ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ಗೆ ಹೊಸ ಟ್ವಿಸ್ಟ್‌.. ಶಿವಮೊಗ್ಗ ನಗರದ ಬಿಜೆಪಿ ನಾಯಕನ ವಿಚಾರಣೆ

author-image
admin
Updated On
ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ಗೆ ಹೊಸ ಟ್ವಿಸ್ಟ್‌.. ಶಿವಮೊಗ್ಗ ನಗರದ ಬಿಜೆಪಿ ನಾಯಕನ ವಿಚಾರಣೆ
Advertisment
  • 10 ದಿನಗಳ ಹಿಂದಷ್ಟೇ ಶಿವಮೊಗ್ಗ, ತೀರ್ಥಹಳ್ಳಿಯ ಹಲವೆಡೆ NIA ದಾಳಿ
  • ಮೊಬೈಲ್ ಅಂಗಡಿಯ ಇಬ್ಬರು ಯುವಕರನ್ನ ವಿಚಾರಣೆ ನಡೆಸಿದ್ದ NIA
  • ಶಿವಮೊಗ್ಗದ ದಾಳಿ ವೇಳೆ ಸಿಕ್ಕ ದಾಖಲೆಗಳ ಆಧಾರದಲ್ಲಿ ಈ ವಿಚಾರಣೆ

ಶಿವಮೊಗ್ಗ: ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದ (NIA) ತನಿಖೆ ಮುಂದುವರಿದಿದೆ. ಶಂಕಿತ ಆರೋಪಿಯ ಸುಳಿವು ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಣೆ ಮಾಡಲಾಗಿದೆ. NIA ತನಿಖೆ ವೇಗವಾಗಿರುವಾಗ ಬ್ಲಾಸ್ಟ್‌ ಕೇಸ್‌ಗೆ ಸ್ಫೋಟಕ ತಿರುವು ಸಿಕ್ಕಿದೆ.

ಕಳೆದ 10 ದಿನಗಳ ಹಿಂದಷ್ಟೇ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಎನ್ಐಎ ದಾಳಿ ಮಾಡಿತ್ತು. ಬೆಳ್ಳಂಬೆಳಗ್ಗೆ ರೇಡ್ ಮಾಡಿದ ತನಿಖಾ ಅಧಿಕಾರಿಗಳು ಹಲವು ಮನೆ ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಶಿವಮೊಗ್ಗದ ದಾಳಿ ವೇಳೆ ಸಿಕ್ಕ ದಾಖಲೆಗಳ ಆಧಾರದಲ್ಲಿ ಎನ್‌ಐಎ ಅಧಿಕಾರಿಗಳು ತೀರ್ಥಹಳ್ಳಿಯ ಓರ್ವನಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದೆ. ತೀರ್ಥಹಳ್ಳಿಯ ಬಿಜೆಪಿಯ ಘಟಕದ ಮುಖಂಡನನ್ನು ಎನ್‌ಐಎ ವಿಚಾರಣೆಗೆ ಕರೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಹಿಂದೂ ಹೆಸರು ಹೇಳಿಕೊಂಡು ಓಡಾಟ.. ಮಹತ್ವದ ಘಟ್ಟ ತಲುಪಿದ ರಾಮೇಶ್ವರಂ ಕೆಫೆ ಕೇಸ್ ತನಿಖೆ​..!


">April 5, 2024

ಈ ಹಿಂದೆ ಮೊಬೈಲ್ ಅಂಗಡಿಯ ಇಬ್ಬರು ಯುವಕರನ್ನ ಎನ್‌ಐಎ ಅಧಿಕಾರಿಗಳ ತಂಡ ವಿಚಾರಣೆ ನಡೆಸಿತ್ತು. ಆ ಹುಡುಗರ ಜೊತೆ ಬಿಜೆಪಿ ನಗರ ಘಟಕದ ನಾಯಕನ ಜೊತೆ ಸಂಪರ್ಕ ಇದ್ದ ಕಾರಣ ಎನ್‌ಐಎ ವಿಚಾರಣೆಗೆ ಒಳಪಡಿಸುತ್ತಿದೆ. ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ ಶಂಕಿತನಿಗಾಗಿ ಹುಡುಕಾಟ ನಡೆಸುತ್ತಿರುವಾಗ ಶಿವಮೊಗ್ಗದ ಬಿಜೆಪಿ ನಾಯಕನನ್ನು ವಿಚಾರಣೆ ನಡೆಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment