newsfirstkannada.com

ಇಂದೇ ರಾಜೀನಾಮೆ.. ಇಂದೇ ಪ್ರಮಾಣ ವಚನ; ಹೊಸ ದಾಖಲೆ ಬರೆಯಲು ಸಜ್ಜಾದ CM ನಿತೀಶ್ ಕುಮಾರ್‌!

Share :

Published January 28, 2024 at 6:26am

    ಕಾಂಗ್ರೆಸ್​ನ ಹಠಮಾರಿತನದಿಂದ ಈ ಸ್ಥಿತಿ ಎಂದ ಜೆಡಿಯು ನಾಯಕರು

    ಮೊದಲು ಇಂಡಿಯಾ ಒಕ್ಕೂಟದಿಂದ ಟಿಎಂಸಿ, ನಂತರ ಜೆಡಿಯು ಪಕ್ಷ ಔಟ್​​

    ಸಿಎಂ ನಿತೀಶ್ ಕುಮಾರ್ ಪಟ್ಟಾಭಿಷೇಕಕ್ಕೆ ಸಾಕ್ಷಿಯಾಗಲಿದ್ದಾರೆ ಜೆ.ಪಿ ನಡ್ಡಾ!

ಮೈತ್ರಿ ಸರ್ಕಾರಗಳ ಆಯುಷ್ಯನೇ ಕಡಿಮೆ. ರಾಜ್ಯ ಯಾವುದೇ ಇರಲಿ, ದೋಸ್ತಿ ಸರ್ಕಾರದ ಬಾಳಿಕೆ ಹಗ್ಗದ ಮೇಲಿನ ನಡಿಗೆ ಇದ್ದಂತೆ. ಆದ್ರಲ್ಲೂ ಬಿಹಾರದಲ್ಲಿ ಮೈತ್ರಿ ಸರ್ಕಾರಗಳು ಪತನಗೊಂಡಿರೋದು ಒಂದೆರಡು ಬಾರಿಯಲ್ಲ. ಇದೀಗ ಜೆಡಿಯು-ಆರ್​​ಜೆಡಿ ಮೈತ್ರಿ ಸರ್ಕಾರ ಸಹ ಪತನದ ಹಂತಕ್ಕೆ ತಲುಪಿದೆ. ಬಿಹಾರದಲ್ಲಿ ಮತ್ತೊಮ್ಮೆ ಬಿಜೆಪಿ ಬಾಗಿಲಲ್ಲಿ ನಿತೀಶ್​​ಕುಮಾರ್​​​​ ನಿಂತಿದ್ದಾರೆ.

ಹೌದು.. ಬಿಹಾರ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎದ್ದಿದೆ. ಲೋಕಸಭೆ ಎಲೆಕ್ಷನ್​​ ಹೊಸ್ತಿಲಲ್ಲಿ ಶುರುವಾದ ಪಗಡೆ ಆಟ, ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿ ಬಿಸಾಕಿದೆ. ಯಾವಾಗ ಏನು ಆಗುತ್ತೆ ಎಂಬ ಅಂದಾಜು ಸಿಗದ ಗೊಜಲು. ಇವತ್ತು ಮಿತ್ರರೂ, ಇಂದು ವಿರೋಧಿಗಳು ಅನ್ನೋದು ಬಿಹಾರದ ರಾಜಕಾರಣದಲ್ಲಿ ಪದೇ ಪದೇ ಸಾಬಿತಾಗ್ತಿದೆ. ನಿತೀಶ್​​​ ಆಡಿದ ರಾಜಕೀಯ ಚದುರಂಗಕ್ಕೆ ಸರ್ಕಾರ ಮತ್ತೊಮ್ಮೆ ಪಲ್ಟಿ ಆಗಲಿದೆ.

ಬಿಹಾರದಲ್ಲಿ ಎನ್​​ಡಿಎ ಕೂಟ ಸೇರಲು ನಿತೀಶ್​​ ಸಜ್ಜು!

ಪಾಟ್ನಾದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದು, ಬಿಜೆಪಿ ಮಹತ್ವದ ಸಭೆ ನಡೆಸಿದೆ. ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಸಾಮ್ರಾಟ್ ಚೌಧರಿ ಸೇರಿದಂತೆ ಪಕ್ಷದ ಪ್ರಮುಖರ ನೇತೃತ್ವದಲ್ಲಿ ಸಭೆ ಆಗಿದ್ದು, ಸಭೆಯಲ್ಲಿ ಬಿಜೆಪಿ ಸಂಸದರು ಮತ್ತು ಶಾಸಕರು ಭಾಗಿ ಆಗಿದ್ರು. ಸಭೆಯಲ್ಲಿ ಪಾಟ್ನಾ ಬಿಟ್ಟು ಎಲ್ಲೂ ಹೋಗದಂತೆ ಬಿಜೆಪಿ ಶಾಸಕರಿಗೆ ಹುಕುಂ ಜಾರಿ ಮಾಡಲಾಗಿದೆ. ಇಂದು ಬೆಳಗ್ಗೆ ಮತ್ತೊಮ್ಮೆ ಸಭೆ ಸೇರಲು ತೀರ್ಮಾನ ಕೈಗೊಳ್ಳಲಾಗಿದೆ.

ಇಂದು ಪಾಟ್ನಾಗೆ ತೆರಳಲಿರುವ ಜೆ.ಪಿ ನಡ್ಡಾ!

ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಕೂಡ ಪಾಟ್ನಾಗೆ ತೆರಳ್ತಿದ್ದಾರೆ. ಬಿಹಾರದ ಪ್ರತಿ ಬೆಳವಣಿಗೆಯನ್ನ ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಈ ಮೂಲಕ 42 ಲೋಕಸಭಾ ಕ್ಷೇತ್ರಗಳನ್ನ ಹೊಂದಿರುವ ಬಿಹಾರವನ್ನ ಬಿಜೆಪಿ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಅನ್ನೋದು ಗೊತ್ತಾಗ್ತಿದೆ. ಮೂಲಗಳ ಪ್ರಕಾರ ಸಿಎಂ ನಿತೀಶ್ ಕುಮಾರ್ ಅವರು ಇಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬೆಳಗ್ಗೆ ರಾಜೀನಾಮೆ ಸಲ್ಲಿಸಿದ್ರೆ ಕೆಲವೇ ಹೊತ್ತಿನಲ್ಲಿ ಮತ್ತೆ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಮುಖ್ಯಮಂತ್ರಿಯಾಗಿ ನಿತೀಶ್​​​ ಅವರ 9ನೇ ಪ್ರಮಾಣ ವಚನದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರೇ ಭಾಗಿ ಆಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳ್ತಿವೆ.

ಇಂದು ಬೆಳಗ್ಗೆ 10 ಗಂಟೆಗೆ ಜೆಡಿಯು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಸಭೆ ಬಳಿಕ ತಮ್ಮ ನಿರ್ಧಾರವನ್ನ ನಿತೀಶ್​​​ ಪ್ರಕಟಿಸುವ ಸಾಧ್ಯತೆ ಇದೆ. ಇತ್ತ, ಆರ್​​ಜೆಡಿ ಸಹ ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದೆ. ತೇಜಸ್ವಿ ನಿವಾಸದಲ್ಲಿ ಸರಣಿ ಸಭೆ ನಡೆಸ್ತಿದೆ. ಖುದ್ದು ಲಾಲೂ ಯಾದವ್​ ಅಖಾಡಕ್ಕೆ ಇಳಿದಿದ್ದು, ಮ್ಯಾಜಿಕ್​ ನಂಬರ್​​ 122 ತಲುಪಲು ಕೇವಲ 8 ಶಾಸಕರ ಅಗತ್ಯ ಇದೆ ಅಂತ ಹೇಳಿಕೊಂಡಿದೆ. ಇನ್ನೊಂದ್ಕಡೆ ನಿತೀಶ್​​ ಸಂಪರ್ಕಕ್ಕೆ ಲಾಲೂ ಮತ್ತು ತೇಜಸ್ವಿ ಯಾದವ್​ ನಡೆಸ್ತಿರುವ ನಿರಂತರ ಯತ್ನ ವಿಫಲವಾಗಿದೆ.

