newsfirstkannada.com

BMTC ಬಸ್‌ನಲ್ಲಿ ಹಲ್ಲೆ ಮಾಡಿದ ಕೇಸ್‌ಗೆ ಹೊಸ ಟ್ವಿಸ್ಟ್; ಕಿರಿಕ್‌ ಮಾಡಿದ್ಯಾರು? ಕಂಡಕ್ಟರ್‌ಗೆ ಸಸ್ಪೆಂಡ್‌ ಶಿಕ್ಷೆ!

Share :

Published March 26, 2024 at 5:36pm

    ಬಸ್‌ನಲ್ಲಿ ಮೊದಲು ಮಹಿಳೆಯೇ ಕಂಡಕ್ಟರ್‌ಗೆ ಕಪಾಳ ಮೋಕ್ಷ ಮಾಡಿದ್ರಾ?

    ಬಟ್ಟೆ, ಕೂದಲು ಹಿಡಿದು ಎಳೆದಾಡಿ ನನ್ನನ್ನು ಕೈಯಿಂದ ಹೊಡೆದಿರುವ ಆರೋಪ

    ಕಂಡಕ್ಟರ್‌ ಕರ್ತವ್ಯದಲ್ಲಿದ್ದಾಗಲೇ ವಶಕ್ಕೆ ಪಡೆದ ಪೊಲೀಸರಿಂದ ವಿಚಾರಣೆ

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್‌ ಹಾಗೂ ಮಹಿಳೆ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಸ್‌ನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ ಕಂಡಕ್ಟರ್‌ ಅನ್ನು ಸಸ್ಪೆಂಡ್ ಮಾಡಲಾಗಿದ್ದು, ಕರ್ತವ್ಯದಲ್ಲಿದ್ದಾಗಲೇ ಸಿದ್ದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಂಬೂ ಸವಾರಿ ದಿಣ್ಣೆ ಘಟಕ ಡಿಪೋ 34ರಲ್ಲಿ ಕೆಲಸ ಮಾಡುತ್ತಿದ್ದ ಕಂಡಕ್ಟರ್ ಹೊನ್ನಪ್ಪ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ತನ್ಜಿಲಾ ಇಸ್ಮಾಯಿಲ್ ಎಂಬ ಮಹಿಳೆ ಬಿಳೇಕಳ್ಳಿಯಿಂದ ಶಿವಾಜಿನಗರಕ್ಕೆ ಹೊರಟಿದ್ದರು. ಬಿಳೇಕಳ್ಳಿ ಬಳಿ ಟಿಕೆಟ್ ಕೇಳಿದ್ದ ಯುವತಿಗೆ ಕಂಡಕ್ಟರ್ ಕೊಟ್ಟಿರಲಿಲ್ಲ. ಮತ್ತೆ ಡೈರಿ‌ ಸರ್ಕಲ್ ಬಳಿ ಟಿಕೆಟ್ ಕೇಳಿದಾಗ ಗಲಾಟೆ ಆಗಿದೆ. ಟಿಕೆಟ್ ಕೊಡ್ತಿನಿ‌ ಇರಿ ಎಂದಿದ್ದ ಕಂಡಕ್ಟರ್ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆ ಆಗಿದೆ. ಮಹಿಳೆಯು ಕಂಡಕ್ಟರ್‌ಗೆ ಕಪಾಳ ಮೋಕ್ಷ ಮಾಡಿದ್ದು, ಕಂಡಕ್ಟರ್ ತಿರುಗಿಸಿ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಮಹಿಳೆಯ ದೂರಿನಲ್ಲಿ ಏನಿದೆ?
ನಾನು ಇಂದು ಬೆಳಗ್ಗೆ ಇಂದು ಬೆಳಗ್ಗೆ 09-45ಕ್ಕೆ ಬಿಳೆಕಳ್ಳಿಯಿಂದ ಶಿವಾಜಿನಗರದ ರೂಟ್ ನಂ.368ರ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದೆ. ನಾನು ಬಸ್ ಕಂಡಕ್ಟರ್‌ಗೆ ಬಿಳೆಕಳ್ಳಿಯಿಂದ ಶಿವಾಜಿನಗರಕ್ಕೆ ಟಿಕೆಟ್ ನೀಡಲು ಕೇಳಿದೆ. ಆಗ ಕಂಡಕ್ಟರ್ ಕಾಯಲು ಹೇಳಿ ನೀಡಿರುವುದಿಲ್ಲ. ಮತ್ತೆ ಮತ್ತೆ ಕೇಳಿದರೂ ನೀಡಿರುವುದಿಲ್ಲ. ನಂತರ ನಾನು ಡೈರಿ ಸರ್ಕಲ್ ಹತ್ತಿರ ಮತ್ತೊಮ್ಮೆ ಟಿಕೆಟ್ ಕೇಳಲಾಗಿ ಟಿಕೆಟ್ ನೀಡದೆ ಕಾಯಲು ತಿಳಿಸಿರುತ್ತಾರೆ.
ಸುಮಾರು ಬೆಳಗ್ಗೆ 10-15 ಗಂಟೆಗೆ ನಾನು ಕಂಡಕ್ಟರ್ ಅವರ ಬಳಿ ಜೋರಾಗಿ ಟಿಕೆಟ್ ನೀಡಲು ಕೇಳಿದೆ. ಆಗಲು ಬಸ್ ಕಂಡಕ್ಟರ್ ಟಿಕೆಟ್ ನೀಡಿರುವುದಿಲ್ಲ.

