದ ಮೇಲೆ ನಿಗಾ ವಹಿಸಲು ವಿಶೇಷ ಅಧಿಕಾರಿಗಳ ನೇಮಕವನ್ನು ಕೂಡ ಮಾಡಲಾಗಿದೆ. ಆಸ್ಪತ್ರೆಗಳು ಸದಾ ಚಿಕಿತ್ಸೆಗೆ ಸಿದ್ಧವಾಗಿರುವಂತೆ ಖುದ್ದು ಸಿಎಂ ಆದೇಶ ಹೊರಡಿಸಿದ್ದಾರೆ. ಸಾವನ್ನಪ್ಪಿದವರ ಮಾದರಿಗಳನ್ನು ಸಂಗ್ರಹಿಸಿ ಆರೋಗ್ಯಾಧಿಕಾರಿಗಳು ಪರೀಕ್ಷೆ ನಡೆಸುತ್ತಿದ್ದಾರೆ. ಗ್ರಾಮದ ನೀರಿನಲ್ಲಿ ವಿಷಕಾರಕ ಅಂಶಗಳ ಪತ್ತೆಗೂ ಕೂಡ ತಂಡವನ್ನು ರಚನೆ ಮಾಡಲಾಗಿದೆ. ಇನ್ನು ಗ್ರಾಮಗಳನ್ನು ಮೂರು ವಲಯಗಳನ್ನಾಗಿ ದಿಗ್ಬಂಧನ ಮಾಡಲಾಗಿದೆ
ಇದನ್ನೂ ಓದಿ:ಆಸ್ಪತ್ರೆಯಿಂದ ಬರ್ತಿದ್ದಂತೆ ಬಿಗ್ ಶಾಕ್.. 15 ಸಾವಿರ ಕೋಟಿ ಆಸ್ತಿ ನಷ್ಟ..? ಸೈಫ್ ಬದುಕಲ್ಲಿ ಏನಾಗ್ತಿದೆ?
ಮೊದಲನೇ ವಲಯ: 17 ಮಂದಿ ಸಾವನ್ನಪ್ಪಿರೋ ಪ್ರದೇಶ ಇದಾಗಿದ್ದು, ಇದನ್ನು ಫುಲ್ ಲಾಕ್ ಮಾಡಲಾಗಿದೆ. ಯಾವುದೇ ಜನರಿಗೆ ಇಲ್ಲಿ ಪ್ರವೇಶವಿಲ್ಲ ಹಾಗೂ ಮೃತರ ಮನೆಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ಇನ್ನು ಈ ಪ್ರದೇಶಕ್ಕೆ ಹೋಗುವವರಿಗೆ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಎರಡನೇ ವಲಯ : ಮೃತ ವ್ಯಕ್ತಿಗಳ ನಿಕಟ ಸಂಪರ್ಕದಲ್ಲಿರುವವರು ವಾಸಿಸುತ್ತಿವ ಜಾಗ ಇದಾಗಿದ್ದು. ಈ ವಲಯದಲ್ಲಿರೋ ಹಲವರಿಗೆ ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದ ಈ ಪ್ರದೇಶಕ್ಕೆ ಅನಗತ್ಯವಾಗಿ ಹೋಗದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಮೂರನೇ ವಲಯ: ಒಂದು ಮತ್ತು ಎರಡನೇ ವಲಯ ಹೊರತು ಪಡೆಸಿದ ಗ್ರಾಮದ ಜಾಗವನ್ನು ಮೂರನೇ ವಲಯ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಈ ಭಾಗ ಇರೋದ್ರದಲ್ಲಿ ಸುರಕ್ಷಿತ ಪ್ರದೇಶ ಎಂದು ಪರಿಗಣಿಸಲಾಗಿದೆ. ಅಗತ್ಯ ಮುಂಜಾಗೃತೆವಹಿಸುವಂತೆ ಈ ವಲಯದವರಿಗೂ ಸೂಚನೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