ಬಿಜೆಪಿ, ಆರ್​ಜೆಡಿ, ‘ಕೈ’ ಪಡೆಯಿಂದ ಸಂಪರ್ಕ ಕ್ರಾಂತಿ!

ಬಿಹಾರ ರಾಜಕಾರಣದಲ್ಲಿ ಜಿತನ್​ರಾಮ್​ ಮಾಂಝಿಗೆ ಭಾರೀ ಡಿಮ್ಯಾಂಡ್​​ ಬಂದಿದೆ. ಎರಡು ಕೂಟಗಳು ಮಾಂಝಿ ಸಂಪರ್ಕಿಸ್ತಿವೆ. ಸ್ವತಃ ರಾಹುಲ್​ ಗಾಂಧಿ ಖುದ್ದಾಗಿ ಫೋನ್​ ಮಾಡಿದ್ದಾರೆ ಎಂದು ಗೊತ್ತಾಗಿದೆ. ಇಂಡಿಯಾ ಒಕ್ಕೂಟಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬಿಹಾರ ಉಸ್ತುವಾರಿ ಭೂಪೇಶ್ ಬಘೇಲ್ ಕೂಡ ಮಾಂಝಿ ಭೇಟಿಗೆ ಯತ್ನಿಸ್ತಿದ್ದಾರೆ. ಅಲ್ಲದೆ, ಬಿಜೆಪಿಯ 20 ಶಾಸಕರನ್ನ ಸೆಳೆಯುವ ಯತ್ನವನ್ನ ಕಾಂಗ್ರೆಸ್​​ ನಡೆಸಿದೆ ಎಂದು ಹೇಳಲಾಗಿದೆ. ಒಟ್ಟಾರೆ, ಗಳಸ್ಯ ಕಂಟಸ್ಯರಂತಿದ್ದ ನಿತೀಶ್​-ಲಾಲೂ ಮಧ್ಯೆ ಮತ್ತೆ ಬಿರುಕು ಮೂಡಿದ್ದು, ಬಿಹಾರದ ರಾಜಕಾರಣ ಕುತೂಹಲದ ಘಟ್ಟಕ್ಕೆ ತಂದು ನಿಲ್ಲಿಸಿದೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ನಡೆದ ಈ ಬೆಳವಣಿಗೆ ಇಂಡಿಯಾ ಕೂಟಕ್ಕೆ ದೊಡ್ಡ ಹೊಡೆತ ಎಂದೇ ಭಾವಿಸಲಾಗ್ತಿದೆ. ನಿತೀಶ್​​ ಆಟವನ್ನೇ ಎಲೆಕ್ಷನ್​​ನಲ್ಲಿ ಅನುಕಂಪವಾಗಿ ಬಳಸಲು ಕಾಂಗ್ರೆಸ್​ ಮತ್ತು ಆರ್​ಜೆಡಿ ಬಳಸಿಕೊಳ್ಳುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದೇ ರಾಜೀನಾಮೆ.. ಇಂದೇ ಪ್ರಮಾಣ ವಚನ; ಹೊಸ ದಾಖಲೆ ಬರೆಯಲು ಸಜ್ಜಾದ CM ನಿತೀಶ್ ಕುಮಾರ್‌!

https://newsfirstlive.com/wp-content/uploads/2024/01/bihar-3-1.jpg

Load More