ಇದನ್ನೂ ಓದಿ: ಬಿಎಂಟಿಸಿ ಬಸ್‌ನಲ್ಲಿ ಡಿಶುಂ, ಡಿಶುಂ.. ಕಪಾಳಕ್ಕೆ ಹೊಡೆದ ಮಹಿಳೆಗೆ ಕಂಡಕ್ಟರ್‌ ಹಿಗ್ಗಾಮುಗ್ಗ ಥಳಿತ- ವಿಡಿಯೋ

ನಂತರ ನಾನು ಬಸ್ ಡ್ರೈವರ್ ಅವರಿಗೆ ದೂರು ನೀಡುವುದಕ್ಕೆ ಪೊಲೀಸ್ ಸ್ಟೇಷನ್ ಬಳಿ ಬಸ್ ನಿಲ್ಲಿಸಲು ಹೇಳಿದೆ. ನನ್ನ ಬಳಿಗೆ ಕಂಡಕ್ಟರ್ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ನನ್ನ ಬಟ್ಟೆ ಹಿಡಿದು, ತಲೆ ಕೂದಲು ಎಳೆದು ಕೈಯಿಂದ ಮುಖಕ್ಕೆ ಹೊಡೆದಾಗ ಕಂಡಕ್ಟರ್‌ಗೆ ತಳ್ಳಿರುತ್ತೇನೆ. ನಂತರ ನಾನು ಮೊಬೈಲ್ ನಲ್ಲಿ ವಿಡಿಯೋ ಮಾಡಲು ಹೋದಾಗ ನನ್ನ ಕೈಯಿಂದ ಮೊಬೈಲ್ ಕಿತ್ತು ಕೆಳಗೆ ಬಿಸಾಕಿ ನಾವು ಇದೇ ಬಸ್ ರೂಟ್‌ನಲ್ಲಿ ದಿನಾ ಓಡಾಡುತ್ತೇವೆ ಮತ್ತೊಮ್ಮೆ ಇದೇ ಬಸ್‌ನಲ್ಲಿ ಬಂದರೆ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಹೇಳಿ ನನ್ನನ್ನು ವಿಲ್ಸನ್ ಗಾರ್ಡನ್ ಬಳಿ ಬಸ್ ನಿಲ್ಲಿಸಿ ನನ್ನನ್ನು ಕೆಳಗಿ ಇಳಿಸಿ ಹೋಗಿರುತ್ತಾರೆ.

ನಾನು ಬಸ್ ಟಿಕೆಟ್ ಕೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ನನ್ನ ಬಟ್ಟೆ ಹಿಡಿದು ಕೂದಲು ಹಿಡಿದು ಎಳೆದಾಡಿ ನನ್ನನ್ನು ಕೈಯಿಂದ ಹೊಡೆದಿರುವ ಬಿಎಂಟಿಸಿ ಬಸ್ ನಂ. ಕೆಎ-57-ಎಫ್-1602 ರೂಟ್ ನಂ.368 ನ ಕಂಡಕ್ಟರ್ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಮಹಿಳೆ ದೂರು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BMTC ಬಸ್‌ನಲ್ಲಿ ಹಲ್ಲೆ ಮಾಡಿದ ಕೇಸ್‌ಗೆ ಹೊಸ ಟ್ವಿಸ್ಟ್; ಕಿರಿಕ್‌ ಮಾಡಿದ್ಯಾರು? ಕಂಡಕ್ಟರ್‌ಗೆ ಸಸ್ಪೆಂಡ್‌ ಶಿಕ್ಷೆ!

https://newsfirstlive.com/wp-content/uploads/2024/03/BMTC.jpg

Load More