/newsfirstlive-kannada/media/post_attachments/wp-content/uploads/2024/06/renukaswamy2.jpg)
ಸಾಮಾನ್ಯವಾಗಿ ನಮಗೆ ಯಾವುದಾದರೂ ವಿಚಾರದ ಬಗ್ಗೆ ಗೊತ್ತಾಗಬೇಕು ಅಂದ್ರೆ ತಕ್ಷಣ ನಾವು ಗೂಗಲ್ಗೆ ಹೋಗಿ ಹುಡುಕುತ್ತೀವಿ. ಆದ್ರೆ ಯಾವುದಾದ್ರೂ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕೆಂದ್ರೆ ನಾವು ತಟ್ ಅಂತ ವಿಕ್ಕೀಪೀಡಿಯಾ ಓಪನ್ ಮಾಡುತ್ತೇವೆ. ಇದು ನಮಗೂ ನಿಮಗೂ ಸಾಮಾನ್ಯಾನೇ. ಆದ್ರೆ ಇದೀಗ ಫೇಮಸ್ ವ್ಯಕ್ತಿಗಳು, ಘಟನೆ ಹಾಗೂ ಐತಿಹಾಸಿಕ ಸಂಗತಿಗಳ ಬಗ್ಗೆ ಮಾತ್ರ ಓದೋಕೆ ಸಿಗ್ತಾ ಇತ್ತು.
ಇದನ್ನೂ ಓದಿ:ಜೈಲಲ್ಲಿ ದರ್ಶನ್‌ಗೆ ಸಂಕಷ್ಟಗಳ ಸರಮಾಲೆ.. ಸೆರೆವಾಸದಲ್ಲಿ ಚಿಂತಾಕ್ರಾಂತನಾದ ಸಾರಥಿ ಮಾಡ್ತಿರೋದೇನು?
ಆದ್ರೆ ಇದೀಗ ಇಡೀ ರಾಜ್ಯದ ಜೊತೆಗೆ ದೇಶದಲ್ಲೇ ಸದ್ದು, ಸುದ್ದಿ ಮಾಡಿರೋ ರೇಣುಕಾಸ್ವಾಮಿ ಕೊಲೆ ಕೇಸ್ ಕೂಡ ವಿಕಿಪೀಡಿಯಾದಲ್ಲಿ ಲಭ್ಯವಾಗ್ತಾ ಇದೆ. ಹೌದು, ಇಡೀ ದೇಶದಲ್ಲೇ ಸೆನ್ಷೇಷನ್ ಅನಿಸಿಕೊಂಡ ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಒಂದು ವಿಕಿಪೀಡಿಯ ಪೇಜ್ ಕ್ರಿಯೇಟ್ ಮಾಡಲಾಗಿದೆ. ಯಾವಾಗ ಈ ಸುದ್ದಿ ಕಾಡ್ಗಿಚ್ಚಿನ ರೀತಿಯಲ್ಲಿ ಹಬ್ಬಿತೋ ಜೊತೆಗೆ ನಟ ದರ್ಶನ್ ಮಾಡಿದ್ದ ಕೊಲೆ ಎನ್ನಲಾದ ಕೇಸ್ ಹಿನ್ನಲೆ ಈ ಸುದ್ದಿ ಸಾಕಷ್ಟು ಸೌಂಡ್ ಮಾಡಿತ್ತು. ಹಾಗೂ ಇದನ್ನು ಯಾರೋ ಇಂಟರ್ನೆಟ್ ಬಳಕೆದಾರರು ಸೃಷ್ಟಿ ಮಾಡಿರೋದಲ್ಲ. ಬದಲಾಗಿ ರೇಣುಕಾಸ್ವಾಮಿಯ ಸಂಪೂರ್ಣ ಮಾಹಿತಿ ಕಲೆ ಹಾಕಿ ಇದನ್ನು ಸ್ವತಃ ವಿಕಿಪೀಡಿಯಾನೇ ಕ್ರಿಯೇಟ್ ಮಾಡಿದ್ದಾಗಿದೆ. MURDER OF RENUKASWAMY ಹೆಸರಿನಲ್ಲಿ ವಿಕಿಪಿಡಿಯಾ ಪೇಜ್ ಓಪನ್ ಮಾಡಲಾಗಿದೆ.
ಈ ರೀತಿಯಾಗಿ ಆ ಪೇಜ್ ತೆರೆದುಕೊಳ್ಳುತ್ತದೆ. ಇದರಲ್ಲಿ ರೇಣುಕಾಸ್ವಾಮಿ ದರ್ಶನ್ Darshan's long time partner ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡ್ತಿದ್ದ. ಈತನನ್ನು ದರ್ಶನ್ ಜೊತೆ ಕೆಲಸ ಮಾಡುವ ಹುಡುಗರು ಕೊಲೆ ಮಾಡಿದ್ದಾರೆ ಅಂತ ಉಲ್ಲೇಖ ಮಾಡಲಾಗಿದೆ. ಹಾಗೂ ಈತನ ಸಾವಿನ ಕಾರಣ ಎಂದರೆ ಶಾಕ್ ಹಾಗೂ ಮಾರಣಾಂತಿಕ ಹಲ್ಲೆ ಅಂತ ಹೇಳಲಾಗಿದೆ. ಈಗ ಎಲ್ಲಾ ಕಡೆ ಸದ್ದು ಮಾಡ್ತಾ ಇರೋ ಈ ಕೇಸ್ ಬಗ್ಗೆ ಇದಲ್ಲಿ ಏನು ವಿಶೇಷತೆ ಅಂತ ನೀವು ಅಂದುಕೊಳ್ಳಬಹುದು. ಆದ್ರೆ ಜಗತ್ತಿನಲ್ಲಿ ಈವರೆಗೂ ನಡೆದಿರೋ ಪ್ರಮುಖ ರಾಜಕೀಯ ನಾಯಕರ ಹತ್ಯೆ, ವಿಶ್ವದಲ್ಲಿ ನಡೆದಿರೋ ಅತೀ ಹೈಪ್ರೊಫೈಲ್ ಕೊಲೆಗಳು ಅಥವಾ ಅಪರಾಧಗಳು ಜೊತೆಗೆ ಇತಿಹಾಸದಲ್ಲಿ ನಡೆದ ಸೆನ್ಷೇಷನಲ್ ಕ್ರೈಂಗಳ ಬಗ್ಗೆ ಮಾತ್ರ ಉಲ್ಲೇಖ ಮಾಡ್ತಾ ಇದ್ದ ವಿಕಿಪೀಡಿಯ, ಇದೀಗ ನಮ್ಮ ರಾಜ್ಯದ ರೇಣುಕಸ್ವಾಮಿ ಕೊಲೆಯನ್ನು ಅದರಲ್ಲಿ ಪಟ್ಟಿ ಮಾಡಿ, ಅಪ್ಲೋಡ್ ಮಾಡಿರೋದು ಅತೀ ವಿರಳಾತಿವಿರಳ ಅಂತ ಹೇಳಬಹುದು.
ವಿಶೇಷ ವರದಿ: ರಾಹುಲ್ ದಯಾನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