newsfirstkannada.com

ಪರೀಕ್ಷೆಯಲ್ಲಿ ಕಾಪಿ ಹೊಡೆಯೋದನ್ನ ತಡೆಯಲು ಉತ್ತರಪ್ರದೇಶದಲ್ಲಿ ಹೊಸ ಪ್ರಯೋಗ; ಆದರೆ ಆಗಿದ್ದೇನು?

Share :

Published February 23, 2024 at 4:32pm

    10 ಮತ್ತು 12ನೇ ತರಗತಿಯ ಪರೀಕ್ಷೆಗೆ ಹದ್ದಿನ ಕಣ್ಣಿಟ್ಟ ಸರ್ಕಾರ

    ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಸಿಸಿಟಿವಿ ಕಣ್ಗಾವಲು

    ಸರ್ಕಾರದ ನಿರ್ಧಾರಕ್ಕೆ ಸೆಡ್ಡು ಹೊಡೆದ 3 ಲಕ್ಷ ವಿದ್ಯಾರ್ಥಿಗಳು ಚಕ್ಕರ್

ಲಕ್ನೋ: ಉತ್ತರಪ್ರದೇಶ ರಾಜ್ಯಾದ್ಯಂತ 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷೆ ಆರಂಭವಾಗಿದೆ. ಪ್ರತಿ ವರ್ಷ ನಡೆಯೋ ಈ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಹಾಗೂ ಡಿಬಾರ್ಡ್‌ ಆಗುವ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗಿತ್ತು. ಹೀಗಾಗಿ ಈ ಬಾರಿ ಉತ್ತರಪ್ರದೇಶ ಸರ್ಕಾರ ಬೋರ್ಡ್‌ ಪರೀಕ್ಷೆಯನ್ನು ಕಟ್ಟು ನಿಟ್ಟಾಗಿ ನಡೆಸಲು ಮುಂದಾಗಿದೆ. ಈ ಪರೀಕ್ಷೆಯ ಮೊದಲ ದಿನವೇ 3 ಲಕ್ಷ ವಿದ್ಯಾರ್ಥಿಗಳು ಚಕ್ಕರ್ ಹಾಕೋ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.

ಉತ್ತರ ಪ್ರದೇಶ ರಾಜ್ಯದಲ್ಲಿ ಇಂದು ಹದ್ದಿನ ಕಣ್ಗಾವಲಿನೊಂದಿಗೆ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ ಯುಪಿ ಪರೀಕ್ಷಾ ಮಂಡಳಿಯ ಈ ನಿರ್ಧಾರಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಒಟ್ಟು 55 ಲಕ್ಷ ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆಗೆ ಹಾಜರಾಗಬೇಕಿತ್ತು. ಆದರೆ 3 ಲಕ್ಷ 33 ಸಾವಿರದ 541 ಅಧಿಕ ವಿದ್ಯಾರ್ಥಿಗಳು ಇಂದಿನ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.

ಉತ್ತರಪ್ರದೇಶದಲ್ಲಿ ನಡೆಯುವ ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬೀಳುವ ಪ್ರಕರಣ ಹೆಚ್ಚಾಗಿತ್ತು. ಹೀಗಾಗಿ ಪರೀಕ್ಷಾ ಮಂಡಳಿ ಕಾಪಿ ಹೊಡೆಯುವುದನ್ನ ತಪ್ಪಿಸಲು ಸಿಸಿಟಿವಿ ಹಾಗೂ ಭಾರೀ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ. ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ವಿದ್ಯಾರ್ಥಿಗಳ ಐಡಿ ಕಾರ್ಡ್‌, ಬಾರ್‌ ಕೋಡ್‌ ಮೂಲಕ ಚೆಕ್ಕಿಂಗ್ ಹಾಗೂ ತೀವ್ರ ಪರಿಶೀಲನೆಯನ್ನು ಮಾಡಲಾಗಿದೆ.

ಇದನ್ನೂ ಓದಿ: ಪರೀಕ್ಷೆಯಲ್ಲಿ ತಂಗಿಗೆ ಕಾಪಿ ಚೀಟಿ ಕೊಡಲು ನಕಲಿ ಪೊಲೀಸ್ ಆದ ಅಣ್ಣ; ಸೆಲ್ಯೂಟ್ ಮಾಡುವ ವೇಳೆ ಸಿಕ್ಕಿಬಿದ್ದ..!

10 ಮತ್ತು 12 ನೇ ತರಗತಿಯ ಬೋರ್ಡ್‌ ಪರೀಕ್ಷೆಯಲ್ಲಿ ಹಿಂದೆಂದೂ ಕಾಣದಂತಹ ಪರಿಶೀಲನೆಗೆ ಸರ್ಕಾರ ಸೂಚನೆ ನೀಡಿತ್ತು. ಈ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆ ಇಂದು ಎಲ್ಲಾ ಪರೀಕ್ಷಾ ಕೇಂದ್ರಗಳ ಮೇಲೆ ಹದ್ದಿನ ಕಣ್ಣು ಹಿಡಲಾಗಿತ್ತು. ಇಷ್ಟಾದ್ರೂ ಮತ್ತೆ ಪರೀಕ್ಷೆಯಲ್ಲಿ ಕಾಪಿ ಮಾಡಲು ಹೋದ 5 ವಿದ್ಯಾರ್ಥಿಗಳು ಇಂದು ಸಿಕ್ಕಿಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪರೀಕ್ಷೆಯಲ್ಲಿ ಕಾಪಿ ಹೊಡೆಯೋದನ್ನ ತಡೆಯಲು ಉತ್ತರಪ್ರದೇಶದಲ್ಲಿ ಹೊಸ ಪ್ರಯೋಗ; ಆದರೆ ಆಗಿದ್ದೇನು?

https://newsfirstlive.com/wp-content/uploads/2024/02/UP-Exam-CCTV.jpg

Load More