ಪಿಜಿಯಲ್ಲಿ ವಿಜಯಪುರ ಯುವತಿ ಕೇಸ್​​ಗೆ ಟ್ವಿಸ್ಟ್! ಜೀವ ಕಳೆದುಕೊಳ್ಳಲು ನಿಜವಾದ ಕಾರಣ ಬಹಿರಂಗ

author-image
Gopal Kulkarni
Updated On
ಪಿಜಿಯಲ್ಲಿ ವಿಜಯಪುರ ಯುವತಿ ಕೇಸ್​​ಗೆ ಟ್ವಿಸ್ಟ್! ಜೀವ ಕಳೆದುಕೊಳ್ಳಲು ನಿಜವಾದ ಕಾರಣ ಬಹಿರಂಗ
Advertisment
  • ಬೆಳಗಾವಿ ಪಿಜಿಯಲ್ಲಿ ವಿಜಯಪುರ ಯುವತಿ ಕೇಸ್​​ಗೆ ಟ್ವಿಸ್ಟ್
  • ಮೊಬೈಲ್, ಡೆತ್​ ನೋಟ್ ಜೊತೆಗೆ ಪರಾರಿಯಾಗಿದ್ದವ ಲಾಕ್​
  • ನನ್ನ ಸಾವಿಗೆ ನೀನೇ ಕಾರಣ, ಡೆತ್​ನೋಟ್ ಬರೆದಿದ್ದ ಯುವತಿ

ಬೆಳಗಾವಿಯ ಪಿಜಿಯಲ್ಲಿ ವಿಜಯಪುರ ಯುವತಿ ಆತ್ಮಹತ್ಯೆಗೆ ಶರಣಾಗಿದ್ದ ಕೇಸ್​​ಗೆ ಟ್ವಿಸ್ಟ್ ಸಿಕ್ಕಿದೆ.. ಆತ್ಮಹತ್ಯೆಗೆ ಲವ್ ಬ್ರೇಕ್ ಅಪ್ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಇನ್ನೂ ಮೃತ ಯುವತಿಯ ಫೋನ್ ಹಾಗೂ ಡೆತ್ ನೋಟ್ ಜೊತೆಗೆ ಪರಾರಿಯಾಗಿದ್ದ ಪ್ರೇಮಿಯೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆಕೆ ಹೆಸರು ಐಶ್ವರ್ಯಲಕ್ಷ್ಮೀ. ಬೆಳಗಾವಿಯಲ್ಲಿ ಒಳ್ಳೆ ಬದುಕು ಕಟ್ಕೋಬೇಕು ಅಂತ ಕನಸುಹೊತ್ತು ಬಂದಿದ್ದ ಯುವತಿ. ವಿಜಯಪುರ ಮೂಲದ ಎಂಬಿಎ ಪದವೀಧರೆ ಐಶ್ವರ್ಯ ಬೆಳಗಾವಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆದ್ರೆ ಪಿಜಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದ ಐಶ್ವರ್ಯಲಕ್ಷ್ಮೀಯ ಸಾವು ಹಲವು ಅನುಮಾನಕ್ಕೆ ಕಾರಣವಾಗಿತ್ತು. ಯುವತಿ ಆತ್ಮಹತ್ಯೆ ಮಾಡಿಕೊಂಡಾಗ ಆಕೆಯ ಪ್ರಿಯಕರ ಪಿಜಿಗೆ ಭೇಟಿ ನೀಡಿದ್ದು ಪೊಲೀಸರ ನಿದ್ದೆಗೆಡಿಸಿತ್ತು.

ಇದನ್ನೂ ಓದಿ:ಪತ್ನಿ ಕೊಂದು ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಬೆಂಗಳೂರಿಗೆ ವಾಪಸ್‌; ರಾಕೇಶ್‌ ತಂದೆ ಬಿಚ್ಚಿಟ್ರು ಇಂಚಿಂಚೂ ಮಾಹಿತಿ!

ಐಶ್ವರ್ಯ ಹಾಗೂ ಆಕಾಶ್​ ಇಬ್ಬರು ಒಂದೇ ಕಾಲೇಜಿನಲ್ಲಿ ಎಂಬಿಎ ಓದಿದ್ದು, ಇಬ್ಬರು ಪರಸ್ಪರ ಪ್ರೀತಿ ಮಾಡ್ತಿದ್ರು.ಇತ್ತೀಚಿಗೆ ಆಕಾಶ ಬೇರೆ ಯುವತಿಯ ಜೊತೆಗೆ ಲವ್ವಿಡವ್ವಿಯಲ್ಲಿ ಬಿದ್ದಿದ್ನಂತೆ.. ಇದು ಐಶ್ವರ್ಯಲಕ್ಷ್ಮಿಗೆ ಗೊತ್ತಾಗಿ ಆಕೆ ಜಗಳ ಮಾಡಿದ್ಳಂತೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಐಶ್ವರ್ಯ, ಆಕಾಶ್​ ಜೊತೆಗೆ ಜಗಳ ಸಹ ಮಾಡಿದ್ದಳಂತೆ. ಬಳಿಕ ಪಿಜಿ ರೂಂನಲ್ಲಿ ಐಶ್ವರ್ಯ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವೇಳೆಯಲ್ಲಿ ಗುಡ್ ಬೈಯ್​, ನನ್ನ ಸಾವಿಗೆ ಆಕಾಶ್​ ಕಾರಣ ಎಂದು ಡೆತ್ ನೋಟ್ ಸಹ ಬರೆದಿಟ್ಟಿದ್ದಳಂತೆ.

