/newsfirstlive-kannada/media/post_attachments/wp-content/uploads/2025/02/NAGPURI-COUPLE-SAFFRON.jpg)
ಛಲವೊಂದಿದ್ದರೆ ಸಾಕು ಗೆಲುವಿನ ಮೆಟ್ಟಿಲುಗಳನ್ನು ಸರಾಗವಾಗಿ ಹತ್ತಿಕೊಂಡು ಹೋಗಬಹುದು ಎನ್ನುವುದಕ್ಕೆ ನಾಗಪುರದ ಈ ದಂಪತಿಗಳೇ ಸಾಕ್ಷಿ. ನಾಗಪುರದ ಈ ದಂಪತಿ ಯಾರು ಊಹಿಸಲಾರದಂತಹ ಒಂದು ಸಾಧನೆಯನ್ನು ಮಾಡಿದ್ದಾರೆ. ಜಗತ್ತಿನ ಅತ್ಯಂತ ದುಬಾರಿ ಮಸಾಲೆ ಪದಾರ್ಥ ಎನಿಸಿಕೊಳ್ಳುವ ಹೆಚ್ಚಾಗಿ ಕಾಶ್ಮೀರದಲ್ಲಿಯೇ ಬೆಳೆಯುವ ಬೆಳೆಯನ್ನು ತಮ್ಮ 400 ಸ್ಕ್ವೇರ್ ಫೀಟ್ ರೂಮ್​ನಲ್ಲಿ ಬೆಳೆದು ವರ್ಷಕ್ಕೆ 50 ಲಕ್ಷ ರೂಪಾಯಿ ಗಳಿಸಿ ಹೊಸ ಸಾಧನೆ ಮಾಡಿದ್ದಾರೆ.
ಅಕ್ಷಯ್ ಹೊಲೆಯ್​ ಬಿಬಿಎ ಪದವಿಧರ ಅವರ ಪತ್ನಿ ದಿವ್ಯಾ ಲೋಹಕರೆ ಹೊಲೆಯ್ ಬ್ಯಾಂಕರ್​ ಈ ದಂಪತಿ ನಾಗಪುರದ ಲೋಕಸೇವಾ ನಗರ್​ದ ಏರಿಯಾದಲ್ಲಿರುವ ತಮ್ಮ ಮನೆಯ ಟೆರಸ್​ ಮೇಲೆಯೇ ವಿಶ್ವದ ದುಬಾರಿ ಮಸಾಲೆಯಾದ ಕೇಸರಿಯನ್ನು ಬೆಳೆಯಲು ನಿರ್ಧರಿಸುತ್ತಾರೆ. ಕಾಶ್ಮೀರದ ಅತ್ಯಂತ ತಂಪಾದ ಹವೆಯಲ್ಲಿ ಬೆಳೆಯುವ ಕೇಸರಿಯನ್ನು ಸದಾ ಕುದಿಯುವ ನಾಗಪುರದಲ್ಲಿ ಬೆಳೆಯಲು ಎರಡು ವರ್ಷಗಳ ಹಿಂದೆಯೇ ನಿರ್ಧರಿಸುತ್ತಾರೆ. ಕೇಸರಿ ಕೃಷಿಯ ಬಗ್ಗೆ ಬೇಕಾದ ಪ್ರಮುಖ ಅಧ್ಯಯನಗಳನ್ನು ಮಾಡಿ ತಮ್ಮ ಮನೆಯ ಟೆರಸ್​ ಮೇಲೆ ಬೆಳೆಯಲು ಆರಂಭಿಸುತ್ತಾರೆ.
ಇದನ್ನೂ ಓದಿ: ಮದುವೆಯಲ್ಲಿ ದಾಖಲೆ ಬರೆದ ಭಾರತದ ಈ ಉದ್ಯಮಿ ಯಾರು? ಜಿನ್ಹಾ ತಂಗಿಯೊಂದಿಗೂ ಇತ್ತು ಪ್ರೇಮ ಪುರಾಣ..!
ಆರಂಭದಲ್ಲಿ ಅವರು 100 ಕೇಸರಿ ಬೀಜಗಳನ್ನು ತಂದು ಅಂದ್ರೆ ಒಂದು ಕೆಜಿ ಸಫ್ರಾನ್ ಬೀಜಗಳನ್ನು ತಂದು ಅದರಲ್ಲಿ ಕೆಲವು ಗ್ರಾಮ್​​ಗಳಷ್ಟು ಬೀಜಗಳನ್ನು ಬಿತ್ತಿ ಅವುಗಳ ಬೆಳವಣಿಗೆಯನ್ನು ನೋಡುತ್ತಾರೆ. ಅದಾದ ಬಳಿಕ ಅವರು ತಮ್ಮ ಬೆಳೆಯನ್ನು ವಿಸ್ತರಿಸುತ್ತಾರೆ ಒಟ್ಟು 350 ಕೆಜಿ ಬೀಜಗಳನ್ನು ತಂದು 1,600 ಗ್ರಾಂಗಳಷ್ಟು ಬೆಳೆಯನ್ನು ಬೆಳೆದೆವು. ಅಂದನಿಂದ ನಾವು 480 ಸ್ಕ್ವೇರ್​ ಮೀಟರ್​ನಲ್ಲಿ ಮನೆಯ ಎರಡು ಜಾಗಗಳಲ್ಲಿ ಬೆಳೆಯಲು ಆಂಭಿಸಿದೆವು ನಮ್ಮ ಶ್ರಮ ನಿಜವಾಗಿ ಸಾರ್ಥಕವಾಗಲು ಶುರುವಾಯ್ತು ಇಬ್ಬರು ಸೇರಿ ಎರಡು ವರ್ಷದಲ್ಲಿ ನಾವು ವರ್ಷಕ್ಕೆ 40 ಲಕ್ಷದಿಂದ 50 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ನಾವು ಒಟ್ಟು ಈ ಬೆಳೆಯನ್ನು ಬೆಳೆಯಲು ಒಟ್ಟು 150 ತರಬೇತಿ ನೀಡಿದೇವು. ಅದರಲ್ಲಿ 29 ಜನರು ಯಶಸ್ವಿಯಾಗಿ ನಮ್ಮಂತೆಯೇ ಬೆಳೆಯನ್ನು ಬೆಳೆದು ಆದಾಯ ಗಳಿಸುತ್ತಿದ್ದಾರೆ. ಹೀಗೆ ತರಬೇತಿ ನೀಡುವವರ ಪ್ರತಿಯೊಬ್ಬರು 15 ಸಾವಿರ ರೂಪಾಯಿ ನೀಡಿದ್ದಾರೆ ಎಂದು ಹೇಳಿದ್ದಾರೆ. ನಂತರ ನಾವು ಮತ್ತೆ ಕೇಸರಿಯನ್ನು ಪ್ಯಾಕಿಂಗ್ ಹಾಗೂ ಮಾರ್ಕೆಟಿಂಗ್ ಕೂಡ ಮಾಡಲು ಆರಂಭಿಸಿದೆವು ಎಂದು ಹೇಳಿದ್ದಾರೆ.
ವರ್ಷದಿಂದ ವರ್ಷಕ್ಕೆ ಉತ್ಪಾದನೆ ಹೆಚ್ಚುತ್ತಲೇ ಹೋಯ್ತು. ಕೊನೆಗೆ 45 ಕೆಜಿಯಷ್ಟು ಕೇಸರಿ ಉತ್ಪಾದನೆ ಮಾಡಿದೆವು. ಅಂದ್ರೆ 100 ಸ್ಕ್ವೇರ್​​ ಯುನಿಟ್ಸ್​​ಗೆ ನಮಗೆ ಸುಮಾರು 10 ಲಕ್ಷ ರೂಪಾಯಿ ಖರ್ಚಾಗುತ್ತಿತ್ತು. ಇಲ್ಲಿ ನಮಗೆ ವರ್ಷಕ್ಕೆ ಐದು ಲಕ್ಷ ರೂಪಾಯಿ ಆದಾಯ ತಂದುಕೊಡುವ ಕೇಸರಿ ಉತ್ಪಾದನೆಯಾಗುತ್ತಿತ್ತು ಎಂದು ಅಕ್ಷಯ್ ದಿವ್ಯಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us