newsfirstkannada.com

ಬೆಂಗಳೂರು PG ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಕೊಲೆಗಾರ ಯಾರು? ಆಗಿದ್ದೇನು?

Share :

Published July 24, 2024 at 1:43pm

    ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ

    ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸಾವು

    ರೂಮ್‌ನಲ್ಲಿ ಯುವತಿ ಕತ್ತು ಕೊಯ್ದು ಚಾಕುವಿನಿಂದ ಹಿರಿದು ಕೊಂದ ಹಂತಕ

ಬೆಂಗಳೂರು: ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ 11.10 ರಿಂದ 11.30 ಸುಮಾರಿಗೆ ಯುವತಿಯ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಮೃತ ಯುವತಿಯನ್ನು ಬಿಹಾರ ಮೂಲದ ಕೃತಿ ಕುಮಾರಿ ಎಂದು ಗುರುತಿಸಲಾಗಿದೆ. ಕೋರಮಂಗಲದ ವಿ.ಆರ್ ಲೇಔಟ್‌ನಲ್ಲಿ ಲೇಡಿಸ್‌ ಪಿಜಿಯಲ್ಲಿ ಈ ಘಟನೆ ನಡೆದಿದೆ.

ಬಿಹಾರದಿಂದ ಬಂದಿದ್ದ ಕೃತಿ ಕುಮಾರಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ 11.10ಕ್ಕೆ ಲೇಡಿಸ್ ಪಿಜಿಯೊಳಗೆ ಚಾಕುವಿನ ಜೊತೆಗೆ ಯುವಕನೊಬ್ಬ ಆಗಮಿಸಿದ್ದಾನೆ. ಮೂರನೇ ಮಹಡಿಯಲ್ಲಿರುವ ರೂಮ್‌ನಲ್ಲಿ ಯುವತಿಯ ಕತ್ತು ಕೊಯ್ದು ಚಾಕುವಿನಿಂದ ಹಿರಿದು ಹತ್ಯೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಯುವತಿ ಕೃತಿ ಕುಮಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ನಟ ಡಾಲಿ ಧನಂಜಯ್ ಅವರ ಪ್ರೀತಿಯ ಅಜ್ಜಿ ಮಲ್ಲಮ್ಮ ನಿಧನ 

ಕೊಲೆಯಾದ ಲೇಡಿಸ್ ಪಿಜಿಗೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯ ಪತ್ತೆ ಕಾರ್ಯ ಕೈಗೊಂಡಿದ್ದೇವೆ. ಪಿಜಿ ಮಾಲೀಕರ ನಿರ್ಲಕ್ಷ್ಯವೇ ಘಟನೆಗೆ ಪ್ರಮುಖ ಕಾರಣವಾಗಿದೆ. ಪರಿಚಯಸ್ಥ ಯುವಕನಿಂದಲೇ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದಿದ್ದಾರೆ.

ಕೃತಿ ಮೊಬೈಲ್‌ನಲ್ಲಿ ಕೊಲೆಗಾರನ ಸುಳಿವು
ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಯುವತಿ ಕೃತಿ ಕುಮಾರಿ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಆಕೆಯ ಕಾಲ್ ಡಿಟೈಲ್ಸ್ ಹಾಗೂ ಸಿಡಿಆರ್ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಕೊನೆಯದಾಗಿ ಕೃತಿ ಕುಮಾರಿ ಯಾರಿಗೆ ಕಾಲ್ ಮಾಡಿದ್ದರು. ಯಾವ, ಯಾವ ನಂಬರ್‌ನಿಂದ ಈಕೆಗೆ ಕಾಲ್ ಬಂದಿದೆ. ಇದರ ಜೊತೆಗೆ ಪಿಜಿಯ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕೊನೆಯದಾಗಿ ಕೊಲೆಯಾದ ಯುವತಿ ಎಲ್ಲಿ ಹೋಗಿದ್ದಾಳೆ ಎನ್ನುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೊಲೆಗಾರನ ಬಂಧನಕ್ಕೆ ಕೋರಮಂಗಲ ಪೊಲೀಸರು ಮೂರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.

ಪಿಜಿಗೆ ಯುವತಿ ಬಂದಿದ್ದು ಯಾವಾಗ?
ಕಳೆದ ಎರಡು ದಿನದ ಹಿಂದಷ್ಟೇ ಈ ಯುವತಿ ಕೋರಮಂಗಲದ ಪಿಜಿಗೆ ಬಂದಿದ್ದರು. ನಿನ್ನೆ ಲೆಗೇಜ್ ತೆಗೆದುಕೊಂಡು ಒಬ್ಬ ಯುವಕ ಬಂದಿದ್ದ. ಈ ವೇಳೆ ಯುವಕನನ್ನು ಒಳ ಬಿಡುವುದಿಲ್ಲ ಎಂದು ಪಿಜಿ ಸೆಕ್ಯೂರಿಟಿ ಹೇಳಿದ್ದರಂತೆ. ಸೆಕ್ಯೂರಿಟಿ ಬಳಿ ಈ ವ್ಯಕ್ತಿ ನನ್ನ ಸಹೋದರ. ಬೇಗ ಕಳುಹಿಸುತ್ತೇನೆ ಎಂದು ಯುವತಿ ಪಿಜಿ ಒಳಗೆ ಕರೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ನೇಪಾಳದಲ್ಲಿ ವಿಮಾನ ದುರಂತ.. 18 ಮಂದಿ ದಾರುಣ ಸಾವು; ಬೆಚ್ಚಿ ಬೀಳಿಸಿದೆ ಪತನದ ಭಯಾನಕ ವಿಡಿಯೋ 

ಕೊಲೆಗೆ ಕಾರಣವೇನು?
ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತ ಅವರ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ರಾತ್ರಿ 12 ಗಂಟೆ ಸುಮಾರಿಗೆ ಪೊಲೀಸರಿಗೆ ಈ ವಿಚಾರ ಗೊತ್ತಾಗಿದೆ. ತಕ್ಷಣವೇ ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆಕೆ ಮೂಲತಃ ಬಿಹಾರದವರು ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಪೊಲೀಸರು ತನಿಖೆ ಮಾಡ್ತಿದ್ದಾರೆ ಯಾವ ಕಾರಣಕ್ಕೆ ಕೊಲೆಯಾಗಿದೆ ಅನ್ನೋದು ಗೊತ್ತಾಗಬೇಕು. ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು PG ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಕೊಲೆಗಾರ ಯಾರು? ಆಗಿದ್ದೇನು?

https://newsfirstlive.com/wp-content/uploads/2024/07/Bangalore-PG-Murder.jpg

Load More