Advertisment

ದರ್ಶನ್ ರೀತಿ ಮದುವೆ ಆದ್ರೆ ತಪ್ಪೇನು? ಗಂಡನ ಡಿಮ್ಯಾಂಡ್‌ಗೆ ಹೆಂಡತಿ ಸಾವಿಗೆ ಶರಣು; ಆಗಿದ್ದೇನು?

author-image
admin
Updated On
ದರ್ಶನ್ ರೀತಿ ಮದುವೆ ಆದ್ರೆ ತಪ್ಪೇನು? ಗಂಡನ ಡಿಮ್ಯಾಂಡ್‌ಗೆ ಹೆಂಡತಿ ಸಾವಿಗೆ ಶರಣು; ಆಗಿದ್ದೇನು?
Advertisment
  • 5 ವರ್ಷದ ಹಿಂದೆ ಶ್ರೀಹರಿ ಜೊತೆ ಅನುಷಾ ಅದ್ಧೂರಿ ಮದುವೆ
  • ಡಿವೋರ್ಸ್‌ ಕೊಡುವಂತೆ ಹೆಂಡತಿಯನ್ನು ಪೀಡಿಸುತ್ತಿದ್ದ ಗಂಡ
  • ಅನುಷಾ, ಶ್ರೀಹರಿ ದಂಪತಿಗೆ ಎರಡು ವರ್ಷದ ಮಗು ಕೂಡ ಇದೆ

ಬೆಂಗಳೂರು: ಗಂಡನ ವರ್ತನೆಗೆ ಬೇಸತ್ತ ಹೆಂಡತಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ದಾರುಣ ಘಟನೆ ಹುಳಿಮಾವು ಸಮೀಪದ ಅಕ್ಷಯನಗರದಲ್ಲಿ ನಡೆದಿದೆ. ಅನುಷಾ ಸಾವಿಗೆ ಶರಣಾದ ಗೃಹಿಣಿ.

Advertisment

ಇದನ್ನೂ ಓದಿ: ಬೆಂಗಳೂರಲ್ಲಿ ಘೋರ ದುರಂತ.. ವಾಟ್ಸ್‌ಆ್ಯಪ್‌ ವಿಡಿಯೋ ಕಾಲ್‌ನಲ್ಲೇ ಬೆಂಕಿ ಹಚ್ಚಿಕೊಂಡ ಮಹಿಳೆ; ಕಾರಣವೇನು? 

ಅನುಷಾ ಅವರಿಗೆ 5 ವರ್ಷದ ಹಿಂದೆ ಶ್ರೀಹರಿ ಎಂಬಾತನ ಜೊತೆಗೆ ವಿವಾಹವಾಗಿತ್ತು. ಈ ದಂಪತಿಗೆ ಎರಡು ವರ್ಷದ ಮಗು ಕೂಡ ಇದೆ. ಗಂಡನ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಗಂಡ-ಹೆಂಡತಿ ಮಧ್ಯೆ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಅನುಷಾ ಬಾತ್ ರೂಂನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ.

publive-image

ಗಂಡನ ಜೊತೆ ಜಗಳ ಮಾಡುತ್ತಿದ್ದ ಅನುಷಾಗೆ ಶ್ರೀಹರಿ ಡಿವೋರ್ಸ್‌ ಕೊಡುವಂತೆ ಪೀಡಿಸುತ್ತಿದ್ದ. ಎರಡು ದಿನದ ಹಿಂದೆ ಅನುಷಾ, ಶ್ರೀಹರಿಗೆ ವಾಟ್ಸ್‌ಆ್ಯಪ್‌ ವಿಡಿಯೋ ಕಾಲ್ ಮಾಡಿದ್ದಾಳೆ. ಗಂಡ ಶ್ರೀಹರಿ ವಿಡಿಯೋ ಕಾಲ್‌ನಲ್ಲಿರುವಾಗಲೇ ಅನುಷಾ ಬೆಂಕಿ ಹಚ್ಚಿಕೊಂಡಿದ್ದಾಳೆ ಎನ್ನಲಾಗಿದೆ.

Advertisment

publive-image

ಅನುಷಾ ಪತಿ ನನಗೆ ಬೇರೆ ಸಂಬಂಧ ಇದೆ. ನನ್ನ ಬಿಟ್ಟು ಬಿಡು ಅಂತಿದ್ದನಂತೆ. ಮೂರು ತಿಂಗಳಿನಿಂದ ಡಿವೋರ್ಸ್ ಕೊಡುವಂತೆ ಪೀಡಿಸುತ್ತಿದ್ದ ಎಂದು ಮೃತಳ ಅಕ್ಕ ಉಷಾ ಹೇಳಿದ್ದಾರೆ. ಗಂಡನಿಗೆ ವಾಟ್ಸ್‌ಆ್ಯಪ್‌ ವಿಡಿಯೋ ಕಾಲ್ ಮಾಡುತ್ತಲೇ ಅನುಷಾ ಬೆಂಕಿ ಹಚ್ಚಿಕೊಂಡಿದ್ದಾರೆ. ಅನುಷಾ ಬೆಂಕಿ ಹಚ್ಚಿಕೊಳ್ಳೋದು ನೋಡಿದ್ರೂ ಶ್ರೀಹರಿ ಸುಮ್ಮನಾಗಿದ್ದ. ಅನುಷಾಳ ಕಾಪಾಡಬಹುದಿತ್ತು ಆದ್ರೂ ಕಾಪಾಡಿಲ್ಲ. ಸಾಯಲಿ ಅಂತಾನೇ ಸುಮ್ಮನೆ ಇದ್ದಾನೆ. ಮದುವೆ ಆದಾಗಿನಿಂದಲೂ ಚಿತ್ರಹಿಂಸೆ ನೀಡ್ತಾನೆ ಇದ್ದ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ, ಹುಡುಗಿ ಜೊತೆ ಸುತ್ತಾಡಿ.. ಪ್ರೇಮಿಗಳಿಗಾಗಿ ಎರಡು ದಿನ ಸಂಬಳ ಸಹಿತ ರಜೆ ಘೋಷಿಸಿದ ಕಂಪನಿ 

ಅನುಷಾ ತಂದೆ ಹೇಮಂತ್ ಅವರು ತನ್ನ ಅಳಿಯನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮಗಳ ಸಾವಿನ ಬಳಿಕ ಮಾತನಾಡಿರುವ ಅವರು ಶ್ರೀಹರಿ ನಟ ದರ್ಶನ್ ಎರಡನೇ ಮದುವೆ ಆಗಿದ್ದಾನೆ. ಅವರು ಸಂತೋಷವಾಗಿಲ್ವಾ. ನಾನು ಎರಡನೇ ಮದುವೆ ಆದ್ರೆ ತಪ್ಪೇನು ಎಂದು ಕೇಳುತ್ತಿದ್ದನಂತೆ ಎಂದು ಹೇಮಂತ್ ಹೇಳಿದ್ದಾರೆ. ಹುಳಿಮಾವು ಠಾಣೆಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment