/newsfirstlive-kannada/media/post_attachments/wp-content/uploads/2024/06/tmk-death.jpg)
ತುಮಕೂರು: ವಿವಾಹಿತ ಪುರುಷನ ಪ್ರೇಮ ಪಾಶಕ್ಕೆ ಸಿಲುಕಿದ 19ರ ಯುವತಿ ದಾರುಣ ಅಂತ್ಯ ಕಂಡಿದ್ದಾಳೆ. 45 ವರ್ಷದ ವ್ಯಕ್ತಿ ಪ್ರೀತಿಸಿದ ಹುಡುಗಿಯನ್ನು ಯಮಲೋಕಕ್ಕೆ ಕರೆದುಕೊಂಡು ಹೋದ ಘಟನೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆ ಬಳಿ ನಡೆದಿದೆ.
ನಿನ್ನೆ ಮಧ್ಯಾಹ್ನದ ಹೊತ್ತಿಗೆ ಮಾವತ್ತೂರು ಕೆರೆ ದಡದ ಬಳಿ ಹೋಗಿದ್ದವರಿಗೆ ಇಬ್ಬರ ಚಪ್ಪಲಿಗಳು ಕಂಡಿದೆ. ಇವರಿಬ್ಬರು ಮಾವತ್ತೂರು ಕೆರೆ ಬಳಿಯ ಮಾವತ್ತೂರಮ್ಮ ದೇವಾಲಯದ ಬಳಿ ಕಾರು ನಿಲ್ಲಿಸಿ ಮೊಬೈಲ್‌ಗಳನ್ನು ಕಾರಲ್ಲಿಟ್ಟು, ಕೆರೆ ಏರಿಯ ಮೇಲೋಗಿದ್ದಾರೆ. ಆದರೆ ಅಲ್ಲಿ ಚಪ್ಪಲಿಗಳನ್ನು ಬಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ಕೆರೆಯ ಬಳಿ ವಾಕಿಂಗ್ ಬಂದವರಿಗೆ ಈ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ಬಂದಿದೆ. ಕೂಡಲೇ ಕೋಳಾಲ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದರು.
ಇದನ್ನೂ ಓದಿ: ‘ರೇಣುಕಾಸ್ವಾಮಿ ನನಗೂ ಆ ಫೋಟೋ ಕಳುಹಿಸಿದ್ದ’- ಸಾಕ್ಷಿ ಸಮೇತ ಶಾಕಿಂಗ್ ವಿಷ್ಯ ಬಿಚ್ಚಿಟ್ಟ ನಟಿ ಚಿತ್ರಾಲ್!
ಮೂರು ದಿನಗಳ ಹಿಂದೆ ವಿವಾಹಿತ ಪುರುಷ, ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾಗಿದ್ದರು. ಆದರೆ ಇಬ್ಬರ ಕುಟುಂಬಸ್ಥರು ಯಾರು ಸಹ ದೂರು ನೀಡಿರಲಿಲ್ಲ. ನಿನ್ನೆ ಕೆರೆ ಬಳಿ ನಿಂತಿದ್ದ ಕಾರು ನೋಡಿ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆ ಇಬ್ಬರು ಮಾವತ್ತೂರು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಈ ಇಬ್ಬರ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದೆ. ಪದವಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿ ವಿವಾಹಿತ ಪುರುಷನೊಂದಿಗೆ ಪ್ರೇಮಾಂಕುರವಾಗಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ಅನನ್ಯಾ (19) ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ (45) ಕಳೆದ 3 ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು.
ಇವರಿಬ್ಬರ ಪ್ರೀತಿಗೆ ಕುಟುಂಬದವರ ವಿರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ವಿದ್ಯಾರ್ಥಿನಿ ಅನನ್ಯ ಮನೆಯವರು ಹೇಳುತ್ತಿರುವುದೇ ಬೇರೆ. ಇತ್ತೀಚಿಗೆ ನಡೆದ ಪದವಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದು ಆತ್ಮಹತ್ಯೆಗೆ ಕಾರಣ ಎಂದು ಹೇಳುತ್ತಿದ್ದಾರೆ. ಆದರೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದರೆ, ಮನನೊಂದು ಆಕೆ ಒಬ್ಬಳೇ ಆತ್ಮಹತ್ಯೆ ಮಾಡಿಕೊಳ್ಳ ಬೇಕಿತ್ತು. 45 ವರ್ಷದ ರಂಗಶಾಮಣ್ಣನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾದರು ಯಾಕೆ ಎನ್ನುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ದರ್ಶನ್ ಸಂಸಾರದಲ್ಲಿ ಮೊದಲು ಹುಳಿ ಹಿಂಡಿದ್ದೇ ಆ ನಟಿ; ಸ್ಫೋಟಕ ಹೇಳಿಕೆ ನೀಡಿದ ನಿರ್ಮಾಪಕ ಓಂ ಪ್ರಕಾಶ್
ವಿವಾಹಿತ ಪುರುಷನೊಂದಿಗೆ ಕಾಲೇಜು ವಿದ್ಯಾರ್ಥಿನಿ ಕಳೆದ 4 ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಇದು ಆತ್ಮಹತ್ಯೆಯೋ ಇಲ್ಲ ಕೊಲೆಯೋ ಅನ್ನೋ ಸತ್ಯ ಪೊಲೀಸ್ ತನಿಖೆಯಿಂದ ಹೊರ ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