publive-image

ಐಶ್ವರ್ಯಲಕ್ಷ್ಮೀ ಫೋನ್ ಸ್ವಿಚ್ಛ್ ಆಫ್ ಮಾಡಿರೋದು ಕಂಡು ಆಕಾಶ್​​ ಕಂಗಾಲಾಗಿದ್ದು, ಧೀಢೀರನೆ ಪಿಜಿಗೆ ಎಂಟ್ರಿಕೊಟ್ಟು, ಬಾಗಿಲು ಮುರಿದು ರೂಮ್​​ ಪ್ರವೇಶ ಮಾಡಿದ್ದ. ಈ ವೇಳೆಯಲ್ಲಿ ಐಶ್ವರ್ಯಲಕ್ಷ್ಮೀ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ. ತಕ್ಷಣವೇ ಆಕಾಶ್​ ಮೊಬೈಲ್ ಹಾಗೂ ಡೆತ್ ನೋಟ್ ಜೊತೆಗೆ ಸ್ಥಳದಿಂದ ಪರಾರಿಯಾಗಿದ್ದ. ಆದರೇ ಆಕಾಶ್​​ ಪಿಜಿಗೆ ಭೇಟಿ ನೀಡಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ಬಗ್ಗೆ ದೂರು ದಾಖಲಿಸಿಕೊಂಡ ಎಪಿಎಂಸಿ ಪೊಲೀಸರು ತನಿಖೆ ಶುರು ಮಾಡಿದ್ರು.

publive-image

ಐಶ್ವರ್ಯ ಪಿಜಿಯಿಂದ ಎಸ್ಕೇಪ್ ಆಗಿದ್ದ ಆಕಾಶ್​ನ ಜಾಡನ್ನ ಪತ್ತೆ ಹಚ್ಚಿದ ಪೊಲೀಸರು ಕೊನೆಗೂ ಆತನನ್ನ ಲಾಕ್ ಮಾಡಿದ್ದಾರೆ.. ಆಕಾಶನನ್ನ ವಿಜಯಪುರದಲ್ಲಿ ಬಂಧಿಸಿರೋ ಪೊಲೀಸರು ಐಶ್ವರ್ಯಲಕ್ಷ್ಮಿ ಸಾವಿನ ಬಗ್ಗೆ ವಿಚಾರಣೆ ನಡೆಸಿದ್ದಾರೆ.. ಈ ವೇಳೆಯಲ್ಲಿ ಐಶ್ವರ್ಯಲಕ್ಷ್ಮೀ ಜೊತೆಗಿನ ಸ್ನೇಹದ ಬಗ್ಗೆ ಆಕಾಶ್​ ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾನೆ.. ಆಕೆ ಸಾವಿಗೆ ತಾನೇ ಕಾರಣ ಅನ್ನೋ ಸತ್ಯವನ್ನ ಪೊಲೀಸರ ಮುಂದೆ ಹೇಳಿದ್ದಾನೆ.

ಇದನ್ನೂ ಓದಿ:ನಟಿ ರನ್ಯಾ ರಾವ್‌ ಗೋಲ್ಡ್ ಕೇಸ್‌ಗೆ ಹೊಸ ಟ್ವಿಸ್ಟ್.. ಸರ್ಕಾರಕ್ಕೆ 230 ಪುಟಗಳ ತನಿಖಾ ವರದಿ ಸಲ್ಲಿಕೆ

ಪ್ರೀತಿ ಪ್ರೇಮ ಅಂತ ಆಕಾಶ್​ ಹಿಂದೆ ಬಿದ್ದ ಐಶ್ವರ್ಯ ಬಾರದ ಲೋಕಕ್ಕೆ ಪಯಣಿಸಿದ್ದಾಳೆ.. ಐಶ್ವರ್ಯಳನ್ನ ಕಳೆದುಕೊಂಡು ಪೋಷಕರು ಕಂಗಾಲಾಗಿದ್ದಾರೆ.. ಇನ್ನೂ ಈ ಪ್ರಕರಣದಲ್ಲಿ ಇಬ್ಬರಿಗೂ ಸ್ನೇಹಿತನಾಗಿರೋ ಮತ್ತೊಬ್ಬನ ಪಾತ್ರ ಇದೆ ಎನ್ನಲಾಗಿದೆ.. ಈ ಬಗ್ಗೆ ಎಪಿಎಂಸಿ ಪೊಲೀಸರು ತನಿಖೆ ನಡೆಸುತ್ತಿದ್ದು ಮತ್ತಷ್ಟು ಸತ್ಯ ಹೊರಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment