newsfirstkannada.com

ಕರಾವಳಿಯಲ್ಲಿ ತಲೆದೋರಿದ ಮತ್ಸ್ಯ ಕ್ಷಾಮ; ಮೀನುಗಾರರ ಕೆಂಗಣ್ಣಿಗೆ ಗುರಿಯಾದ ಲೈಟ್​​ ಫಿಶಿಂಗ್​​​

Share :

Published February 26, 2024 at 6:35am

    ಬಂದರಿನಲ್ಲೇ ಲಂಗರು ಹಾಕಿ ಬೀಡು ಬಿಟ್ಟ ದೋಣಿಗಳು!

    ಕರ್ನಾಟಕ ಕರಾವಳಿಯಲ್ಲಿ ತಲೆ ದೋರಿದ ಮತ್ಸ್ಯ ಕ್ಷಾಮ

    ಹೊರ ರಾಜ್ಯದವ್ರಿಂದ ಕರಾವಳಿಯಲ್ಲಿ ಮೀನುಗಾರಿಕೆ

ಮಂಗಳೂರು: ಕರಾವಳಿ ಜನರಿಗೆ ಮೀನುಗಾರಿಕೆಯೇ ಜೀವಾಳ. ಅದೆಷ್ಟೋ ಜನರಿಗೆ ಮೀನುಗಾರಿಕೆಯೇ ಇವರ ಜೀವನಕ್ಕೆ ಆಧಾರ. ಆದ್ರೀಗ ಕಡಲ ಮಕ್ಕಳಿಗೆ ಸಂಕಷ್ಟ ಎದುರಾಗಿದೆ. ಆಳ ಸಮುದ್ರಕ್ಕೆ ತೆರಳಿದ್ರೂ ಮೀನುಗಳು ಬಲೆಗೆ ಬೀಳದೇ ಮತ್ಸ್ಯಬರ ಬಂದೊದಗಿದೆ. ಮೀನುಗಾರಿಕೆಗೆ ತೆರಳದೇ ದಡದಲ್ಲೇ ಲಂಗರು ಹಾಕಿ ನಿಂತಿವೆ. ಕರ್ನಾಟಕ ಕರಾವಳಿಯಲ್ಲಿ ನಿಷೇಧಿತ ಬುಲ್ ಟ್ರಾಲ್ ಮತ್ತು ಲೈಟ್ ಫಿಶಿಂಗ್‌ನಿಂದಾಗಿ ಮತ್ಸ್ಯ ಕ್ಷಾಮ ತಲೆದೋರಿದೆ.

ಆಳ ಸಮುದ್ರಕ್ಕೂ ಇಳಿದ್ರೂ ಬಲೆಗೆ ಬೀಳ್ತಿಲ್ಲ ಮೀನುಗಳು

ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ನೂರಾರು ದೋಣಿಗಳು ಲಂಗರು ಹಾಕಿ ಬೀಡು ಬಿಟ್ಟಿವೆ. ಮೀನುಗಾರಿಕೆಗೆ ತೆರಳದೇ ಶೇಕಡಾ 85ರಷ್ಟು ದೋಣಿಗಳು ಕರಾವಳಿ ತಟದಲ್ಲೇ ನಿಂತಿದ್ದು ಭಾರೀ ನಷ್ಟದಲ್ಲಿದೆ. ಕಳೆದ ಎರಡು ತಿಂಗಳಿನಿಂದ ಆಳ ಸಮುದ್ರಕ್ಕೆ ತೆರಳಿದ್ರೂ ಕೂಡ ಕಡಲ ಮಕ್ಕಳ ಬಲೆಗೆ ಮಾತ್ರ ಮೀನುಗಳು ಬೀಳ್ತಿಲ್ಲ. ಇದಕ್ಕೆಲ್ಲಾ ಕಾರಣ ಹುಡುಕ್ತಾ ಹೋದ್ರೆ ಕರ್ನಾಟಕ ಕರಾವಳಿಯಲ್ಲಿ ನಿಷೇಧಿತ ಬುಲ್ ಟ್ರಾಲ್ ಮತ್ತು ಲೈಟ್ ಫಿಶಿಂಗ್‌ ಅನ್ನು ನಡೆಸ್ತಾ ಇದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಕರಾವಳಿಯಲ್ಲಿ ಹೊರ ರಾಜ್ಯದವ್ರಿಂದ ಲೈಟ್ ಫಿಶಿಂಗ್

ರಾಜ್ಯದ ಕರಾವಳಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಹೊರತುಪಡಿಸಿ ಲೈಟ್ ಫಿಶಿಂಗ್‌ ಹಾಗೂ ಬುಲ್‌ ಟ್ರಾಲ್ ಮೀನುಗಾರಿಕೆಯನ್ನ ನಿಷೇಧಿಸಲಾಗಿದೆ. ಆದ್ರೆ ಕೇರಳ ಹಾಗೂ ತಮಿಳುನಾಡು ಮೀನುಗಾರರು ಕರ್ನಾಟಕ ಕರಾವಳಿಯಲ್ಲಿ ಲೈಟ್ ಫಿಶಿಂಗ್ ನಡೆಸ್ತಿದ್ದು ಇದು ಸಾಂಪ್ರದಾಯಿಕ ಮೀನುಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಮೀನುಗಾರಿಕಾ ಬೋಟಿನಲ್ಲಿ ಜನರೇಟರ್ ಹಾಗೂ ದೊಡ್ಡ ದೊಡ್ಡ ಲೈಟ್‌ಗಳನ್ನ ಅಳವಡಿಸಿಕೊಂಡು ಮೀನುಗಾರಿಕೆ ನಡೆಸಲಾಗುತ್ತೆ. ಬೆಳಕಿಗೆ ಆಕರ್ಷಿತವಾಗಿ ಮೀನುಗಳು ಬಲೆಗೆ ಬೀಳೋದು ಮಾತ್ರವಲ್ಲದೇ ಸಣ್ಣ ಸಣ್ಣ ಮೀನುಗಳು ಸಹ ಸಾವನ್ನಪ್ಪುತ್ತಿವೆ.

ಹೀಗಾಗಿ ನಿಷೇಧಿತ ಮೀನುಗಾರಿಕೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ಕರಾವಳಿ ಮೀನುಗಾರರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ನಿಷೇಧವಿರೋ ಮೀನುಗಾರಿಕೆಯನ್ನ ನಡೆಸ್ತಿದ್ರೂ ಇನ್ನು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ನಮ್ಮ ಕಡಲ ಮಕ್ಕಳಿಗೆ ಮೀನು ಸಿಗದೇ ಇರೋದ್ರಿಂದ ಜೀವನ ಕಷ್ಟವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಅನ್ನೋದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರಾವಳಿಯಲ್ಲಿ ತಲೆದೋರಿದ ಮತ್ಸ್ಯ ಕ್ಷಾಮ; ಮೀನುಗಾರರ ಕೆಂಗಣ್ಣಿಗೆ ಗುರಿಯಾದ ಲೈಟ್​​ ಫಿಶಿಂಗ್​​​

https://newsfirstlive.com/wp-content/uploads/2024/02/fishing.jpg

Load More